ಹಲಗೂರು: ಸಮೀಪದ ಹುಲ್ಲಾಗಾಲ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿ ವಿದ್ಯಾರ್ಥಿಗಳ ಪರವಾಗಿ ಪೋಷಕರು ₹15 ಸಾವಿರ ಮೌಲ್ಯದ ನೀರು ಶುದ್ಧೀಕರಣ ಯಂತ್ರವನ್ನು ಶಾಲೆಗೆ ಕೊಡುಗೆಯಾಗಿ ನೀಡಿದರು.

ಗ್ರಾಮದ ಪೋಷಕರು ನಮ್ಮ ಶಾಲೆಯ ಏಳಿಗೆಗಾಗಿ ಕೈಜೋಡಿಸಿದ್ದು, ಶಾಲೆಗೆ ಅಗತ್ಯವಿರುವ ಹಲವಾರು ಮೂಲ ಸೌಕರ್ಯಗಳನ್ನು ಕಲ್ಪಿಸಿದ್ದಾರೆ. ಪ್ರತಿ ವರ್ಷ ಏಳನೇ ತರಗತಿ ಕಲಿತು ಬೀಳ್ಕೊಡುವ ಸಂಧರ್ಭದಲ್ಲಿ ಒಂದೊಂದು ಕೊಡುಗೆ ನೀಡಿದ್ದು, ಈ ಬಾರಿ ನೀರು ಶುದ್ಧೀಕರಣ ಯಂತ್ರ ನೀಡಿರುವುದು ಸಂತಸ ತಂದಿದೆ. ಶಾಲೆಯಲ್ಲಿ ಎಲ್ಲಾ ಮಕ್ಕಳಿಗೂ ಶುದ್ದೀಕರಿಸಿದ ನೀರು ನೀಡಲು ಸಹಕಾರಿಯಾಗಲಿದೆ. ಸಹಕಾರ ನೀಡಿದ ಪೋಷಕರಿಗೆ ಅಭಿನಂದನೆ ಸಲ್ಲಿಸುವೆ ಎಂದು ಮುಖ್ಯ ಶಿಕ್ಷಕಿ ಹೇಮಲತಾ ತಿಳಿಸಿದರು.

ಈ ಸಂದರ್ಭದಲ್ಲಿ ಶಿಕ್ಷಕಿ ಶಿಲ್ಪಶ್ರೀ, ಅದರ್ಶ, ಅನ್ನಪೂರ್ಣ, ವಿದ್ಯಾರ್ಥಿಗಳಾದ ಹಂಸ, ಯೋಗಶ್ರೀ, ಯೋಗಿತಾ, ಸ್ನೇಹ, ಲಿಖಿತಾ, ಮಾನಸ, ಹರ್ಷಿತ್, ಪ್ರಜ್ವಲ್ ಗೌಡ ಮತ್ತು ಪೋಷಕರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-40-305768598

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.