ಭಾರತದಲ್ಲಿ ಕೃತಕ ಬುದ್ಧಿಮತ್ತೆ (AI) ಶಿಕ್ಷಣವನ್ನು ವಿಸ್ತರಿಸಲು ಒತ್ತು ನೀಡುವುದಾಗಿ ಗೂಗಲ್ ಘೋಷಿಸಿದೆ. ಆ ನಿಟ್ಟಿನಲ್ಲಿ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಡಿಜಿಟಲ್ ಕಲಿಕಾ ವ್ಯವಸ್ಥೆಯನ್ನು ಗುರಿಯಾಗಿಸಿಕೊಂಡು ಹೊಸ ಯೋಜನೆಯನ್ನು ಪರಿಚಯಿಸಲು ಮುಂದಾಗಿದೆ.

ತರಗತಿಗಳಲ್ಲಿ ಎಐ ಸಾಕ್ಷರತೆಯನ್ನು ಹೆಚ್ಚಿಸಲು ಗೂಗಲ್ ಪ್ರಯತ್ನಿಸಲಿದೆ ಎಂದು ಲಂಡನ್ನಲ್ಲಿ ನಡೆದ ಎಜುಕೇಶನ್ ವರ್ಲ್ಡ್ ಫೋರಂ ಸಂದರ್ಭದಲ್ಲಿ ಘೋಷಣೆ ಮಾಡಿದೆ. ಈ ಯೋಜನೆಯು ರಾಷ್ಟ್ರೀಯ ಶಿಕ್ಷಣ ನೀತಿ (NEP) 2020ರ ಗುರಿಗಳೊಂದಿಗೆ ಹೊಂದಿಕೆಯಾಗಲಿದೆ. ಇದು ಶಾಲೆ, ಕಾಲೇಜುಗಳಲ್ಲಿ ತಂತ್ರಜ್ಞಾನ ಆಧಾರಿತ ಕಲಿಕೆ ಮತ್ತು ಕೌಶಲ್ಯ ಅಭಿವೃದ್ಧಿಯನ್ನು ಉತ್ತೇಜಿಸಲಿದೆ ಎಂದು ಗೂಗಲ್ ತಿಳಿಸಿದೆ.

ಶಿಕ್ಷಣ ಮತ್ತು ಉದ್ಯೋಗದಲ್ಲಿ AI ಹೆಚ್ಚು ಮುಖ್ಯವಾಗುತ್ತಿದ್ದು, ಗೂಗಲ್ನ ಈ ವಿಶೇಷ ಕಾರ್ಯಕ್ರಮವು ಭಾರತೀಯ ವಿದ್ಯಾರ್ಥಿಗಳ ಕೌಶಲ್ಯ ಹೆಚ್ಚಿಸಲು ನೆರವಾಗುತ್ತದೆ.

ಶಿಕ್ಷಕರಿಗಾಗಿ ಹೊಸ ಕಲಿಕಾ ಪರಿಕರ

ಎಐ ಶಿಕ್ಷಣ ವಿಸ್ತರಣೆಯ ಭಾಗವಾಗಿ, ಭಾರತೀಯ ಶಿಕ್ಷಕರಿಗಾಗಿ ವಿಶೇಷ ಮೊಬೈಲ್ ಅನ್ನು ವಿನ್ಯಾಸಗೊಳಿಸಲಾಗಿದೆ. ಇದು ಗೂಗಲ್ ಎಐ ಎಜುಕೇಟರ್ ಸರಣಿಯ (GES) ತರಬೇತಿ ಕಾರ್ಯಕ್ರಮದ ಪ್ರಾರಂಭಿಕ ಹಂತದ ಅತಿ ದೊಡ್ಡ ಘೋಷಣೆಯಾಗಿದೆ ಎಂದು ಗೂಗಲ್ ತಿಳಿಸಿದೆ.

ಇದನ್ನು ಆರಂಭದಲ್ಲಿ ಮಹಾರಾಷ್ಟ್ರ, ಛತ್ತೀಸ್ಗಢ, ಅಸ್ಸಾಂ, ಕೇಂದ್ರಾಡಳಿತ ಪ್ರದೇಶವಾಗಿರುವ ಲಡಾಖ್ ಮತ್ತು ಪಂಜಾಬ್ಗಳಲ್ಲಿ ಶಾಲಾ ಶಿಕ್ಷಣ ಮಂಡಳಿಯ ಸಹಭಾಗಿತ್ವದಲ್ಲಿ ಜಾರಿಗೆ ತರಲಾಗುವುದು ಎಂದು ಗೂಗಲ್ ತಿಳಿಸಿದೆ.

ಬೋಧನಾ ವಿಧಾನ ಮತ್ತು ವಿದ್ಯಾರ್ಥಿಗಳ ಭಾಗವಹಿಸುವಿಕೆಯನ್ನು ಸುಧಾರಿಸಲು ತರಗತಿ ಕೊಠಡಿಗಳಲ್ಲಿ AI ಅನ್ನು ಹೇಗೆ ಜವಾಬ್ದಾರಿಯುತವಾಗಿ ಬಳಸಬೇಕು ಎಂಬುದನ್ನು ಶಿಕ್ಷಕರಿಗೆ ಮಾರ್ಗದರ್ಶನ ನೀಡಲು ಈ ಕಾರ್ಯಕ್ರಮವು ಸಹಾಯ ಮಾಡುತ್ತದೆ ಎಂದು ಗೂಗಲ್ ತಿಳಿಸಿದೆ.

ತರಬೇತಿ ಸಂದರ್ಭದಲ್ಲಿ ಭಾರತದ 6 ವಿವಿಧ ಭಾಷೆಗಳೊಂದಿಗೆ ಪ್ರಾರಂಭಿಸಲು ಗೂಗಲ್ ಈ ಯೋಜನೆ ರೂಪಿಸಿದೆ. ಅದರಲ್ಲಿ ಹಿಂದಿ, ಅಸ್ಸಾಮಿ, ಮರಾಠಿ, ತೆಲುಗು, ಒಡಿಯಾ ಮತ್ತು ಪಂಜಾಬಿ ಒಳಗೊಂಡಿವೆ.

ಭಾರತ, ಬ್ರೆಜಿಲ್, ಪಾಕಿಸ್ತಾನ ಮತ್ತು ಕೀನ್ಯಾ ದೇಶಗಳಾದ್ಯಂತ ಎಐ ಉನ್ನತೀಕರಣಕ್ಕಾಗಿ ಗೂಗಲ್, ಯುನಿಸೆಫ್ ಜೊತೆ 3 ವರ್ಷಗಳ ಕಾರ್ಯಕ್ರಮವನ್ನು ಘೋಸಿಸಿದೆ. ಈ ಸಹಯೋಗದ ಮೂಲಕ, ವಿದ್ಯಾರ್ಥಿಗಳಲ್ಲಿ ಎಐ ಕುರಿತಾದ ಜ್ಞಾನ ಮತ್ತು ಸಂಖ್ಯಾಶಾಸ್ತ್ರ ಸುಧಾರಿಸಲು ಕೆಲಸ ಮಾಡಲಾಗುವುದು. ಜೆಮಿನಿ ಮತ್ತು ರೀಡ್ಅಲಾಂಗ್ನಂತಹ AI ಚಾಲಿತ ಪರಿಕರಗಳನ್ನು ಕಲಿಕೆಯಲ್ಲಿ ಪರಿಚಯಿಸಲಾಗುವುದು ಎಂದು ಗೂಗಲ್ ತಿಳಿಸಿದೆ.

ಈ ಯೋಜನೆಯು ಹೊಸತನದ ಜೊತೆಗೆ, ಸುರಕ್ಷಿತ ಮತ್ತು ನೈತಿಕ AI ಅಳವಡಿಕೆಯ ಮೇಲೂ ಕೇಂದ್ರೀಕರಿಸುತ್ತದೆ ಎಂದು ಗೂಗಲ್ ಹೇಳಿರುವುದಾಗಿ ಇಂಡಿಯಾ ಟುಡೆ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.