ಗೋಕಾಕ: ‘ಸಾಹಿತಿಗಳ ಹಾಗೂ ಕಲಾವಿದರ ತವರು ಗೋಕಾಕ ತಾಲ್ಲೂಕು’ ಎಂದು ಕಸಾಪ ಗೋಕಾಕ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಮಹಾಂತೇಶ ತಾಂವಶಿ ಹೇಳಿದರು.

ಇಲ್ಲಿನ ಜೀರಗ್ಯಾಳ ಸಭಾ ಭವನದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ಸಾಹಿತಿ ಬಸವರಾಜ ಪಟ್ಟಣಶೆಟ್ಟಿ ಅವರ ಸಾವಳಗಿ ‘ಶ್ರೀ ಶಿವಲಿಂಗೇಶ್ವರ ಮಹಾತ್ಮೆ ನಾಟಕ’ ಪುಸ್ತಕ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದ ಅವರು, ‘ತಾಲ್ಲೂಕಿನ ಬೆಟಗೇರಿ ಕೃಷ್ಣ ಶರ್ಮ, ಬಸವರಾಜ ಕಟ್ಟಿಮನಿ, ಕೃಷ್ಣಮೂರ್ತಿ ಪುರಾಣಿಕರಂತಹ ಮಹಾನ್ ಸಾಹಿತಿಗಳು ಸಾಹಿತ್ಯ ಕ್ಷೇತ್ರಕ್ಕೆ ಮಹತ್ತರ ಕೊಡುಗೆ ನೀಡಿದ್ದಾರೆ. ಅವರ ಮಾರ್ಗದಲ್ಲಿಯೇ ಇಂದಿನ ಸಾಹಿತಿಗಳು ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಕೊಡುಗೆ ನೀಡಬೇಕು ’ ಎಂದರು.

ನಾಟಕ ಕೃತಿಯನ್ನು ಡಾ. ಅಶೋಕ ಜೀರಗ್ಯಾಳ ಲೋಕಾರ್ಪಣೆಗೊಳಿಸಿದರು. ಕೃತಿ ಕುರಿತು ವಿದ್ಯಾ ರೆಡ್ಡಿ ಮಾತನಾಡಿದರು. ಝಾಂಗಟಿಹಾಳದ ಚಂದ್ರಶೇಖರ ಮಹಾರಾಜರು, ವಿಶ್ರಾಂತ ಪ್ರಾಧ್ಯಾಪಕ ಹಿರಿಯ ಸಾಹಿತಿ ಪ್ರೊ. ಚಂದ್ರಶೇಖರ ಅಕ್ಕಿ, ಸುವರ್ಣಾತಾಯಿ ಹೊಸಮಠ, ರಜನಿ ಜೀರಗ್ಯಾಳ, ಧರೆಪ್ಪ ಮಗದುಮ, ಡಾ. ಸಂತೋಷ ಚಿಕ್ಕೋಡಿ, ಪ್ರಕಾಶಕರಾದ ಸಿದ್ರಾಯ ಐದುಡ್ಡಿ ಮತ್ತು ಸಾವಿತ್ರಿ ಐದುಡ್ಡಿ ಇದ್ದರು. ಜಯಾ ಚುನಮರಿ ಸ್ವಾಗತಿಸಿದರು. ಸಂಗೀತಾ ಬನ್ನೂರ ನಿರೂಪಿಸಿದರು. ಸುಧಾ ಮಠಪತಿ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-21-1552159467

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.