ಹಗರಿಬೊಮ್ಮನಹಳ್ಳಿ: ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಚುನಾವಣೆ ಏಪ್ರಿಲ್ 19ರಂದು ನಡೆಯಲಿದ್ದು, ಇಲ್ಲಿನ ಗುರುಭವನದಲ್ಲಿ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.

ಒಟ್ಟು 10 ಸ್ಥಾನಗಳಿಗೆ 22 ಸ್ಪರ್ಧಿಗಳು ಕಣದಲ್ಲಿದ್ದು, ಮೂರು ಸ್ಥಾನಗಳು ಮಹಿಳೆಯರಿಗೆ ಮೀಸಲಾಗಿವೆ. 514 ಶಿಕ್ಷಕರು ಮತ ಚಲಾಯಿಸುವ ಹಕ್ಕು ಪಡೆದಿದ್ದಾರೆ.

ಬೇಸಿಗೆ ರಜೆ ಇರುವುದರಿಂದ ಬಹುತೇಕ ಶಿಕ್ಷಕರು ತಮ್ಮ ಊರುಗಳಿಗೆ ತೆರಳಿದ್ದಾರೆ. ಹಾಗಾಗಿ, ಸ್ಪರ್ಧಿಗಳು ಮತದಾರ ಶಿಕ್ಷಕರನ್ನು ಭೇಟಿ ಮಾಡಲು ಹರಸಾಹಸಪಟ್ಟಿದ್ದಾರೆ. ಬಿರು ಬಿಸಿಲಿನ ತಾಪಕ್ಕೆ ಹಲವರು ಹೈರಾಣಾಗಿದ್ದಾರೆ.

ಪ್ರಾಮಾಣಿಕ ಸ್ಪಂದನಾಶೀಲ ತಂಡ ಮತ್ತು ಪ್ರಾಮಾಣಿಕ ಸಮಾನ ಮನಸ್ಕ ಶಿಕ್ಷಕರ ತಂಡದ ಹೆಸರಿನಲ್ಲಿ ಸ್ಪರ್ಧಿಗಳು ಮತಯಾಚನೆ ಮಾಡಿದ್ದಾರೆ. ಇನ್ನಿಬ್ಬರು ಸ್ವತಂತ್ರ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದಾರೆ. ಎರಡೂ ತಂಡಗಳು ಹತ್ತಾರು ಭರವಸೆಗಳ ಪ್ರಣಾಳಿಕೆಯ ಕರಪತ್ರವನ್ನು ಹಿಡಿದು, ಮತದಾರ ಶಿಕ್ಷಕರ ಮನೆಗಳಿಗೆ ಭೇಟಿ ನೀಡಿವೆ.

ಹಾಲಿ ಅಧ್ಯಕ್ಷ ಎಚ್. ಲೋಕಪ್ಪ, ಪ್ರಧಾನ ಕಾರ್ಯದರ್ಶಿ ಬಿ. ಕೊಟ್ರಪ್ಪ, ಜಿಲ್ಲಾ ಖಜಾಂಚಿ ಹೀರ್ಯಾನಾಯ್ಕ, ತಾಲ್ಲೂಕು ಖಜಾಂಚಿ ಟಿ. ಸೋಮಶೇಖರ, ನಿರ್ದೇಶಕರಾದ ದಾದೀಬಿ, ದೀಪಿಕಾ, ಇಟ್ಟಿಗಿ ಮಂಜುನಾಥ, ಇಟ್ಟಿಗಿ ಪ್ರಭಾಕರ, ಹನುಮರೆಡ್ಡಿ, ಹರೀಶ್ ಅವರು ಮರು ಆಯ್ಕೆ ಬಯಸಿ ಸ್ಪರ್ಧಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260418-25-405437309

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.