ಗುಂಡ್ಲುಪೇಟೆ: ಕಾಡಂಚಿನ ಗ್ರಾಮದ ದೇಶಿಪುರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕೋತ್ಸವ ಹಾಗೂ ಘಟಿಕೋತ್ಸವ ಸಮಾರಂಭ ನಡೆಯಿತು.

ಮಕ್ಕಳು ಪದವಿ ಗೌನ್ ಧರಿಸಿ ಅತಿಥಿಗಳಿಂದ ಪ್ರಮಾಣ ಪತ್ರ ಪಡೆದು ಸಂಭ್ರಮಿಸಿದರು. ಪೋಷಕರು ಮೊಬೈಲ್ ಪೋನ್ನಲ್ಲಿ ಮಕ್ಕಳ ಫೋಟೊಗಳನ್ನು ಸೆರೆ ಹಿಡಿದು ಖುಷಿಪಟ್ಟರು.

ಶಾಲಾ ಮುಖ್ಯ ಶಿಕ್ಷಕ ನಂದೀಶ್, ಮಕ್ಕಳಿಗೆ ಕಲಿಕೆಗೆ ಆಸಕ್ತಿ ಮೂಡಿಸುವ ಸಲುವಾಗಿ ವಿನೂತನ ಕಾರ್ಯಕ್ರಮ ಆಯೋಜನೆ ಮಾಡಿದ್ದರು.

ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಿದ ಕ್ಷೇತ್ರ ಸಂಪನ್ಮೂಲ ಸಮನ್ವಯ ಅಧಿಕಾರಿ ಎಚ್.ಟಿ.ಸರೋಜಾ, ವಿಶ್ವವಿದ್ಯಾಲಯ ಮಟ್ಟದಲ್ಲಿ ನಡೆಸುವಂತಹ ಘಟಿಕೋತ್ಸವದ ಮಾದರಿಯ ಕಾರ್ಯಕ್ರಮವನ್ನು ಶಾಲೆಯಲ್ಲಿ ಆಯೋಜಿಸಿ ಮಕ್ಕಳಿಗೆ ಕಲಿಕೆಯ ಆಸಕ್ತಿ ಮೂಡಿಸುತ್ತಿರುವುದು ಶಿಕ್ಷಕರ ಕ್ರೀಯಾಶೀಲತೆ ತೋರಿಸುತ್ತದೆ. ಪ್ರತಿ ಶಾಲೆಗೂ ಈ ರೀತಿಯ ಶಿಕ್ಷಕರ ಅವಶ್ಯಕತೆ ಇದೆ ಎಂದರು.

ಮಕ್ಕಳು ಮೊಬೈಲ್ ಫೋನ್ನಿಂದ ದೂರವಿದ್ದು, ದೇಶಿ ಆಟಗಳನ್ನು ಹಾಗೂ ಸಾಂಸ್ಕೃತಿಕ ಮತ್ತು ಸೃಜನಶೀಲ ಚಟುವಟಿಕೆಗಳಲ್ಲಿ ಭಾಗವಹಿಸುವಂತೆ ಸಲಹೆ ನೀಡಿದರು.

ಸಿಆರ್ಪಿ ಚಂದ್ರಶೇಖರ್ ಆರ್, ಎಸ್ಡಿಎಂಸಿ ಅಧ್ಯಕ್ಷ ಪ್ರಸನ್ನ, ಮುಖ್ಯಶಿಕ್ಷಕ ನಂದೀಶ್, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ನಾಗರಾಜು. ಉಪಾಧ್ಯಕ್ಷ ಮಾದಲಾಂಬಿಕ, ನಿವೃತ್ತ ಸೈನಿಕ ನಾಗಪ್ಪ ಹಾಜರಿದ್ದರು.

ಮಕ್ಕಳು ವಿವಿಧ ಸಾಂಸ್ಕೃತಿಕ ಮತ್ತು ನೃತ್ಯ ಕಾರ್ಯಕ್ರಮ ನಡೆಸಿಕೊಟ್ಟರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-37-586315224

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.