ಹಾನಗಲ್: ಪ್ರಸಿದ್ಧ ಕವಿ, ನಾಟಕಕಾರ ಷೇಕ್ಸ್ಪಿಯರ್ ತನ್ನ ಅಗಾಧ ಪ್ರತಿಭೆಯಿಂದ ಪ್ರಬುದ್ಧ ಸಾಹಿತ್ಯ ರಚನೆಯ ಮೂಲಕ ಇಂಗ್ಲಿಷ್ ಭಾಷೆಯ ಜನಪ್ರಿಯತೆ ಹಾಗೂ ಘನತೆ ಹೆಚ್ಚಿಸಿದರು. ಮನುಷ್ಯ ಸ್ವಭಾವಗಳಿಗೆ ಜೀವತುಂಬುವಂತಹ ನೂರಾರು ಪಾತ್ರಗಳನ್ನು ಸೃಷ್ಟಿಸಿ ಸಾಹಿತ್ಯ ಲೋಕದ ಧ್ರುವತಾರೆಯಾದರು’ ಎಂದು ಹಂಸಭಾವಿಯ ಎಂ.ಎ.ಎಸ್.ಸಿ ಕಾಲೇಜು ಪ್ರಾಚಾರ್ಯ ಎಂ.ಜಿ. ಬಂಡಿವಡ್ಡರ ಹೇಳಿದರು.

ಪಟ್ಟಣದ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಇಂಗ್ಲಿಷ್ ಭಾಷಾ ವಿಭಾಗದಿಂದ ಇಂಗ್ಲಿಷ್ ಭಾಷಾ ದಿನಾಚರಣೆ ಹಾಗೂ ನಾಟಕಕಾರ ವಿಲ್ಹಿಯಮ್ ಷೇಕ್ಸ್ಪಿಯರ್ ಜನ್ಮದಿನ ಅಂಗವಾಗಿ ಶನಿವಾರ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಇಂಗ್ಲಿಷ್ ಭಾಷೆಯು ಜಗತ್ತಿಗೆ ಸಂವಹನದ ಮುಖ್ಯ ಮಾಧ್ಯಮ. ಈ ಭಾಷೆ ಸ್ಪರ್ಧಾತ್ಮಕ ಲೋಕದ ಜೀವಾಳವಾಗಿದೆ’ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಎಂ.ಎಚ್.ಹೊಳಿಯಣ್ಣನವರ ಮಾತನಾಡಿದರು. ಕಾಲೇಜಿನ ಇಂಗ್ಲಿಷ್ ಭಾಷಾ ವಿಭಾಗದ ಮುಖ್ಯಸ್ಥ ಅಶೋಕ ಪಾಗಾದ, ಉಪನ್ಯಾಸಕರಾದ ಆರ್ಫಾ ಬಿಹಾರಿ, ಸ್ನೇಹಾ ಮಾಳದಕರ ಹಾಗೂ ಕಾಲೇಜಿನ ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು. ವಿದ್ಯಾರ್ಥಿ ರೋಶನಿ ಪ್ರಾರ್ಥಿಸಿದರು. ಸಂಜನಾ ಪರಿಚಯಿಸಿದರು. ಅಂಜು ಜೀವಾಜಿ, ಭಾಗ್ಯಶ್ರೀ ಪವಾರ ಸ್ವಾಗತಿಸಿದರು. ಸೌಜನ್ಯ ಸವಣೂರ, ಪ್ರಿಯಾ ಹಾವಣಗಿ ನಿರೂಪಿಸಿದರು. ದೀಪಾ ಮೆಣಸಕ್ಕನವರ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-22-1383056832

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.