ಹಳಿಯಾಳ: ‘ವಿದ್ಯಾರ್ಥಿಗಳು ಕೇವಲ ಉತ್ತಮ ಅಂಕ ಗಳಿಸಿದರೆ ಸಾಲದು, ಸಾಮಾನ್ಯ ಜ್ಞಾನ, ಕೌಶಲ ಅಭಿವೃದ್ಧಿ ಬೆಳೆಸಿಕೊಂಡಾಗ ಮಾತ್ರ ಭವಿಷ್ಯದಲ್ಲಿ ಯಶಸ್ವಿಯಾಗಲು ಸಾಧ್ಯ’ ಎಂದು ಶಾಸಕ ಆರ.ವಿ.ದೇಶಪಾಂಡೆ ಹೇಳಿದರು.

ಇಲ್ಲಿನ ಕೆಎಲ್ಎಸ್ ವಿಡಿಐಟಿ ಮಹಾವಿದ್ಯಾಲಯದ 22ನೇ ಸಂಸ್ಥಾಪನಾ ದಿನದ ಅಂಗವಾಗಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

‘ಇಂದು ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ತಂತ್ರಜ್ಞಾನ ಅರಿತುಕೊಂಡು ಆಧುನಿಕ ಕೌಶಲವನ್ನು ನಮ್ಮಲ್ಲಿ ಅಳವಡಿಸಿ ಕೊಳ್ಳಬೇಕು. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಶಿಸ್ತು, ಸಮಯ ಪ್ರಜ್ಞೆ ಇರಬೇಕು’ ಎಂದರು.

ಇನ್ಫೋಸಿಸ್ ಹುಬ್ಬಳಿ ಶಾಖೆಯ ಮುಖ್ಯಸ್ಥ ಅಲ್ಲಾಭಕ್ಷ ಅಸಾದುಲ್ಲಾ ಮತನಾಡಿ, ‘ತಾಂತ್ರಿಕ ಜ್ಞಾನದ ಜೊತೆಗೆ ಉತ್ತಮ ನಡವಳಿಕೆ ಹೊಂದಬೇಕು. ಅದು ಒಳ್ಳೆಯ ಜೀವನ ರೂಪಿಸಿಕೊಳ್ಳಲು ಸಹಕಾರಿ’ ಎಂದರು.

ಇಜೋನ್ ಎಲೆಕ್ಟ್ರಿಕ್ ವೆಹಿಕಲ್ ಸಂಸ್ಥೆಯ ಸ್ಥಾಪಕರು ಹಾಗೂ ನಿರ್ದೇಶಕ ಗಣಪತಿ ಸೋಡಿಗದ್ದೆ, ಎಲೆಕ್ಟ್ರಿಕಲ್ ವೆಹಿಕಲ್ ಕ್ಷೇತ್ರದಲ್ಲಿ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹೇರಳ ಉದ್ಯೋಗಾವಕಾಶಗಳಿದ್ದು, ಅವಶ್ಯವಿರುವ ಕೌಶಲಗಳನ್ನು ಹೊಂದುವಂತೆ ತಿಳಿ ಹೇಳಿದರು.

ಭಾರತೀಯ ನಾಗರಿಕ ಸೇವಾ ಪರೀಕ್ಷೆಯಲ್ಲಿ 739ನೇ ರ್ಯಾಂಕ್ ಪಡೆದ ಮಹಾವಿದ್ಯಾಲಯದ ಮಾಜಿ ವಿದ್ಯಾರ್ಥಿ ಬಸವರಾಜ ಪಾಟೀಲ, ಯುಪಿಎಸ್ಸಿ ಪರೀಕ್ಷೆ ಸಿದ್ಧತೆ ಕುರಿತು ತಿಳಿಸಿದರು.

ಕೆಎಲ್ಎಸ್ ಸಂಸ್ಥೆಯ ಅಧ್ಯಕ್ಷ ಪಿ.ಎಸ್. ಸಾವ್ಕಾರ, ಚೇರಮನ್ ಅನಂತ ಕೆ.ಟಗಾರೆ, ಉಪಾಧ್ಯಕ್ಷ ದೀಪಕ ಕುಲಕರ್ಣಿ ಆಡಳಿತ ಮಂಡಳಿಯ ಅಧ್ಯಕ್ಷ ಪ್ರಶಾಂತ ಕುಲಕರ್ಣಿ, ಪ್ರಾಚಾರ್ಯ ಡಾ. ವಿ.ಎ. ಕುಲಕರ್ಣಿ, ಕೆಎಲ್ಎಸ್ ಆಡಳಿತ ಮಂಡಳಿಯ ಪದಾಧಿಕಾರಿಗಳಾದ ಎಸ್.ಎಂ. ಕುಲಕರ್ಣಿ, ಎ.ಎ. ಕುಲಕರ್ಣಿ, ಸಂಜೀವ್ ಅಧ್ಯಾಪಕ, ಕರ್ನಾಟಕ ಬ್ಯಾಂಕ್ ದಾಂಡೇಲಿ ಶಾಖೆಯ ವ್ಯವಸ್ಥಾಪಕ ವೀರೇಂದ್ರ ಶೇಟ, ಜಯರಾಮ್ ಪ್ರಭು, ಹುಬ್ಬಳ್ಳಿಯ ಡೊಕೆಟ್ರನ್ ಸಂಸ್ಥಾಪಕ ಅಜಯ್ ಕಬಾಡಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260512-20-1024135696

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.