ಗುಳೇದಗುಡ್ಡ: ‘ಕವಿತೆಗಳು ಸಹೃದಯತೆ ಹೊಂದಿವೆ. ಸಮಾಜದಲ್ಲಿರುವ ಅಂಕುಡೊಂಕನ್ನು ತಿದ್ದುವುದರೊಂದಿಗೆ ವ್ಯಕ್ತಿಯ ಭಾವನೆಗಳಿಗೆ ಕವಿತೆಗಳು ಸ್ಪಂದಿಸುತ್ತವೆ. ಹೀಗಾಗಿ ಕವಿಯ ಕಾವ್ಯದಿಂದ ಸಮಾಜದ ಬದಲಾವಣೆ ಸಾಧ್ಯವಾಗುತ್ತದೆ’ ಎಂದು ಕವಿ ಭೀಮನಗೌಡ ಪಾಟೀಲ ಹೇಳಿದರು.

ಪಟ್ಟಣದ ಗುರುಸಿದ್ಧೇಶ್ವರ ಮಹಿಳಾ ಶಿಕ್ಷಣ(ಬಿ.ಎಡ್) ಮಹಾವಿದ್ಯಾಲಯದ ಕನ್ನಡ ವಿಭಾಗ ಆಶ್ರಯದಲ್ಲಿ ಗುರುವಾರ ಜರುಗಿದ ಕವಿ- ಕಾವ್ಯ-ಮುಖಾಮುಖಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಕವಿ ಮತ್ತು ಆತನ ಕವಿತೆ ಸಮಾಜಮುಖಿ ಆಗಿರಬೇಕು. ಸಮಾಜದ ಸಮಸ್ಯೆಗಳಿಗೆ ಸ್ಪಂದಿಸಬೇಕು. ಕವಿತೆಗಳ ಕೇಳಿದ ಜನರು ಬದಲಾವಣೆ ಆಗಬೇಕು ಮತ್ತು ಕವಿತೆಯ ಆಶೆಯಗಳಿಗೆ ಅನುಗು ಣವಾಗಿ ಪರಿವರ್ತನೆಗೆ ಪ್ರಯತ್ನಿಸಬೇಕು. ಸಮಾಜದಲ್ಲಿನ ವ್ಯಕ್ತಿಯನ್ನು ತಿದ್ದಿದರೆ ಸಮಾಜ ತಿದ್ದಿದಂತೆ’ ಎಂದು ಹೇಳಿದರು

ಪ್ರಾಚಾರ್ಯ ಎಚ್.ಎಸ್. ಘಂಟಿ ಮಾತನಾಡಿ, ‘ಇಂದಿನ ವಿದ್ಯಾರ್ಥಿಗಳು ಶಿಕ್ಷಣವನ್ನು ವ್ಯವಹಾರಿಕವಾಗಿ ನೋಡುವುದರಿಂದ ಕೇವಲ ಅಂಕಗಳಿಗೆ ಮಾತ್ರ ಅವರ ಆಲೋಚನೆಗಳು ಸೀಮಿತವಾಗಿವೆ. ಅದರ ಆಚೆ ಕನ್ನಡ ಭಾಷೆ ,ಸಾಹಿತ್ಯ ಸಂವೇದನೆ, ಕಾವ್ಯ, ಕಾವ್ಯದ ಒಳನೋಟಗಳನ್ನು ಅರಿಯುವ ಅವಶ್ಯಕತೆ ಇದೆ’ ಎಂದು ಹೇಳಿದರು.

ಪ್ರಶಿಕ್ಷಣಾರ್ಥಿಗಳು ಭೀಮನಗೌಡ ಪಾಟೀಲ ಅವರೊಂದಿಗೆ ಅವರ ಜೀವನ, ಕಾವ್ಯ, ಸಾಹಿತ್ಯದ ಕುರಿತು ಸಂವಾದ ನಡೆಸಿದರು. ಗಾಯಕ ಅಶೋಕ ಜೋಶಿ ಹಾಗೂ ಪ್ರಥಮ ಮತ್ತು ದ್ವಿತೀಯ ವರ್ಷದ ಬಿ.ಎಡ್ ಪ್ರಶಿಕ್ಷಣಾರ್ಥಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-19-201946582

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.