ಗುಳೇದಗುಡ್ಡ: ‘ವಿದ್ಯಾರ್ಥಿ ಜೀವನ ಅಮೂಲ್ಯವಾದದ್ದು. ಶಿಕ್ಷಣ ವಿದ್ಯಾರ್ಥಿಗಳ ಉಜ್ವಲ ಭವಿಷ್ಯ ರೂಪಿಸುತ್ತದೆ. ಕಲಿಸಿದ ಗುರುಗಳನ್ನು ಗೌರವಿಸುವುದು ಭಾರತೀಯ ಸಂಸ್ಕೃತಿಯಾಗಿದೆ’ ಎಂದು ಸೇಂಟ್ ಝೇವಿಯರ್ ಶಾಲೆಯ ಸಂಚಾಲಕ ಫಾದರ್ ಹ್ಯಾರಿ ರಾಬರ್ಟ್ ಹೇಳಿದರು.

ಅವರು ಪಟ್ಟಣದ ಕಾಟವಾ ಫಾರ್ಮ್ ಹೌಸ್ನಲ್ಲಿ ಸೇಂಟ್ ಝೇವಿಯರ್ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 1990-91 ಹಾಗೂ 1996-97ನೇ ಸಾಲಿನಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳು ಹಮ್ಮಿಕೊಂಡ ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

‘ಶಿಕ್ಷಕರು ಆದರ್ಶ ಸಮಾಜ ನಿರ್ಮಿಸುವ ಶಿಲ್ಪಿಗಳು. ವಿದ್ಯಾರ್ಥಿಗಳು ಗುರುಗಳು ಹೇಳುವ ಪಾಠವನ್ನು ಶ್ರದ್ಧೆಯಿಂದ ಕೇಳಿದರೆ ಭವಿಷ್ಯ ಎತ್ತರಕ್ಕೆ ಬೆಳೆಯುತ್ತದೆ. ಅದಕ್ಕೆ ನಿವೆಲ್ಲ ವಿದ್ಯಾರ್ಥಿಗಳು ಸಾಕ್ಷಿ. ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು, ಸಂಯಮ, ತಾಳ್ಮೆಯನ್ನು ಬೆಳೆಸಿಕೊಳ್ಳಬೇಕು’ ಎಂದರು.

ಸೇಂಟ್ ಝೇವಿಯರ್ ಶಾಲೆಯ ಮುಖ್ಯ ಶಿಕ್ಷಕ ಬಿ.ಆರ್. ದೊಡ್ಡಿಹಾಳ, ಎಸ್.ಎಸ್. ನಾರಾ, ಬಿ.ಎಂ.ಕೆಂಚಣ್ಣವರ, ಜೆ.ಆರ್. ಪಾಟೀಲ, ಸಿ.ಎ.ಮೇಟಿ, ಜಯಪ್ರಕಾಶ ಕರಡಿಗುಡ್ಡ, ಸಿಸ್ಟರ್ ತೆರೆಸಾ ಬಿ.ಎನ್., ಸಿಸ್ಟರ್ ವಿನ್ಸಿಲ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಕಲಿಸಿದ ಎಲ್ಲ ಗುರುಗಳನ್ನು ಸಂಭ್ರಮದಿಂದ ಸನ್ಮಾನಿಸಿ ಗುರುವಂದನೆ ನೆರವೇರಿಸಲಾಯಿತು. ಹುಚ್ಚೇಶ ದೊಡ್ಡಮನಿ, ಅನ್ವರ್ ಬೂದಿಹಾಳ, ನಂದಾ ಪವಾರ, ಮನೋಹರ ಪುಠಾನಿಕರ, ನಸೀಮಾ ಕಲೆಗಾರ, ಶಿವಾನಂದ ಆಲೂರ, ರೇಣುಕಾ ಕೊಳ್ಳಿ, ಸಾವಿತ್ರಿ ಸತಾಳಿ, ಶಿವಲೀಲಾ ಚಂದಾಪೂರ, ಶಶಿಧರ ದಳವಾಯಿ ಅನುಭವ ಹಂಚಿಕೊಂಡರು.

ಗುರುವಂದನೆಯಲ್ಲಿ ಹಳೆಯ ವಿದ್ಯಾರ್ಥಿಗಳಿಂದ ಹಲವು ಸಾಂಸ್ಕೃತಿಕ ಮನರಂಜನೆಗಳು ನಡೆದು ನೋಡುಗರ ಗಮನ ಸೆಳೆದವು. ಈರಮ್ಮ ಶ್ಯಾವಿ, ಮಹೇಶ ಅಲದಿ, ವಿನಯ ಚಾರಕಾನಿ, ಮಲ್ಲಿಕಾರ್ಜುನ ಅಲದಿ, ಸಲ್ಮಾ ಸವರಾಜ, ವಾಣಿರ್ಶರೀ ಕತ್ತಿಕೈ, ರಾಘವೇಂದ್ರ ಕುಲಕರ್ಣಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-19-658282184

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.