ಹೊಸಪೇಟೆ (ವಿಜಯನಗರ): ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ಗುಣಮಟ್ಟದ ಬಗ್ಗೆ ಆಗಾಗ ಚರ್ಚೆ ಆಗುತ್ತಲೇ ಇದೆ. ಮಾನ್ಯತೆ ಪಡೆದ ಸಂಶೋಧನಾ ಕೇಂದ್ರಗಳಲ್ಲಿ ನಡೆಯುತ್ತಿರುವ ಪಿಎಚ್.ಡಿ ಕಾರ್ಯಕ್ರಮಗಳ ಗುಣಮಟ್ಟದ ಬಗ್ಗೆ ಅಧ್ಯಾಪಕರ ಸಂಘವೇ ಆತಂಕ ವ್ಯಕ್ತಪಡಿಸಿ, ಇದೀಗ ಕುಲಸಚಿವರಿಗೆ ಪತ್ರ ಬರೆದಿದೆ.

ಅಧ್ಯಾಪಕರ ಸಂಘವು ಏಪ್ರಿಲ್ 15ರಂದು ತುರ್ತು ಸಾಮಾನ್ಯ ಸಭೆ ಕರೆದಿತ್ತು. ಅಲ್ಲಿ ಇದೇ ವಿಷಯದ ಕುರಿತು ಗಂಭೀರ ಚರ್ಚೆ ನಡೆದಿತ್ತು. ಆಗ ಕೆಲವೊಂದು ನಿರ್ಣಯಗಳನ್ನೂ ಕೈಗೊಳ್ಳಲಾಗಿತ್ತು. ಅಂತಹ ನಿರ್ಣಯಗಳನ್ನು ಒಳಗೊಂಡ ಪತ್ರವನ್ನು ಪ್ರೊ.ವಾಸುದೇವ ಬಡಿಗೇರ ಅಧ್ಯಕ್ಷತೆಯಲ್ಲಿ ಏಪ್ರಿಲ್ 27ರಂದು ಕುಲಸಚಿವರಿಗೆ ಬರೆಯಲಾಗಿದೆ. ಅದರ ಪ್ರತಿ ‘ಪ್ರಜಾವಾಣಿ’ಗೆ ಲಭಿಸಿದೆ.

ಅಧ್ಯಾಪಕರ ಸಂಘವು ಪತ್ರದಲ್ಲಿ ಸಂಶೋಧನಾ ಕೇಂದ್ರಗಳ ಕಾರ್ಯವೈಖರಿ ಕುರಿತು ಹಲವು ಪ್ರಶ್ನೆಗಳನ್ನು ಎತ್ತಿದೆ. ಈ ಹಿಂದೆ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ್ದ ನ್ಯಾಕ್ ಪೀರ್ ಸಮಿತಿಯ ಆಕ್ಷೇಪಣೆಯನ್ನು ಉಲ್ಲೇಖಿಸಿದೆ. ವಿಶೇಷವಾಗಿ, ವಿಶ್ವವಿದ್ಯಾಲಯದ ಪರಿನಿಯಮಗಳಲ್ಲಿ ಅವಕಾಶ ಇಲ್ಲದಿದ್ದರೂ ಬಾಹ್ಯ ಅಧ್ಯಾಪಕರಿಗೆ ಸಂಶೋಧನಾ ಮಾರ್ಗದರ್ಶನ ನೀಡಲು ಅವಕಾಶ ಕಲ್ಪಿಸಿರುವುದನ್ನು ಪೀರ್ ಸಮಿತಿ ಪ್ರಶ್ನಿಸಿತ್ತು. ಅದನ್ನೇ ಅಧ್ಯಾಪಕರ ಸಂಘ ಉಲ್ಲೇಖಿಸಿದೆ.

ಯುಜಿಸಿ ನಿಯಮ ಉಲ್ಲಂಘನೆ: 2022ರ ಯುಜಿಸಿ ನಿಯಮಾವಳಿ ಪ್ರಕಾರ, ಕಾಯಂ ಅಧ್ಯಾಪಕರಲ್ಲದವರಿಗೆ ಮಾರ್ಗದರ್ಶಕರ ಹುದ್ದೆ ನೀಡುವುದು ನಿಯಮಬಾಹಿರವಾಗಿದೆ. ಆದರೆ, ಕೆಲವು ಕೇಂದ್ರಗಳಲ್ಲಿ ಈ ನಿಯಮ ಪಾಲನೆ ಆಗುತ್ತಿಲ್ಲ. ಇದಲ್ಲದೆ ಸ್ನಾತಕೋತ್ತರ ವಿಭಾಗಗಳಿಲ್ಲದ ಕೇಂದ್ರಗಳಲ್ಲಿ ಪಿಎಚ್.ಡಿ ಪ್ರವೇಶ ನೀಡುತ್ತಿರುವುದು ಶೈಕ್ಷಣಿಕ ಗುಣಮಟ್ಟ ಕುಸಿತಕ್ಕೆ ಕಾರಣವಾಗುತ್ತಿದೆ ಎಂಬ ಸಂಘವು ಅಭಿಪ್ರಾಯಪಟ್ಟಿದೆ.

ಪರಿನಿಯಮ ಅಗತ್ಯತೆ: ಮಾನ್ಯತೆ ಪಡೆದ ಕೇಂದ್ರಗಳ ಮೂಲಕ ಪಿಎಚ್.ಡಿ ಪದವಿ ನೀಡಲು ಅಗತ್ಯವಾದ ಸ್ಪಷ್ಟ ಪರಿನಿಯಮಗಳೇ ಇಲ್ಲದಿರುವುದು ಪ್ರಮುಖ ಸಮಸ್ಯೆಯಾಗಿದೆ. ಮೊದಲು ಸೂಕ್ತ ನಿಯಮಗಳನ್ನು ರೂಪಿಸಿ, ಸಕ್ಷಮ ಪ್ರಾಧಿಕಾರದಿಂದ ಅನುಮೋದನೆ ಪಡೆಯುವುದು ಅಗತ್ಯ ಎಂದು ಸಂಘವು ಒತ್ತಿಹೇಳಿದೆ.

ಶೈಕ್ಷಣಿಕ ವಲಯದಲ್ಲಿ, ಇಂತಹ ಕ್ರಮಗಳು ಮುಂದುವರಿದರೆ ವಿಶ್ವವಿದ್ಯಾಲಯದ ಪ್ರತಿಷ್ಠೆ ಹಾಗೂ ಸಂಶೋಧನಾ ಗುಣಮಟ್ಟಕ್ಕೆ ಗಂಭೀರ ಧಕ್ಕೆಯುಂಟಾಗಬಹುದು. ವಿಶ್ವವಿದ್ಯಾಲಯದ ಆಡಳಿತವು ತಕ್ಷಣವೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಘ ಒತ್ತಾಯಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-25-2000864302

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.