ಶಿಂದಿಕುರಬೇಟ (ಗೋಕಾಕ): ಸಂಸ್ಕಾರ ಮತ್ತು ಸಂಸ್ಕೃತಿಯನ್ನು ಪಾಲಕರು ಮಕ್ಕಳಿಗೆ ಕಲಿಸುವುದು ಅಗತ್ಯ ಎಂದು ನಿವೃತ್ತ ಮುಖ್ಯ ಶಿಕ್ಷಕ ಜಿ.ಎನ್.ಸಾಂಗಲಿ ಅಭಿಪ್ರಾಯಪಟ್ಟರು.

ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ಸಮತಾ ಶಿಕ್ಷಣ ಸಮಿತಿಯ ಮಾಧ್ಯಮಿಕ ಶಾಲೆಯಲ್ಲಿ ನಡೆದ 1995-1996ನೇ ಸಾಲಿನ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳ ಗುರು ವಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತಮುಖ್ಯ ಶಿಕ್ಷಕ ಎಸ್.ಎನ್.ಉರಜಿಂಗಗೋಳ, ವಿದ್ಯೆ ಹಾಗೂ ಜ್ಞಾನ ನೀಡಿದ ಗುರುಗಳನ್ನು ಅಭಿಮಾನ ಹಾಗೂ ಗೌರವದಿಂದ ಸನ್ಮಾನಿಸಿದ ಕ್ಷಣವನ್ನು ಎಂದೂ ಮರೆಯಲಾಗದು ಎಂದರು. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಅವರ ಭವಿಷ್ಯವನ್ನೂ ಉಜ್ವಲಗೊಳಿಸಬೇಕಾದ ಅಗತ್ಯವಿದೆ ಎಂದು ಅವರು ತಿಳಿಸಿದರು.

ಬಿ.ಎಂ.ಕಳಸನ್ನವರ, ಕೆ.ವಿ.ಕಡ್ಡಿ, ಆರ್,ವೈ.ಬೆಳಗಲಿ, ಆರ್.ಎಸ್.ಸೊಗಲಿ, ಎಫ್.ಜಿ.ಕರನಾಚಿ, ಎಂ.ಎಸ್.ಪಾಟೀಲ, ಸಿ.ಬಿ.ಡೂಗನವರ, ಎಂ.ಎಸ್.ಬೆಳಗಲಿ, ಪಿ.ಎಚ್.ಗೋಸಬಾಳ, ಆರ್.ಬಿ.ಕರೆಪ್ಪಗೋಳ, ವಿಠ್ಠಲ ಕರೋಶಿ ಇದ್ದರು.

ವಿದ್ಯಾರ್ಥಿಗಳು ತಮ್ಮ ಶಾಲೆಯ ದಿನಗಳನ್ನು ಸ್ಮರಿಸಿಕೊಂಡರು. ಪ್ರಭಾಕರ ಕಾರ್ಯಾಗೋಳ ಸ್ವಾಗತಿಸಿದರು. ಪಂಚಾಕ್ಷರಿ ಪಂಚಯ್ಯನವರಮಠ ನಿರೂಪಿಸಿದರು. ಮಹಾಂತೇಶ ಪವಾರ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-21-463219466

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.