ಗುಂಡ್ಲುಪೇಟೆ: ಹಸಿರು ಕ್ರಾಂತಿ ಹರಿಕಾರ ಡಾ.ಬಾಬು ಜಗಜೀವನ ರಾಂ ಸಂದೇಶಗಳನ್ನು ಪಾಲಿಸುವಂತೆ ಶಾಸಕ ಎಚ್.ಎಂ.ಗಣೇಶಪ್ರಸಾದ್ ಸಲಹೆ ನೀಡಿದರು.

ಪಟ್ಟಣದ ಪುರಸಭಾ ಬಯಲು ರಂಗ ಮಂದಿರದಲ್ಲಿ ತಾಲ್ಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಮ್ಮಿಕೊಂಡಿದ್ದ ಹಸಿರು ಕ್ರಾಂತಿ ಹರಿಕಾರ ಮಾಜಿ ಉಪ ಪ್ರಧಾನಿ ಬಾಬು ಜಗಜೀವನ ರಾಂ ಅವರ 119ನೇ ಜನ್ಮ ದಿನಚಾರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಾವು ಮೇಲು ಕೀಳು ಎಂಬ ಜಾತಿ ವ್ಯವಸ್ಥೆ ಮಾಡಿಕೊಂಡಿದ್ದೇವೆ. ಆದರೆ ಬಸವಣ್ಣನವರ ತತ್ವವನ್ನು ಪಾಲಿಸಿ ಸಮಾಜದಲ್ಲಿ ಸಾಮರಸ್ಯ ಮತ್ತು ಸಹಬಾಳ್ವೆಯಿಂದ ಜೀವನ ಸಾಧಿಸಬೇಕು ಎಂದು ಹೇಳಿದರು.

ಇಂದಿನ ಜಾತಿ ವ್ಯವಸ್ಥೆಯಲ್ಲಿ ಮೇಲು ಕೀಳು ಎನ್ನುವುದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳದೆ ನಮಗೆ ಇರುವ ಅರ್ಹತೆಯಿಂದ ಮುಂದೆ ಸಾಗಬೇಕು. ಯಾಕೆಂದರೆ ವಿದ್ಯೆ ಎನ್ನುವುದು ಮುಖ್ಯವಾಗಿದ್ದು, ದಿನದಿಂದ ದಿನಕ್ಕೆ ಬದಲಾವಣೆಯಾಗುತ್ತಿದ್ದು, ಶಿಕ್ಷಣ ಪಡೆಯುವುದರ ಮುಖಾಂತರ ನಮ್ಮ ತನವನ್ನು ಪ್ರದರ್ಶನ ಮಾಡಿ ಸಮಾಜಕ್ಕೆ ತಮ್ಮದೇ ಆದ ಕೊಡುಗೆಯನ್ನು ನೀಡಬೇಕಾಗಿದೆ ಎಂದರು.

ಜಗಜೀವನ ರಾಂ ಸೇರಿದಂತೆ ಹಲವಾರು ಮಹನೀಯರು ನಮ್ಮ ದೇಶಕ್ಕಾಗಿ ಹೋರಾಟ ಮಾಡಿದ್ದಾರೆ. ಅದರಲ್ಲಿ ವಿಶೇಷವಾಗಿ ಸಮಾಜಕ್ಕೆ ಕೊಡುಗೆ ನೀಡಿರುವವರನ್ನು ನೆನಪಿಕೊಳ್ಳುತ್ತಿದ್ದೇವೆ. ಅದರಂತೆಯೇ ಬಾಬೂಜಿ ಜನ್ಮ ದಿನವನ್ನು ಕೇವಲ ಆಚರಿಸದೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯುವ ಎಂದರು.

ಮುಖ್ಯ ಭಾಷಣಕಾರ ಎಡತೊರೆ ನಿಂಗರಾಜ್ ಮಾತನಾಡಿ, ಬಿಹಾರದ ಒಂದು ಕುಗ್ರಾಮದಲ್ಲಿ ಜನಿಸಿದ ಜಗಜೀವನರಾಂ ಜಾತಿ ವ್ಯವಸ್ಥೆ ವಿರುದ್ಧ ಹೋರಾಡಿ ಭಾರತದ ಸ್ವಾತಂತ್ರ್ಯ ಸಂಗ್ರಾಮದ ಚಳವಳಿಯಲ್ಲಿ ಧುಮುಕಿ ಸೆರೆವಾಸ ಅನುಭವಿಸಿದರು ಎಂದು ತಿಳಿಸಿದರು.

ಇದಕ್ಕೂ ಮುನ್ನ ಪುರಸಭೆಯಿಂದ ವಿವಿಧ ಕಲಾ ತಂಡಗಳೊಂದಿಗೆ ಅಲಂಕೃತ ಬೆಳ್ಳಿರಥದಲ್ಲಿ ಜಗನಜೀವನರಾಂ ಭಾವಚಿತ್ರವನ್ನು ಇರಿಸಿ ಮೆರವಣಿಗೆ ಮಾಡಲಾಯಿತು.

ಎಸ್ಎಸ್ಎಲ್ಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಎಂ.ಎಸ್.ತನ್ಮಯ್, ಪುರಸಭಾ ಮುಖ್ಯಾಧಿಕಾರಿ ಶರವಣ, ತಾಲ್ಲೂಕು ಆರೋಗ್ಯ ವೈದ್ಯಾಧಿಕಾರಿ ಡಾ. ಅಲೀಂಪಾಷಾ, ತಾಲೂಕು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಮೋಹನ್ ಕುಮಾರ್, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಶಶಿಧರ್, ಸಿಡಿಪಿಒ ಹೇಮಾವತಿ, ಅಬಕಾರಿ ಇನ್ಸ್ಪೆಕ್ಟರ್ ದೀಪು, ಬಿಸಿಎಂ ಅಧಿಕಾರಿ ಲೀಲಾವತಿ, ಪುರಸಭಾ ಮಾಜಿ ಉಪಾಧ್ಯಕ್ಷ ಅಣ್ಣಯ್ಯಸ್ವಾಮಿ, ಟಿ.ರಂಗಸ್ವಾಮಿ, ಸುಭಾಷ್ ಮಾಡ್ರಹಳ್ಳಿ, ಸೋಮಣ್ಣ, ನಿಟ್ರೆ ಮಹದೇವಯ್ಯ, ನಾಗಯ್ಯ, ಶಂಕರ್, ರಮೇಶ್, ಆರ್.ಡಿ ಉಲ್ಲಾಸ್, ಮಣಿಕಂಠ, ನರಸಿಂಹ, ವೆಂಕಟಯ್ಯ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-37-1701213102

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.