ಹಳಿಯಾಳ: ‘ಇಂದು ಶಿಕ್ಷಣ ಕ್ಷೇತ್ರ ಉತ್ತಮ ಸಾಧನೆ ಪಥದಲ್ಲಿದ್ದು, ವಿದ್ಯಾರ್ಥಿನಿಯರು ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ವಿದ್ಯಾರ್ಥಿ ಜೀವನ ಗುರಿಯ ಕಡೆಗೆ ಸಾಗಿದರೆ ಸಾಧನೆ ಶಿಖರ ತಲುಪಬಹುದು’ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಕೌಸಾಳಿ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಪ್ರಾಧ್ಯಾಪಕ ಎನ್. ರಾಮಾಂಜನೇಯಲು ಹೇಳಿದರು.

ಇಲ್ಲಿನ ಕೆ.ಎಲ್.ಎಸ್. ಪದವಿ ಮಹಾವಿದ್ಯಾಲಯದಲ್ಲಿ ಗುರುವಾರ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ‘ಉಡಾನ್-2026’ ಸಮಾರಂಭದಲ್ಲಿ ಅವರು ಮಾತನಾಡಿದರು.

ಪ್ರಾಚಾರ್ಯ ಶ್ರೀನಿವಾಸ ಪ್ರಭು ಮಾತನಾಡಿ, ‘ವಿದ್ಯಾರ್ಥಿಗಳು ತಾವು ಸಾಗಿದ ಪ್ರತಿ ವರ್ಷವನ್ನು ಸಿಂಹಾವಲೋಕನ ಮಾಡಿಕೊಳ್ಳುತ್ತಾ ಸಾಗಬೇಕು. ವಿದ್ಯಾರ್ಥಿಗಳು ಸಾಧನೆಯ ಬೆನ್ನೇರಬೇಕು. ಮುಂದಿನ ದಿನಗಳಲ್ಲಿ ತಾವೇ ಇಂತಹ ಕಾರ್ಯಕ್ರಮಕ್ಕೆ ಅತಿಥಿಯಾಗಿ ಬರಬೇಕು. ಆ ನಿಟ್ಟಿನಲ್ಲಿ ತಮ್ಮ ಕಲಿಕಾ ಸಾಮರ್ಥ್ಯ ಇರಲಿ’ ಎಂದರು.

ಶೈಕ್ಷಣಿಕ ಸಂಯೋಜಕ ದೀಪಾ ನಾಯ್ಕ ವಾರ್ಷಿಕ ವರದಿ ವಾಚಿಸಿದರು. ಸಾಂಸ್ಕೃತಿಕ ಸಂಯೋಜಕಿ ಸಂಗೀತಾ ಪ್ರಭು, ಕ್ರೀಡಾ ನಿರ್ದೇಶಕ ಮಲ್ಲಿಕಾರ್ಜುನ ಕಾಜಗಾರ, ಪ್ರಾಧ್ಯಾಪಕಿ ಅನುಷಾ ನಾಯ್ಕವಾಡಕರ, ಪ್ರಗತಿ ಲಕ್ಕುಂಡಿ ಇದ್ದರು. ವಿದ್ಯಾರ್ಥಿನಿ ಅನನ್ಯಾ ಪಾಟ್ನೇಕರ, ಸದ್ಗುಣಿ ತಾಮಾಸೆ ನಿರೂಪಿಸಿದರು. ಲಾವಣ್ಯ ಬಾಬುರಾವಕರ ಸ್ವಾಗತಿಸಿದರು. ಪವನ ಜಾಧವ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260516-20-659065563

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.