ಗುಳೇದಗುಡ್ಡ: ‘ಸರ್ಕಾರಿ ಶಾಲೆಯಲ್ಲಿ ಓದಿದವರು ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳು ಶಿಕ್ಷಕರಾಗಿರುವುದು ಹರ್ಷದಾಯಕ’ ಎಂದು ಬಾಲಕಿಯರ ಪ್ರೌಢಶಾಲೆಯ ಉಪಪ್ರಾಚಾರ್ಯ ಎಂ.ಪಿ. ಮಾಗಿ ಹೇಳಿದರು.

ಅವರು ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ಮಂಗಳವಾರ ಜರುಗಿದ ಸರ್ಕಾರಿ ಹೆಣ್ಣುಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ನಂ- 1ರ 1998-99 ನೇ ಸಾಲಿನ ವಿದ್ಯಾರ್ಥಿಗಳ ಗುರುವಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಜ್ಞಾನ, ಶಿಸ್ತು, ವ್ಯಕ್ತಿತ್ವ ರೂಪಿಸಿದ ಶಿಕ್ಷಕರ ಪಾತ್ರ ಹಿರಿದು ಎಂದರು.

ಶಿರೂರ ಸಿದ್ಧೇಶ್ವರ ಪ್ರೌಢಶಾಲೆಯ ಶಿಕ್ಷಕ ಸಂಜಯ ನಡುವಿನಮನಿ ಮಾತನಾಡಿ, ‘ಮಣ್ಣಿನ ಮುದ್ದೆಯಂಥ ವಿದ್ಯಾರ್ಥಿಗಳನ್ನು ತಿದ್ದಿ ತೀಡಿ ಅವರಿಗೆ ಜ್ಞಾನ ನೀಡಿ ಸಮಾಜದಲ್ಲಿ ಉತ್ತಮ ಬದುಕು ಕಟ್ಟಿಕೊಳ್ಳುವಲ್ಲಿ ಶಿಕ್ಷಕರ ಶ್ರಮ ಅಡಗಿದೆ. ಹೀಗಾಗಿ ಶಿಕ್ಷಕರು ಶಿಲ್ಪಿಗಳಾಗಿದ್ದಾರೆ’ ಎಂದು ಹೇಳಿದರು.

ಶಿಕ್ಷಕರಾದ ಭೋಜಪ್ಪ ಮಂಗಳೂರು, ತಿಪ್ಪಣ್ಣ ಮಡಿವಾಳರ, ಶಿವಲೀಲಾ ತೋಟಗೇರ, ಶಂಕ್ರಮ್ಮ ಪೆರ್ಮಿ, ನೀಲಮ್ಮ ಕೆರೂರ, ಸುಮಾ ಆಡೀನ, ಎಂ.ಎಚ್.ಗಾಣಿಗೇರ, ಸುನಂದಾ ಉಮಚಗಿ, ಜಯಂತಿ ಅಂಬಿಗೇರ ಅವರನ್ನು ಗೌರವಿಸಲಾಯಿತು. ನೆಲ್ಲೂರ, ಮಂಜುಳಾ ಮಾಚಕನೂರ, ಶರಣಬಸವ ತೆಗ್ಗಿನಮಠ ಮಾತನಾಡಿದರು.

ವಿಜಯಲಕ್ಷ್ಮೀ ಮಿಟ್ಟಲಕೋಡ ಅವರು ಸ್ವಾಗತಿಸಿದರು. ಸವಿತಾ ಕೊರವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಕ್ಕೂಬಾಯಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260513-19-58957950

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.