ಗುಬ್ಬಿ: ದೇಶದ ಅಸಮಾನತೆ ಅಳಿಸಿ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಬಿ.ಆರ್. ಅಂಬೇಡ್ಕರ್ ಸಂವಿಧಾನ ರಚಿಸಿದ್ದಾರೆ ಎಂದು ಸಂವಿಧಾನ ರಕ್ಷಣಾ ಪಡೆ ಜಿಲ್ಲಾ ಘಟಕದ ಸಂಚಾಲಕಿ ಎನ್. ಇಂದಿರಮ್ಮ ತಿಳಿಸಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು (ಸ್ವಾಯತ್ತ) ಹಾಗೂ ಗುಬ್ಬಿಯ ಸಂವಿಧಾನ ಸಂರಕ್ಷಣಾ ಪಡೆಯ ತಾಲ್ಲೂಕು ಘಟಕದಿಂದ ನಡೆದ ಸಂವಿಧಾನ ಅರಿವು ಕಾರ್ಯಕ್ರಮದಲ್ಲಿ ಮಾತನಾಡಿದರು.

ಸಮಾನತೆ, ಭ್ರಾತೃತ್ವ, ಸಮಾಜವಾದ ವಿಶ್ವದ ಎಲ್ಲ ದೇಶಗಳಿಗೂ ಅನ್ವಯವಾಗುವ ಸಿದ್ಧಾಂತ. ಎಲ್ಲರೂ ಸಂವಿಧಾನದ ಆಶಯಗಳನ್ನು ಪಾಲಿಸುತ್ತ ಸುಭದ್ರ ದೇಶ ಕಟ್ಟಲು ಮುಂದಾಗಬೇಕಿದೆ ಎಂದು ತಿಳಿಸಿದರು.

ಕೇಂದ್ರ ಸಾಹಿತ್ಯ ಅಕಾಡೆಮಿ ಯುವ ಪ್ರಶಸ್ತಿ ಪುರಸ್ಕೃತ ಎಚ್. ಲಕ್ಷ್ಮೀ ನಾರಾಯಣಸ್ವಾಮಿ ಮಾತನಾಡಿ, ಅಂಬೇಡ್ಕರ್ ಕೆಲವೇ ಸಮುದಾಯಗಳಿಗೆ ಸೀಮಿತವಾಗುವ ಸಂವಿಧಾನ ರಚಿಸಿಲ್ಲ. ಸಮಾಜದ ತುಳಿತಕ್ಕೊಳಗಾದವರ ನೋವಿಗೆ ಧ್ವನಿಯಾಗಿ ಸಂವಿಧಾನದಲ್ಲಿ ಅಗತ್ಯವಿರುವ ಅಂಶಗಳನ್ನು ಸೇರಿಸಿದ್ದಾರೆ ಎಂದರು.

ವೈದ್ಯ ಬಿ.ಎನ್. ನಾಗಭೂಷಣ್ ಮಾತನಾಡಿ, ಸಂವಿಧಾನ ದೇಶದ ಮಹಾನ್ ಗ್ರಂಥ. ಅಂಬೇಡ್ಕರ್ ಅವರ ನಿರಂತರ ಪರಿಶ್ರಮ, ಪ್ರಾಮಾಣಿಕತೆಯಿಂದಾಗಿಯೇ ಉತ್ತಮ ಸಂವಿಧಾನ ರಚಿಸಲು ಸಾಧ್ಯವಾಗಿದೆ ಎಂದು ಹೇಳಿದರು.

ಹೋರಾಟಗಾರ ರಾಮಕೃಷ್ಣಪ್ಪ, ಛಲವಾದಿ ಮಹಾಸಭಾದ ತಾಲ್ಲೂಕು ಘಟಕದ ಅಧ್ಯಕ್ಷ ಟಿ.ಇ.ಈರಣ್ಣ, ಕಾಲೇಜಿನ ಶೈಕ್ಷಣಿಕ ಡೀನ್ ಒ. ನಾಗರಾಜು, ಲೆಫ್ಟಿನೆಂಟ್ ಸುಮುಖ್, ಸಾಂಸ್ಕೃತಿಕ ಸಂಚಾಲಕ ಜಿ.ಗಂಗಾಧರಯ್ಯ, ಸಂವಿಧಾನ ರಕ್ಷಣಾ ಪಡೆಯ ಸಂಚಾಲಕಿ ಮರಿಯಾಂಬಿ, ಬಿ.ಟಿ. ಗಿರೀಶ್ ಕುಮಾರ್, ಮಂಜುನಾಥ್ ಪ್ರಭು, ಡಿ.ಲೋಕೇಶ್, ಪ್ರಾಧ್ಯಾಪಕರು, ವಿದ್ಯಾರ್ಥಿಗಳು, ಸಿಬ್ಬಂದಿ ಪಾಲ್ಗೊಂಡಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-17-44011245

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.