ಮಂಗಳವಾರ, ನವೆಂಬರ್ 29, 2022
29 °C
ಸಾಮಾನ್ಯ ಜ್ಞಾನ

ಮಾದರಿ ಪ್ರಶ್ನೋತ್ತರ| ನಿಮಗಿದು ಗೊತ್ತೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಪಿಎಸ್‌ಸಿ ಗ್ರೂಪ್‌ ‘ಸಿ’ಯ ವಿವಿಧ ಹುದ್ದೆಗಳು, ಕೆಎಸ್‌ಆರ್‌ಪಿ ಆ್ಯಂಡ್‌ ಐಆರ್‌ಬಿಯ ಸಬ್ಇನ್‌ಸ್ಪೆಕ್ಟರ್ ಹಾಗೂ ಕೆಎಸ್‌ಐಎಸ್‌ಎಫ್‌ನ ಸಬ್ ಇನ್‌ಸ್ಪೆಕ್ಟರ್ ಹುದ್ದೆಗಳ ನೇಮಕಾತಿಗಾಗಿ ಶೀಘ್ರದಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯಲಿವೆ. ಈ ಮೂರು ಪರೀಕ್ಷೆಗಳಲ್ಲಿರುವ ‘ಸಾಮಾನ್ಯ ಜ್ಞಾನ’ ವಿಷಯಕ್ಕೆ ಸಂಬಂಧಿಸಿದ ಮಾದರಿ ಪ್ರಶ್ನೋತ್ತರಗಳನ್ನು ಇಲ್ಲಿ ನೀಡಲಾಗಿದೆ.

1) ಚಿರತೆ ಮತ್ತು ಚೀತಾ ನಡುವಿನ ವ್ಯತ್ಯಾಸಗಳನ್ನು ಗುರುತಿಸಿ

1. ಚಿರತೆಗಳು ತಮ್ಮ ಕಣ್ಣುಗಳಲ್ಲಿ ಹೆಚ್ಚಿನ ಸಂಖ್ಯೆಯ ಬೆಳಕಿನ ಸಂವೇದನಾಶೀಲ ಕೋಶಗಳನ್ನು ಹೊಂದಿವೆ ಹಾಗೂ ಕಣ್ಣಿನ ಪಾಪೆ ಕೂಡ ದೊಡ್ಡದಾಗಿದೆ. ಇದರಿಂದ ಚಿರತೆಗಳಿಗೆ ರಾತ್ರಿ ವೇಳೆಯೂ ಕಣ್ಣು ಚೆನ್ನಾಗಿ ಕಾಣಿಸುತ್ತದೆ. ಅವು ಕತ್ತಲೆಯಲ್ಲಿ ಚಲನೆ ಮತ್ತು ಆಕಾರವನ್ನು ಗುರುತಿಸಿ ಸುಲಭವಾಗಿ ಬೇಟೆಯಾಡುತ್ತವೆ. ಆದರೆ ಚೀತಾಗಳಿಗೆ ರಾತ್ರಿ ವೇಳೆ ಅಷ್ಟಾಗಿ ಕಣ್ಣು ಕಾಣುವುದಿಲ್ಲ ಹೀಗಾಗಿ ರಾತ್ರಿ ವೇಳೆ ಬೇಟೆ ಆಡುವುದಿಲ್ಲ.

2. ಚೀತಾಗಳು ಅತ್ಯಂತ ವೇಗವಾಗಿ ಓಡುವ ಪ್ರಾಣಿಗಳಾಗಿವೆ. ಅವು ಗಂಟೆಗೆ 120 ಕಿ.ಮೀ ವೇಗದಲ್ಲಿ ಓಡುತ್ತವೆ. ಆದರೆ ಚಿರತೆಗಳು 58 ಕಿ.ಮೀ ವೇಗದಲ್ಲಿ ಓಡುತ್ತವೆ.

3. ಚೀತಾ ಕಾಲುಗಳು ಚಿರತೆ ಕಾಲುಗಳಿಂತಲೂ ಉದ್ದ ಇವೆ.

4. ಚೀತಾಗಳು ಗಾತ್ರದಲ್ಲಿ ಚಿರತೆಗಳಿಗಿಂತ ದೊಡ್ಡದಾಗಿವೆ, ಆದರೆ ಇವು ಚಿರತೆಯಷ್ಟು ಬಲಶಾಲಿಯಾಗಿಲ್ಲ.

ಉತ್ತರ ಸಂಕೇತಗಳು

ಎ)1, 2 ಮತ್ತು 3ನೇ ಹೇಳಿಕೆ ಮಾತ್ರ ಸರಿಯಾಗಿದೆ.

ಬಿ 2, 3 ಮತ್ತು 4ನೇ ಹೇಳಿಕೆ ಮಾತ್ರ ಸರಿಯಾಗಿದೆ.

ಸಿ)1ಮತ್ತು 3ನೇ ಹೇಳಿಕೆ ಮಾತ್ರ ಸರಿಯಾಗಿದೆ

ಡಿ)1ರಿಂದ 4ರವರೆಗೆ ಎಲ್ಲ ಹೇಳಿಕೆಗಳು ಸರಿಯಾಗಿವೆ

ಉತ್ತರ: ಡಿ

2) ರೆಡಾರ್‌ಗಳನ್ನು ಕಣ್ಣು ತಪ್ಪಿಸಿ ಸಂಚರಿಸುವ ಸಾಮರ್ಥ್ಯವುಳ್ಳ ಭಾರತೀಯ ನೌಕಾಪಡೆಯ ಸ್ಟೆಲ್ಥ್ ಫ್ರಿಗೇಟ್ ನೌಕೆಯಾದ ತಾರಾಗಿರಿಯನ್ನು ಅರಬ್ಬಿ ಸಮುದ್ರದಲ್ಲಿ ನೀರಿಗೆ ಇಳಿಸಲಾಗಿದೆ. ಇದು ನೀರಿಗಿಳಿಯುತ್ತಿರುವ (ಇದೇ ಮಾದರಿಯ) ಮೂರನೇ ನೌಕೆಯಾಗಿದೆ. ಹಾಗಾದರೆ ಇದೇ ಮಾದರಿಯ ಮೊದಲ ನೌಕೆಯ ಹೆಸರೇನು?
ಎ) ಉದಯಗಿರಿ, ಬಿ) ಹೇಮಗಿರಿ ಸಿ) ನೀಲಗಿರಿ ಡಿ) ರಾಜಗಿರಿ

ಉತ್ತರ: ಸಿ

3) ರಾಜ್ಯ ಮಾನವ ಹಕ್ಕುಗಳ ಆಯೋಗವು ಸಜಾ ಬಂಧಿಗಳು ಹಾಗೂ ವಿಚಾರಣಾಧೀನ ಕೈದಿಗಳ ಆರೋಗ್ಯ ರಕ್ಷಣೆಗಾಗಿ ಹಲವಾರು ಶಿಫಾರಸುಗಳನ್ನು ಮಾಡಿವೆ. ಆ ಹಿನ್ನೆಲೆಯಲ್ಲಿ ಕೆಳಗಿನ ಹೇಳಿಕೆಗಳನ್ನು ಗಮನಿಸಿ

1) ಎಲ್ಲಾ ಕಾರಾಗೃಹ ಅಧಿಕಾರಿಗಳು ಕೈದಿಗಳಿಗೆ ಸ್ಥಳೀಯ ಆರೋಗ್ಯಾಧಿಕಾರಿ ಗಳಿಂದ ಅಥವಾ ಸರ್ಕಾರಿ ಆಸ್ಪತ್ರೆಗಳಲ್ಲಿ ನಿಯಮಿತ ಆರೋಗ್ಯ ತಪಾಸಣೆ ಮಾಡಿಸಬೇಕು.

2) ಬಂಧಿತರ ಆರೋಗ್ಯ ಕಾರ್ಡ್ ಸಿದ್ದಪಡಿಸಬೇಕು. ಮನೋವೈದ್ಯರಿಂದ ಸಮಾಲೋಚನೆ ನಡೆಸಬೇಕು,

3) ಯೋಗ ವ್ಯಾಯಾಮದಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸಬೇಕು. ಓದು ಹಾಗೂ ಬರೆಯುವ ಹವ್ಯಾಸ ಉಳ್ಳವರಿಗೆ ಅಗತ್ಯ ಸಾಮಗ್ರಿ ಒದಗಿಸಬೇಕು.

ಉತ್ತರ ಸಂಕೇತಗಳು

ಎ)1 ಮತ್ತು 2ನೇ ಹೇಳಿಕೆ ಮಾತ್ರ ಸರಿಯಾಗಿದೆ.

ಬಿ) 2 ಮತ್ತು 3ನೇ ಹೇಳಿಕೆ ಮಾತ್ರ ಸರಿಯಾಗಿದೆ.

ಸಿ) 1 ಮತ್ತು 3ನೇ ಹೇಳಿಕೆ ಮಾತ್ರ ಸರಿಯಾಗಿದೆ

ಡಿ) 1 ರಿಂದ 3ವರೆಗೆ ಎಲ್ಲ ಹೇಳಿಕೆಗಳು ಸರಿಯಾಗಿವೆ

ಉತ್ತರ: ಡಿ

4) ರಸ್ತೆ ಅಪಘಾತಗಳಲ್ಲಿ ಸಂಭವಿಸುವ ಸಾವು ಮತ್ತು ಗಾಯಾಳುಗಳಾಗು
ವುದನ್ನು ತಗ್ಗಿಸುವುದಕ್ಕೆ ಸಂಬಂಧಿಸಿದಂತೆ ವಿಶ್ವ ಆರೋಗ್ಯ ಸಂಸ್ಥೆಯ ಮಾರ್ಗ ಸೂಚಿಗಳನ್ನು ಬಿಡುಗಡೆ ಮಾಡಿದೆ. ಆ ಹಿನ್ನೆಲೆಯಲ್ಲಿ ಹೇಳಿಕೆಗಳನ್ನು ಗಮನಿಸಿ.

1) ಬೈಕ್ ಸವಾರರು ಪೂರ್ತಿಯಾಗಿ ಮುಖ ಮುಚ್ಚುವ ಹೆಲ್ಮೆಟ್ ಧರಿಸುವುದರಿಂದ ಮಾರಣಾಂತಿಕ ಗಾಯಗಳಾಗುವ ಪ್ರಮಾಣ ಶೇ 64ರಷ್ಟು ತಗ್ಗುತ್ತದೆ, ಮಿದುಳಿಗೆ ಪೆಟ್ಟಾಗುವ ಪ್ರಮಾಣ ಶೇ 74ರಷ್ಟು ಕಡಿಮೆಯಾಗುತ್ತದೆ.

2) 2030ರ ಹೊತ್ತಿಗೆ ರಸ್ತೆ ಅಪಘಾತಗಳಿಂದಾಗುವ ಪ್ರಮಾಣವನ್ನು ಶೇ 50ಕ್ಕೆ (ಈಗ ಆಗುತ್ತಿರುವುದಕ್ಕೆ ಹೋಲಿಸಿ) ಕಡಿಮೆ ಮಾಡಬೇಕಾಗಿದೆ. ಅದಕ್ಕಾಗಿ ಎಲ್ಲಾ ರಾಷ್ಟ್ರಗಳು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.
ಮೇಲಿನ ಹೇಳಿಕೆಗಳ ಪೈಕಿ ಯಾವ ಹೇಳಿಕೆಗಳು ಸರಿಯಾಗಿವೆ?

ಉತ್ತರ ಸಂಕೇತಗಳು
ಎ) 1ನೇ ಹೇಳಿಕೆ ಮಾತ್ರ ಸರಿಯಾಗಿದೆ. ಬಿ) 2ನೇ ಹೇಳಿಕೆ ಮಾತ್ರ ಸರಿಯಾಗಿದೆ.
ಸಿ) 1 ಮತ್ತು 2 ಹೇಳಿಕೆ ಸರಿಯಾಗಿವೆ ಡಿ) 1 ರಿಂದ 2 ಹೇಳಿಕೆಗಳು ತಪ್ಪಾಗಿವೆ‌

ಉತ್ತರ: ಸಿ

5) ಶಾಂಘೈ ಸಹಕಾರ ಸಂಘಟನೆಯಲ್ಲಿ ಭಾರತ, ಚೀನಾ, ರಷ್ಯಾ, ಕಜಕಿಸ್ತಾನ ಸೇರಿದಂತೆ 8 ರಾಷ್ಟ್ರಗಳಿವೆ. ಇದು ವಿಶ್ವದ ಅತಿದೊಡ್ಡ ಪ್ರಾದೇಶಿಕ ಸಂಘಟನೆಯಾಗಿದೆ. ಜಗತ್ತಿನ ಶೇ 40ರಷ್ಟು ಜನರು ಈ ಸಂಘಟನೆಯ ವ್ಯಾಪ್ತಿಗೆ ಒಳಪಡುತ್ತಾರೆ. ವಿಶ್ವದ ಒಟ್ಟು ಜಿಡಿಪಿಯಲ್ಲಿ ಶೇ…….ರಷ್ಟನ್ನು ಇದು ಹೊಂದಿದೆ.

ಎ) 30 ಬಿ) 50 ಸಿ) 80 ಡಿ) 20

ಉತ್ತರ: ಎ

6) ನಮ್ಮ ರಾಜ್ಯದಲ್ಲಿ ………………………..ಕೆರೆಗಳಿಗೆ ಸೇರಿದ 50 ಸಾವಿರಕ್ಕೂ ಹೆಚ್ಚು ಎಕರೆ ಜಮೀನು ಒತ್ತುವರಿಯಾಗಿದೆ. ಅದರಲ್ಲಿ 21 ಸಾವಿರ ಕೆರೆಗಳಲ್ಲಿ ಒತ್ತುವರಿಯನ್ನು ಅಳತೆಯನ್ನೇ ಮಾಡಿಲ್ಲ.

ಎ) 40 ಸಾವಿರ ಬಿ) 50 ಸಾವಿರ ಸಿ) 10 ಸಾವಿರ ಡಿ) 60 ಸಾವಿರ

ಉತ್ತರ: ಎ

7) ಹೊಂದಿಸಿ ಬರೆಯಿರಿ
→ಪಟ್ಟಿ:1 →→→ಪಟ್ಟಿ : 2
ಎ) ಸತಿ ಸಹಗಮನ ನಿಷೇಧ→1) ರಾಜಾರಾಮ್‌ಮೊಹನ್ ರಾಯ್
ಬಿ) ಹೆಣ್ಣು ಮಕ್ಕಳಿಗೆ ಪ್ರೌಢ ಶಾಲೆ→2) ದಯಾನಂದ ಸರಸ್ವತಿ
ಸಿ) ಇಂಗ್ಲಿಷ್ ಶಿಕ್ಷಣ ಅಗತ್ಯ→ →3) ವಿಲಿಯಂ ಬೆಂಟಿಂಕ್
ಡಿ) ವೇದಗಳಿಗೆ ಹಿಂದಿರುಗಿ→4) ಎಂ. ಜಿ. ರಾನಡೆ
ಉತ್ತರ ಸಂಕೇತಗಳು→
ಎ) ಎ-1, ಬಿ-4, ಸಿ-2, ಡಿ-3 ಬಿ) ಎ-4, ಬಿ-1, ಸಿ-2, ಡಿ-3
ಸಿ) ಎ-2, ಬಿ-3, ಸಿ-4, ಡಿ-1 ಡಿ) ಎ-3, ಬಿ-4, ಸಿ-1, ಡಿ-2

ಉತ್ತರ: ಡಿ

 

 

(ಮಾಹಿತಿ: Spardha Bharati UPSC ಯೂಟ್ಯೂಬ್ ಚಾನೆಲ್‌)

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು