ಗುಂಡ್ಲುಪೇಟೆ: ‘ಪ್ರತಿಯೊಬ್ಬರ ಜೀವನದಲ್ಲೂ ಪ್ರಭಾವ ಬೀರುವ ಅಮ್ಮನನ್ನು ವರ್ಣಿಸಲು ಪದಗಳು ಸಾಲುವುದಿಲ್ಲ’ ಎಂದು ಮಾಜಿ ಸಚಿವೆ ಗೀತಾ ಮಹದೇವಪ್ರಸಾದ್ ಅಭಿಪ್ರಾಯಪಟ್ಟರು.

ಶ್ರೀ ಮದ್ದಾನೇಶ್ವರ ಚಾರಿಟಬಲ್ ಟ್ರಸ್ಟ್, ಶ್ರೀ ಮದ್ದಾನೆಶ್ವರ ಪಬ್ಲಿಕ್ ಶಾಲೆ ವತಿಯಿಂದ ಭಾನುವಾರ ನಡೆದ ವಿಶ್ವ ತಾಯಂದಿರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ‘ತಾಯಂದಿರ ದಿನ ಎಲ್ಲರಿಗೂ ವಿಶೇಷ ದಿನ. ಹೀಗಾಗಿ ತಾಯಂದಿರ ದಿನದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ’ ಎಂದರು.

‘ನಾನು ಬರೆದ ‘ತಾಯಿಗಾಗಿ’ ಕವನ ಸಂಕಲನ ಓದಿದ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರು ಸಮಯದ ಅಭಾವದ ಕಾರಣ ಅದೇ ದಿನ ಬೆನ್ನುಡಿ ಬರೆದುಕೊಟ್ಟರು. ನಾನು ನನ್ನ ತಾಯಿಗಾಗಿ ಕವನ ಸಂಕಲನ ಬರೆದಿದ್ದೆ. ತಾಯಿಯನ್ನು ನನ್ನ ಗೆಳತಿ ಎಂದು ಬಣ್ಣಿಸಿದ್ದೆ. ನನ್ನ ತಾಯಿ ತೀರಿಕೊಂಡ ನಂತರ ಕವನಗಳು ಎಂತಹ ಪಾತ್ರ ವಹಿಸುತ್ತವೆ ಎಂಬುದು ಅರ್ಥವಾಯಿತು’ ಎಂದರು.

ಸಮಾರಂಭದ ಸಾನಿಧ್ಯ ವಹಿಸಿದ್ದ ಪಡುಗೂರು ಶಿವಲಿಂಗೇಂದ್ರ ಸ್ವಾಮೀಜಿ ಮಾತನಾಡಿ, ‘ಬೆಳಿಗ್ಗೆ ಏಳುವ, ಸ್ನಾನ, ಊಟ, ತಿಂಡಿ ಮಾಡುವ ಪ್ರತಿಯೊಂದರಲ್ಲೂ ಶಿಸ್ತು ಬೆಳೆಸುವಳು ತಾಯಿ’ ಎಂದು ಬಣ್ಣಿಸಿದರು.

‘ತಾಯಿಯೇ ಮೊದಲ ಗುರು, ಇದೇ ಕಾರಣಕ್ಕೆ ಉಪನಿಷತ್ತಿನಲ್ಲಿ ಮಾತೃದೇವೋ ಭವ, ಪಿತೃದೇವೋ ಭವ, ಆಚಾರ್ಯ ದೇವೋ ಭವ, ಅತಿಥಿ ದೇವೋಭವ ಎಂದು ಹೇಳಲಾಗಿದೆ. ಇಲ್ಲಿಯೂ ತಾಯಿಯೇ ಮೊದಲು ಎಂದರು. ದೇವರು ಎಲ್ಲಾ ಕಡೆ ಇರಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ತಾಯಿ ಸೃಷ್ಟಿಸಿದ್ದಾನೆ ಎಂಬ ಮಾತಿದೆ. ಆದ್ದರಿಂದ ತಾಯಿಯ ಮಹತ್ವ ಸರ್ವ ಕಾಲಕ್ಕೂ ಇರುತ್ತದೆ. ಪ್ರತಿಯೊಬ್ಬ ತಾಯಿಯೂ ಕಲಿಸುವ ಸಂಸ್ಕಾರವನ್ನು ಎಲ್ಲರೂ ಪಾಲಿಸಬೇಕು’ ಎಂದು ಸಲಹೆ ನೀಡಿದರು.

ಮೈಸೂರಿನ ಧ್ವನಿ ಫೌಂಡೇಷನ್ ಸಂಸ್ಥಾಪಕಿ ಡಾ.ಶ್ವೇತಾ ಮಡಪ್ಪಾಡಿ ಮುಖ್ಯ ಭಾಷಣ ಮಾಡಿದರು. ಶ್ರೀ ಮದ್ದಾನೇಶ್ವರ ಪಬ್ಲಿಕ್ ಶಾಲೆ ಪ್ರಾಂಶುಪಾಲ ಎಂ.ಪಿ.ನಟರಾಜು, ಮುಖ್ಯ ಶಿಕ್ಷಕರಾದ ಎಂ.ಪ್ರಕಾಶ ಮತ್ತು ಎಚ್.ಎಂ. ಸೋಮಶೇಖರ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-37-1776833383

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.