ಗುರುಮಠಕಲ್: ‘ಸದೃಢ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಎನ್ಎಸ್ಎಸ್ ಪಾತ್ರ ಹಿರಿದು’ ಎಂದು ಪ್ರಾಂಶುಪಾಲ ಜೆ.ವಿ.ಪುರುಷೋತ್ತಮ ಜೋಶಿ ಹೇಳಿದರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆಯ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಎ-ಘಟಕದಿಂದ ಆಯೋಜಿಸಲಾಗಿದ್ದ ‘ಹರಿಜನವಾಡಾದಲ್ಲಿ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರದ ಉದ್ಘಾಟನಾ ಕಾರ್ಯಕ್ರಮ’ದಲ್ಲಿ ಅವರು ಮಾತನಾಡಿದರು.

‘ಎನ್ಎಸ್ಎಸ್ ವಿದ್ಯಾರ್ಥಿಗಳಲ್ಲಿ ದೇಶಭಕ್ತಿ, ಸಮಾನತೆ, ಭಾವೈಕ್ಯ ಬೆಳೆಸುತ್ತದೆ. ಜತೆಗೆ ಸಾಮಾಜಿಕ ಹೊಣೆಗಾರಿಕೆ, ಶಿಸ್ತು, ಸಂಯಮ, ಸಮಯ ಪ್ರಜ್ಞೆಯನ್ನ ಕಲಿಸಿಕೊಡುತ್ತದೆ. ಸಮುದಾಯಕ್ಕೆ ಈ ಕಾರ್ಯಕ್ರಮ ವೈಯಕ್ತಿಕ ಬೆಳವಣಿಗೆಯೊಡನೆ ನಾಯಕತ್ವ ಮತ್ತು ನಾಗರಿಕರ ಭಾಗವಹಿಸುವಿಕೆ ಉತ್ತೇಜಿಸುವ ವೇದಿಕೆಯಾಗಿದೆ’ ಎಂದು ತಿಳಿಸಿದರು.

ಎನ್ಎಸ್ಎಸ್ ಸಂಯೋಜಕ ಬಾಬುರಾಯ ದೊರೆ ಮಾತನಾಡಿ, ‘ಭಾರತ ಹಳ್ಳಿಗಳ ದೇಶ, ಗ್ರಾಮಗಳು ಅಭಿವೃದ್ಧಿಯಾದಾಗ ದೇಶ ತಾನಾಗಿಯೇ ಅಭಿವೃದ್ಧಿ ಹೊಂದಲಿದೆ. ಗ್ರಾಮೀಣ ಪ್ರದೇಶದ ಉದ್ಧಾರವಾಗದೆ ದೇಶದ ಉನ್ನತಿ ಅಸಾಧ್ಯ’ ಎಂದು ಅಭಿಪ್ರಾಯಪಟ್ಟರು.

ಫ್ರಂಟ್ಲೈನ್ ಶಿಕ್ಷಣ ಸಂಸ್ಥೆಯ ಪ್ರಾಂಶುಪಾಲೆ ಮಂಜುಳಾರೆಡ್ಡಿ ಗವಿನೋಳ ಮಾತನಾಡಿರು.

ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಭೀಮಶಪ್ಪ ಗುಡಿಸೆ ಹಾಗೂ ಡಿಎಸ್ಎಸ್ ತಾಲ್ಲೂಕು ಅಧ್ಯಕ್ಷ ಲಾಲಪ್ಪ ತಲಾರಿ ಹರಿಜನವಾಡ ಬಡಾವಣೆಯನ್ನು ‘ದತ್ತು ಗ್ರಾಮ’ವನ್ನಾಗಿ ಸ್ವೀಕರಿಸಿದರು.

ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ಗೋವಿಂದ ಮೇಂಗಜಿ, ಎಸ್ಡಿಎಂಸಿ ಅಧ್ಯಕ್ಷ ಭೀಮಶಪ್ಪ ಮೀನಿಂಟಿ, ಉಪನ್ಯಾಸಕರಾದ ಮಹ್ಮದ್ ಇಮ್ರಾನ್ ಖಾಜಿ, ಮಹೇಶ ಚಂದಾಪೂರ, ಶ್ವೇತಾ ಎಂ.ಬಿ., ಬಿಚ್ಚಪ್ಪ ಕೆ., ಕೃಷ್ಣ ಚಪೆಟ್ಲಾ, ಬಾಲಪ್ಪ ಕಟ್ಟೆಲ್, ಸಂಗೀತಾ ನಾಗೂರ, ವಿಜಯಲಕ್ಷ್ಮೀ ಪಾಟೀಲ, ಇಮ್ತಾಯಾಜ್, ಪ್ರೇಮಲತಾ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-30-1156857792

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.