ಗುರುಮಠಕಲ್: ‘ಸೃಷ್ಟಿಯಲ್ಲಿ ಪ್ರತಿಯೊಂದಕ್ಕೂ ಭಿನ್ನತೆ, ಸಾಮರ್ಥ್ಯ ಮತ್ತು ವೈಶಿಷ್ಟ್ಯತೆ ಇದೆ. ಇತರರೊಡನೆ ಸ್ಪರ್ಧಿಸುವ ಬದಲಿಗೆ ನಮ್ಮೊಡನೆ ನಾವೇ ಸ್ಪರ್ಧಿಸುತ್ತಾ, ನಮ್ಮ ಸಾಮರ್ಥ್ಯ ವೃದ್ಧಿಸಿಕೊಂಡರೆ ಸಾಧಕರಾಗುವೆವು’ ಎಂದು ಪ್ರಾಂಶುಪಾಲ ಜೆ.ವಿ.ಪುರುಷೋತ್ತಮ ಜೋಶಿ ಅಭಿಪ್ರಾಯಪಟ್ಟರು.

ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಮಹಾವಿದ್ಯಾಲಯ ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರದ ಎನ್ಎಸ್ಎಸ್ ವಿಭಾಗದ ಎ-ಘಟಕದಿಂದ ‘ಹರಿಜನವಾಡಾದಲ್ಲಿ ಎನ್ಎಸ್ಎಸ್ ವಾರ್ಷಿಕ ವಿಶೇಷ ಶಿಬಿರ’ದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ರಾಷ್ಟ್ರೀಯ ಸೇವಾ ಯೋಜನೆಯ ಶಿಬಿರಗಳು ಮನೋಸ್ಥೈರ್ಯ ಹೆಚ್ಚಿಸುತ್ತವೆ. ಯುವ ಸಮುದಾಯ ನಮ್ಮ ದೇಶದ ನಿಜವಾದ ಶಕ್ತಿಯಾಗಿದೆ. ಆದ್ದರಿಂದ ನೀವೆಲ್ಲಾ ಕೌಶಲ ಮತ್ತು ಸಾಮರ್ಥ್ಯ ಹೆಚ್ಚಿಸಿಕೊಳ್ಳುತ್ತಾ ಯಶಸ್ವಿಯಾಗಬೇಕು’ ಎಂದು ಹೇಳಿದರು.

ಉಪನ್ಯಾಸಕ ರಾಯಪ್ಪ ಡೋಣಗಾಂವ ಮಾತನಾಡಿ, ‘ಯುವಕರು ದೇಶದ ಆಸ್ತಿ. ಆದರೆ, ವಿದ್ಯಾರ್ಥಿಗಳು ದುಶ್ಚಟಗಳ, ಸಾಮಾಜಿಕ ಜಾಲತಾಣಗಳ ದಾಸರಾಗಿ ತಮ್ಮ ಶಕ್ತಿಯನ್ನು ವ್ಯರ್ಥ್ಯ ಮಾಡುತ್ತಿದ್ದಾರೆ. ಜೀವನದಲ್ಲಿ ಸಾಧನೆ ಬಹಳ ಮುಖ್ಯ, ಸಾಧಕರ ಸಾಲಿನಲ್ಲಿ ನೀವು ಕಾಣಿಸಿಕೊಳ್ಳಬೇಕು. ಇನ್ನೊಬ್ಬರ ಚಿಂತೆ ಬಿಟ್ಟು ನಿಮ್ಮ ಏಳಿಗೆಗೆ ಶ್ರಮಿಸಿ’ ಎಂದು ಸಲಹೆ ನೀಡಿದರು.

ಮುಖಂಡ ಕೆ.ದೇವದಾಸ ಎನ್ಎಸ್ಎಸ್ ಶಿಬಿರಾರ್ಥಿಗಳನ್ನು ಶ್ಲಾಘಿಸಿದರು. ಎನ್ಎಸ್ಎಸ್ ಸಂಚಾಲಕ ಬಾಬುರಾಯ ದೊರೆ ಮಾತನಾಡಿದರು.

ಸಮಾರೋಪ ಸಮಾರಂಭದಲ್ಲಿ ಉಪನ್ಯಾಸಕರಾದ ಮಹ್ಮದ್ ಇಮ್ರಾನ್ ಖಾಜಿ, ಮಹೇಶ್ ಚಂದಾಪೂರ, ಶ್ವೇತಾ ಎಂ.ಬಿ., ಬಿಚ್ಚಪ್ಪ. ಕೃಷ್ಣ ಚಪೆಟ್ಲಾ, ಬಾಲಪ್ಪ ಕಟ್ಟೆಲ್, ಸಂಗೀತಾ ನಾಗೂರ, ವಿಜಯಲಕ್ಷ್ಮೀ ಪಾಟೀಲ, ಇಮ್ತಾಯಾಜ್, ಪ್ರೇಮಲತಾ, ಶ್ರೀನಿವಾಸ, ಪ್ರವೀಣ ಸೇರಿದಂತೆ ವಿದ್ಯಾರ್ಥಿಗಳು ಮತ್ತಿತರರು ಉಪಸ್ಥಿತರಿದ್ದರು.

ಶಿಬಿರಾರ್ಥಿಗಳಾದ ಜ್ಯೋತಿ ಅವರ ತಂಡ ನಿರ್ವಹಿಸಿದರು. ನಿರ್ಮಲ ಸ್ವಾಗತಿಸಿದರು. ರಾಮುಲಮ್ಮ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-30-2044269826

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.