ಹಾನಗಲ್: ಇಲ್ಲಿನ ಕುಮಾರೇಶ್ವರ ಕಲಾ ಮತ್ತು ವಾಣಿಜ್ಯ ಕಾಲೇಜಿನ ಭೌಗೋಳಶಾಸ್ರ್ತ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ರಚಿಸಿದ ‘ಬೇಡ್ತಿ ಮತ್ತು ವರದಾ ನದಿ ಜೋಡಣಾ ಘಟಕಾಂಶಗಳು- ಒಂದು ಭೌಗೋಳಿಕ ವಿಶ್ಲೇಷಣೆ’ ಕ್ಷೇತ್ರ ಅಧ್ಯಯನ ಪುಸ್ತಕದ ಬಿಡುಗಡೆ ಶುಕ್ರವಾರ ಕಾಲೇಜು ಸಭಾಂಗಣದಲ್ಲಿ ನಡೆಯಿತು.

ವರದಾ ಮತ್ತು ಬೇಡ್ತಿ ನದಿ ಜೋಡಣಾ ಹೋರಾಟ ಸಮಿತಿಯ ಎಸ್.ಎಂ.ಕೋತಂಬರಿ ಮತನಾಡಿ, ಬೇಡ್ತಿ ಮತ್ತು ವರದಾ ನದಿಗಳ ಜೋಡಣೆಯು ಪ್ರಯೋಜನಗಳ ಅತ್ಯುತ್ತಮೀಕರಣವಾಗಿದ್ದು, ಇದು ಬರ ಪೀಡಿತ ಪ್ರದೇಶಗಳ ಅಭಿವೃದ್ಧಿಯ ನೀರಾವರಿ ಯೋಜನೆಯಾಗಿದೆ. ಕುಡಿಯುವ ನೀರಿಗಾಗಿ ಮತ್ತು ಕೃಷಿ, ಕೈಗಾರಿಕೆಯ ಬವಣೆ ಬಗೆಹರಿಯಲಿದೆ ಎಂದು ಹೇಳಿದರು

ಪಶ್ಚಿಮಕ್ಕೆ ಹರಿಯುವ ಬೇಡ್ತಿ (ಗಂಗಾವಳಿ) ನದಿ ಮಳೆಗಾಲದಲ್ಲಿ ಹೇರಳವಾಗಿ ನೀರನ್ನು ಹೊರಬಿಡುತ್ತದೆ. ಅತೀ ಇಳಿಜಾರು ಮತ್ತು ಬೆಟ್ಟದ ಸಾಲುಗಳಿಂದ ಆವೃತವಾದ ಈ ಜಲಾನಯನ ಪ್ರದೇಶವು ಸಂಪೂರ್ಣ ನೀರನ್ನು ಬಳಸಿಕೊಳ್ಳಲಾಗದೇ ಅರಬ್ಬಿ ಸಮುದ್ರವನ್ನು ಸೇರುತ್ತದೆ ಎಂದು ವಿವರಣೆ ನೀಡಿದರು.

ಆದರೆ ಕರ್ನಾಟಕದ ಪೂರ್ವ ಭಾಗವು ಮಳೆ ನೆರಳಿನ ಪ್ರದೇಶವಾಗಿರುವುದರಿಂದ ಬರಗಾಲದಿಂದ ತತ್ತರಿಸುತ್ತದೆ. ಆದ್ದರಿಂದ ಬೇಡ್ತಿ ಜಲಾನಯನ ಪ್ರದೇಶದಲ್ಲಿ ಲಭ್ಯವಿರುವ ಮಾನ್ಸೂನ್ ಹೆಚ್ಚುವರಿ ನೀರನ್ನು ವರದಾ ನದಿಗೆ ಹರಿಯುವಂತೆ ಜೋಡಣೆ ಮಾಡುವುದರಿಂದ ಹಾವೇರಿ, ಗದಗ, ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ಜನರ ಸಾಮಾಜಿಕ ಹಾಗೂ ಆರ್ಥಿಕ ಸ್ಥಿತಿಗತಿಗಳು ಗಣನೀಯವಾಗಿ ಸುಧಾರಿಸುತ್ತದೆ ಎಂದು ಹೇಳಿದರು.

ಭೂಗೋಳಶಾಸ್ತ್ರ ವಿಭಾಗದ ಮುಖ್ಯಸ್ಥ ಹಾಗೂ ಈ ಕ್ಷೇತ್ರ ಅಧ್ಯಯನದ ಪುಸ್ತಕದ ಮಾರ್ಗದರ್ಶಕ ಪ್ರಕಾಶ ಹೊಳೇರ, ಬೇಡ್ತಿ-ವರದಾ ಯೋಜನೆಯು ಪಶ್ಚಿಮ ಘಟ್ಟಗಳ ಪರಿಸರ ಸಂರಕ್ಷಣೆಯ ಜೊತೆಗೆ ಪೂರ್ವ ಕರ್ನಾಟಕದ ಬರಗಾಲ ಪ್ರದೇಶಗಳ ನೀರಿನ ಬೇಡಿಕೆಯನ್ನು ಸಮತೋಲನಗೊಳಿಸುವ ಅದ್ಭುತ ಯೋಜನೆಯಾಗಿದ್ದು, ಧೀರ್ಘಕಾಲೀನ ಕಾರ್ಯಸಾಧ್ಯತೆಗಳನ್ನು ಪರಿಶೀಲಿಸಿ ಪಶ್ಚಿಮ ಘಟ್ಟ ಪ್ರದೇಶದ ಸಮಗ್ರ ಪರಿಸರ ಹಾಗೂ ಜೀವಿ ವೈವಿದ್ಯತೆಗಳ ಸಂರಕ್ಷಣೆಯನ್ನು ಗಮನದಲ್ಲಿರಿಸಿ ನದಿ ಜೋಡಣಾ ಯೋಜನೆಯನ್ನು ಪರಿಪೂರ್ಣಗೊಳಿಸಿದರೆ, ಇದೊಂದು ಯಶಸ್ವಿ ಯೋಜನೆಯಾಗಲು ಸಾಧ್ಯವಾಗಲಿದೆ ಎಂದರು.

ಕಾಲೇಜು ಪ್ರಾಚಾರ್ಯ ಎಂ.ಎಚ್.ಹೊಳಿಯಣ್ಣನವರ, ಉಪನ್ಯಾಸಕ ಅಶೋಕ ಪಾಗಾದ, ಉಮೇಶ ವಡ್ಡರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260523-22-846124840

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.