ಹಗರಿಬೊಮ್ಮನಹಳ್ಳಿ: ಕನ್ನಡ ಭಾಷೆ ಉಳಿಸುವಲ್ಲಿ ಮತ್ತು ಅದನ್ನು ಶ್ರೀಮಂತಗೊಳಿಸುವಲ್ಲಿ ನಾಲ್ವಾಡಿ ಕೃಷ್ಣರಾಜ ಒಡೆಯರ್ ಸೇರಿದಂತೆ ಅನೇಕರು ಶ್ರಮಿಸಿದರು ಎಂದು ಸಾಹಿತಿ ಸುಧಾ ಚಿದಾನಂದಗೌಡ ಹೇಳಿದರು.

ಪಟ್ಟಣದ ರೇಣುಕ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ನಿಂದ ಮಂಗಳವಾರ ಹಮ್ಮಿಕೊಂಡಿದ್ದ ಕಸಾಪ 112ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಅವರು ಮಾತನಾಡಿದರು.

ನಿವೃತ್ತ ಪ್ರಾಚಾರ್ಯೆ ಪಿ.ಇಂದುಮತಿ ಉದ್ಘಾಟಿಸಿ, ಕನ್ನಡ ಭಾಷೆ ಎಲ್ಲರ ಉಸಿರಾಗಬೇಕು, ಮಾತೃಭಾಷೆಯ ಮೂಲಕ ಕಲಿತದ್ದೇ ಕೊನೆಯವರೆಗೂ ಉಳಿಯುವುದು ಎಂದು ಅಭಿಪ್ರಾಯಪಟ್ಟರು. ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಜೆ.ಎಂ.ವೀರಸಂಗಯ್ಯ ಮಾತನಾಡಿದರು.

ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಗೂಳಪ್ಪ ಹುಲ್ಮನಿ ಅಧ್ಯಕ್ಷತೆ ವಹಿಸಿದ್ದರು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಜೆ.ಎಂ.ವೀರಸಂಗಯ್ಯ, ಗೊಂದಲಿಗರ ರಾಮಣ್ಣ, ಕಿಂಡ್ರಿ ಲಕ್ಷ್ಮಿಪತಿ, ಎಲ್.ರೆಡ್ಡಿನಾಯ್ಕ, ಈ.ಕೃಷ್ಣಮೂರ್ತಿ, ಸಂಚಿ ಶಿವಕುಮಾರ್, ಹುರಕಡ್ಲಿ ಶಿವಕುಮಾರ್, ಕೆ.ಎಸ್.ಓಂಪ್ರಕಾಶ್, ಆನಂದ ಕಡ್ಲಿ, ತಳವಾರ ಕೊಟ್ರೇಶ್, ಪಿ.ಇಂದುಮತಿ, ಸುಧಾ ಚಿದಾನಂದಗೌಡ, ಜಿ.ಎಂ.ನಾಗಭೂಷಣಯ್ಯ ಅವರನ್ನು ಸನ್ಮಾನಿಸಲಾಯಿತು. ವಿ.ಬಿ.ಮಲ್ಲೇಶ್, ಎಚ್.ಬೆಟ್ಟಪ್ಪ, ಎಲ್.ಚಂದ್ರನಾಯ್ಕ, ಕಡ್ಲಿ ಗುರುಬಸವರಾಜ, ಕುಮಾರಸ್ವಾಮಿ, ಮಾಲವಿ ಚಾಂದಪೀರ, ಬಿ.ಮಾರುತಿ, ಪಿ.ಜಿ.ಪ್ರಹ್ಲಾದ, ಗಣೇಶ್ರಾವ್ ಹವಾಲ್ದಾರ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-25-709277639

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.