ಗೋಕಾಕ: ಸರ್ಕಾರಿ ಶಾಲೆ ಉಳಿಸಿಕೊಳ್ಳು ವುದು ಎಲ್ಲರ ಜವಾಬ್ದಾರಿ. ಪಿಎಂಶ್ರೀ ಯೋಜನೆ ಅಡಿಯಲ್ಲಿ ನಿರ್ಮಿಸಲಾದ ಶಾಲಾ ಗ್ರಂಥಾಲಯಕ್ಕೆ ಶಾಸಕರ ಅನುದಾನದ ಅಡಿಯಲ್ಲಿ ಶಾಲೆಯ ಹಳೆ ವಿದ್ಯಾರ್ಥಿಗಳಿಗೆ ಮತ್ತು ಪ್ರಸ್ತುತ ಮಕ್ಕಳ ಹೆಚ್ಚಿನ ವಿದ್ಯಾಭ್ಯಾಸಕ್ಕೆ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಗ್ರಂಥಾಲಯ ಸೌಲಭ್ಯಕ್ಕಾಗಿ ₹ 5 ಲಕ್ಷ ನೀಡುವುದರೊಂದಿಗೆ ಶೈಕ್ಷಣಿಕ ರಂಗಕ್ಕೆ ಬೆನ್ನೆಲುಬಾಗಿ ನಿಂತಿರುತ್ತಾರೆ ಎಂದು ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಸ್ಮರಿಸಿದರು.

ಬುಧವಾರ ತಾಲ್ಲೂಕಿನ ಮೆಳವಂಕಿ ಗ್ರಾಮದ ಸಿದ್ಧಾರೂಢ ಮಠದ ಪಿಎಂಶ್ರೀ ಸರ್ಕಾರಿ ಪ್ರಾಥಮಿಕ ಶಾಲೆಗೆ ಓ-ಸ್ಸಾಟ್ ಸಂಸ್ಥೆಯಿಂದ ನಿರ್ಮಿಸಲಾಗಿರುವ ಶಾಲಾ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. ಓ-ಸ್ಸಾಟ್ ಪದಾಧಿಕಾರಿ ರಾಮಮೂರ್ತಿ ಅವರು ಮಾತನಾಡಿ, ಸಂಸ್ಥೆಯಿಂದ ಒಗಿಸಿದ 121ನೇ ಕಟ್ಟಡ ಇದಾಗಿದ್ದು ಯೋಜನೆಗೆ ₹1 ಕೋಟಿ ಬೆಂಬಲ ನೀಡಿದ ದಾನಿಗಳಾದ ಸ್ನೇಹ ಮತ್ತು ಕೀರ್ತಿ ಮೇಲುಕೋಟೆ ಅವರು ಮಕ್ಕಳಿಗೆ ಸುರಕ್ಷಿತ ಹಾಗೂ ಸುಸಜ್ಜಿತ ವಾತಾವರಣ ಒದಗಿಸಿ ಶಾಲೆಯು ವಿದ್ಯಾ ಭ್ಯಾಸದ ಶ್ರೇಷ್ಠತೆ ಮತ್ತು ಸಮಗ್ರ ವಿದ್ಯಾರ್ಥಿ ಅಭಿವೃದ್ಧಿಯತ್ತ ಗಮನಹರಿಸಲು ಸಾಧ್ಯ ವಾಗುವಂತೆ ಮಾಡಿದ್ದಾರೆ ಎಂದರು.

ಹಾಸ್ಯ ಕಲಾವಿದ ಪ್ರಾಣೇಶ್ ಗಂಗಾವತಿ ನೂತನ ಕಟ್ಟಡವನ್ನು ಉದ್ಘಾಟಿಸಿದರು.

ಕರ್ನಾಟಕ ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ, ತಹಶೀಲ್ದಾರ್ ಡಾ.ಮೋಹನ್ ಭಸ್ಮೆ, ತಾ.ಪಂ. ಇ.ಓ. ಪರಶುರಾಮ ಘಸ್ತೆ, ಮೂಡಲಗಿ ಬಿಇಒ ಪಿ.ಬಿ.ಹಿರೇ ಮಠ, ಹಾಸ್ಯ ಕಲಾವಿದ ಬಸವ ರಾಜ ಮಹಾಮನೆ, ಮುಖ್ಯಶಿಕ್ಷಕ ಈರಣ್ಣ ಕಡಕೋಳ, ಎಸ್ಡಿಎಂಸಿ ಪದಾ ಧಿಕಾರಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-21-15407688

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.