ಗುಳೇದಗುಡ್ಡ: ಆಗ ತಾನೇ ಜನನವಾದ ನವಜಾತ ಶಿಶುಗಳು ಸೂಕ್ಷ್ಮ ಸಂವೇದನೆಯನ್ನು ಹೊಂದಿರುತ್ತವೆ ಎಂದು ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ನಾಗರಾಜ ಕುರಿ ಹೇಳಿದರು.

ಅವರು ಶನಿವಾರ ತಾಲ್ಲೂಕು ಆಸ್ಪತ್ರೆಗೆ ಪಟ್ಟಣದ ಗುರುಸಿದ್ದೇಶ್ವರ ಮಹಿಳಾ ಶಿಕ್ಷಣ (ಬಿ.ಎಡ್) ಮಹಾವಿದ್ಯಾಲಯದ ಪ್ರಶಿಕ್ಷಣಾರ್ಥಿಗಳು ನವಜಾತ ಶಿಶುಗಳ ಅಧ್ಯಯನಕ್ಕೆ ಬಂದಂತ ಸಂದರ್ಭದಲ್ಲಿ ಪ್ರಶಿಕ್ಷಣಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು

ಆಗ ತಾನೇ ಜನಿಸಿದ ಶಿಶುಗಳಿಗೆ ಸ್ತನ್ಯಪಾನ ಮಾಡಿಸುವುದು ಕಡ್ಡಾಯ. ಮಕ್ಕಳಿಗೆ ಯಾವುದೇ ರೀತಿಯ ತೊಂದರೆ ಆಗದ ಹಾಗೆ ಗಮನಿಸಬೇಕು. ಅವು ಪರಿಸರ ಜೊತೆ ಹೊಂದಾಣಿಕೆ ಆಗಲು ಸಮಯ ನೀಡಬೇಕು. ಮಕ್ಕಳು ಹೊರ ಜಗತ್ತಿನ ಅರಿವು ಇರುವುದಿಲ್ಲ. ತಾಯಿಯ ಜೊತೆ ಹೊಂದಾಣಿಕೆಯಿಂದ ಇದ್ದು, ಪರಿಸರವನ್ನು ಗಮನಿಸುತ್ತವೆ. ಶಿಶುವಿನ ಆರೋಗ್ಯದ ಕಡೆ ಹೆಚ್ಚು ಗಮನ ನೀಡಬೇಕಾದ ಅವಶ್ಯಕತೆ ಇದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಪ್ರಶಿಕ್ಷಣಾರ್ಥಿಗಳು ನವಜಾತ ಶಿಶುಗಳ ಕುರಿತು ವೈದ್ಯಾಧಿಕಾರಿ ಡಾ.ನಾಗರಾಜ್ ಕುರಿ ಅವರೊಂದಿಗೆ ಸಂವಾದ ನಡೆಸಿ ಹೆಚ್ಚಿನ ಮಾಹಿತಿ ಪಡೆದುಕೊಂಡರು

ಕಾಲೇಜಿನ ಉಪನ್ಯಾಸಕಿ ಸಕ್ಕೂಬಾಯಿ ನೆಲ್ಲೂರು ಹಾಗೂ ಪ್ರಥಮ ವರ್ಷದ ಪ್ರಶಿಕ್ಷಣಾರ್ಥಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-19-382773907

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.