ಹಳಿಯಾಳ: ‘ನೀರು ಅತ್ಯಮೂಲ್ಯ ಸಂಪತ್ತಾಗಿದ್ದು, ಜಾಗರುಕತೆಯಿಂದ ನೀರು ಅಪವ್ಯಯವಾಗದಂತೆ ಪ್ರತಿಯೊಬ್ಬರೂ ಬಳಸಬೇಕು’ ಎಂದು ಅಲ್ಟ್ರಾಟೆಕ್ ಸಿಮೆಂಟ್ ಪ್ರೈ.ಲಿ ನ ಉತ್ತರ ಕರ್ನಾಟಕ ಹಾಗೂ ಗೋವಾ ಭಾಗದ ತಾಂತ್ರಿಕ ಮುಖ್ಯಸ್ಥ ಅಶೋಕ ರೆಡ್ಡಿ ಕೊಲ್ಲೂರ ಹೇಳಿದರು.

ಇತ್ತೀಚಿಗೆ ಕೆಎಲ್ಎಸ್ವಿ ಡಿ ಐ ಟಿ ಹಳಿಯಾಳದ ಸಿವಿಲ ವಿಭಾಗವು ನೀರು ಸಂರಕ್ಷಣೆ ಕುರಿತು ನಡೆದ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

ನೀರಿನ ಸಂರಕ್ಷಣೆಗೆ ಬಳಕೆ ಮಾಡಲಾಗುತ್ತಿರುವ ನೂತನ ತಂತ್ರಜ್ಞಾನದ ಕುರಿತಾಗಿ ವಿವರಿಸಿ ಕೊಳಚೆ ನೀರಿನ ಮರುಶುದ್ಧೀಕರಣ ಹಾಗೂ ಸಮರ್ಪಕ ಬಳಕೆ ತಿಳಿಸುತ್ತ, ಭೂಮಿಯಲ್ಲಿ ಅಂತರ್ಜಲ ಹೆಚ್ಚಿಸಲು ತೆಗೆದುಕೊಳ್ಳಬೇಕಾದ ಉಪಕ್ರಮದ ಕುರಿತಾಗಿ ತಿಳಿಸಿದರು.

ಪ್ರಾಚಾರ್ಯ ವಿ.ಎ. ಕುಲಕರ್ಣಿ, ಮಹಾವಿದ್ಯಾಲಯವು ಅಂತರ್ಜಲ ಸಮೃದ್ಧಿಕರಣಕ್ಕೆ ಮಳೆ ಕೊಯ್ಲು ಅಳವಡಿಸಿ ಕೊಂಡಿದೆ ಎಂದರು.

ಕಾಂಕ್ರೀಟ್ ಟೆಕ್ನಾಲಜಿ ವಿಷಯದಲ್ಲಿ ಅತಿ ಹೆಚ್ಚು ಅಂಕಗಳಿಸಿದ ಅಭಿಷೇಕ ಯಂತೂರ್ ಗೆ ಅಲ್ಟ್ರಾಟೇಕ್ ಕಂಪನಿ ವತಿಯಿಂದ ಸನ್ಮಾನಿಸಲಾಯಿತು.

ಅಲ್ಟ್ರಾಟೇಕ್ ಸಿಮೆಂಟ್ನ ಗಿರೀಶ ಪವಾರ ಹಾಗೂ ಪ್ರಸನ್ನ ಉಪ್ಪಿನ, ವಿಭಾಗ ಮುಖ್ಯಸ್ಥ ಪ್ರೊ.ಹರ್ಷ ಜಾಧವ, ಡಾ.ಸ್ನೇಹಾ ಕುಲಕರ್ಣಿ, ಪ್ರೊ.ಸೀಮಾ ಬಸರಿಕಟ್ಟಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-20-1465758722

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.