ಹುಣಸಗಿ: ‘ಮುನ್ನುರು ಪಗರಟಗಿ ಎಂದು ಕರೆಯಲಾಗುತ್ತಿರುವ ಇಂದಿನ ಹಗರಟಗಿಯು ತನ್ನದೇ ಆದ ಐತಿಹಾಸಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಹೊಂದಿದೆ’ ಎಂದು ಜನಕ ಕಾಲೇಜು ಪ್ರಾಚಾರ್ಯ ಸೋಮಶೇಖರ ಪಂಜಗಲ್ಲ ಹೇಳಿದರು.

ಹುಣಸಗಿ ತಾಲ್ಲೂಕಿನ ಹಗರಟಗಿ ಗ್ರಾಮಕ್ಕೆ ವಿದ್ಯಾರ್ಥಿಗಳೊಂದಿಗೆ ಭೇಟಿ ನೀಡಿ ಕ್ಷೇತ್ರ ಕಾರ್ಯ ಕೈಗೊಂಡು ಬಳಿಕ ಅವರು ಮಾತನಾಡಿದರು.

‘ಈ ಗ್ರಾಮದಲ್ಲಿ ಹಿಂದೆ ನೂರಾರು ದೇವಸ್ಥಾನಗಳು, ಬಾವಿ ಶಿವಲಿಂಗ ಇದ್ದವು ಎಂದು ಇಲ್ಲಿನ ಇತಿಹಾಸದಿಂದ ತಿಳಿದು ಬರುತ್ತದೆ. ಮಹಾಭಾರತ ಕಾಲದ ಸವಿನೆನಪಿಗಾಗಿ ಧರ್ಮರಾಜ, ಭೀಮಸೇನ, ನಕುಲ, ಸಹದೇವ, ಕರ್ಣ, ತ್ರೀಕೂಟೇಶ್ವರ, ಋಷಿಗುಂಡ, ಅಣ್ಣ ತಂಗಿ ಸೇರಿದಂತೆ ಇತರರ ಹೆಸರಿನಲ್ಲಿ ದೇವಸ್ಥಾನಗಳಿರುವುದು ಇಂದಿಗೂ ಕಾಣ ಸಿಗುತ್ತದೆ. ಅಲ್ಲದೇ ಈ ಹಿಂದೆ ದೊಡ್ಡ ಅಗ್ರಹಾರವೂ ಆಗಿತ್ತು ಎಂದು ಇತಿಹಾಸ ಹೇಳುತ್ತದೆ’ ಎಂದು ಹೇಳಿದರು.

ಇತಿಹಾಸ ಉಪನ್ಯಾಸಕ ಶಶಿಕುಮಾರ ಪತ್ತಾರ ಮಾತನಾಡಿ, ‘ಇಲ್ಲಿ ದೊರೆತಿರುವ ಶಾಸನಗಳು ಸುಮಾರು ಸಾವಿರಾರು ವರ್ಷಗಳ ಇತಿಹಾಸವನ್ನು ತಿಳಿಸುತ್ತವೆ. ಕಲ್ಯಾಣ ಚಾಲುಕ್ಯರು, ಕಳಚೂರಿಗಳು, ದೇವಗಿರಿ ಯಾದವರು ಆಡಳಿತದ ಕುರಿತು ಹಾಗೂ ಭೂದತ್ತಿ ಕುರಿತು ಶಾಸನಗಳು ತಿಳಿಸುತ್ತವೆ. ಆದರೆ ಬಹುತೇಕ ಶಾಸನಗಳು ತುಟಿತಗೊಂಡಿರುವದು ದುರಂತದ ಸಂಗತಿ’ ಎಂದರು.

‘ಹಿರಿಯ ಸಂಶೋಧಕ ಹನುಮಾಕ್ಷಿ ಗೋಗಿ ಅವರು ಹಗರಟಗಿ ನಾಡು ಎಂಬ ಪುಸ್ತಕದಲ್ಲಿ ಈ ಕುರಿತು ವಿವರವಾಗಿ ಉಲ್ಲೇಖಿಸಿದ್ದಾರೆ. ಅಲ್ಲದೇ ಈ ಭಾಗದ ಸಂಶೋಧಕರು, ಲೇಖಕರು ಇಲ್ಲಿನ ದೇವಸ್ಥಾನ ಮತ್ತು ಶಾಸನಗಳ ಸಾಂಸ್ಕೃತಿಕ ನೆಲೆಗಳ ಕುರಿತು ತಮ್ಮದೇ ರೀತಿಯಲ್ಲಿ ಕಟ್ಟಿಕೊಟ್ಟಿದ್ದಾರೆ’ ಎಂದು ತಿಳಿಸಿದರು.

ವಿದ್ಯಾರ್ಥಿಗಳು ಎಲ್ಲ ದೇವಸ್ಥಾನ ಹಾಗೂ ಗ್ರಾಮದಲ್ಲಿ ಸಂಚರಿಸಿ ಕ್ಷೇತ್ರ ಕಾರ್ಯ ಕೈಗೊಂಡು ಬಳಿಕ ಮಾಹಿತಿ ಸಂಗ್ರಹಿಸಿದರು.

ಈ ಸಂದರ್ಭದಲ್ಲಿ ಕಲಾ ವಿಭಾಗದ 4ನೇ ಸೆಮಿಸ್ಟರ್ ವಿದ್ಯಾರ್ಥಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260518-30-45390913

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.