ಹಾನಗಲ್: ಕಲಿತ ಶಾಲೆ, ಕಲಿಸಿದ ಶಿಕ್ಷಕ ಹಾಗೂ ಅನ್ನ, ಜ್ಞಾನ ದಾನ ಮಾಡಿದ ಎಲ್ಲರ ಋಣ ಶಿಷ್ಯನ ಮೇಲಿರುತ್ತದೆ. ಅದನ್ನು ವಸ್ತು ಹಣದ ರೂಪದಲ್ಲಿ ತೀರಿಸಲು ಸಾಧ್ಯವಿಲ್ಲ. ಗುರುವಿನ ಮಾರ್ಗದರ್ಶನದಲ್ಲಿ ಪಡೆದ ಸದ್ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಪರೋಪಕಾರದಲ್ಲಿ ಯಶಸ್ಸು ಕಾಣುವುದೇ ನಿಜವಾದ ಋಣಭಾರ ತೀರಿಸುವುದಾಗಿದೆ ಎಂದು ಹುಬ್ಬಳ್ಳಿ ಮೂರುಸಾವಿರಮಠದ ಗುರು ಸಿದ್ಧರಾಜಯೋಗೀಂದ್ರ ಸ್ವಾಮೀಜಿ ಹೇಳಿದರು.

ಕುಮಾರೇಶ್ವರ ಪ್ರೌಢಶಾಲೆಯ ಹಳೆಯ ವಿದ್ಯಾರ್ಥಿಗಳು ಭಾನುವಾರ ಪಟ್ಟಣದ ಕುಮಾರೇಶ್ವರ ಮಠದ ಸದಾಶಿವ ಮಂಗಲ ಭವನದಲ್ಲಿ ಆಯೋಜಿಸಿದ್ದ ಈ ಪ್ರೌಢಶಾಲೆಯಲ್ಲಿ ಇದುವರೆಗೆ ಶಿಕ್ಷಕರಾಗಿ ಸೇವೆ ಸಲ್ಲಿಸಿದ ಎಲ್ಲ ಶಿಕ್ಷಕರಿಗೆ ಗುರುವಂದನೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಭವಿಷ್ಯದ ಪೀಳಿಗೆಗೆ ಮೌಲ್ಯಾದರ್ಶ, ಮಾನವೀಯತೆ ಸಂಗತಿಗಳನ್ನು ಬಿತ್ತಿ ಬೆಳೆಯುವಲ್ಲಿ ಗುರುವಿನ ಪವಿತ್ರ ಪಾತ್ರವಿದ್ದು, ಇದು ಎಲ್ಲ ಕಾಲದ ಶಿಕ್ಷಕರಲ್ಲಿ ಇರಬೇಕಾದ ಪ್ರಮುಖ ಸಂಗತಿ ಎಂದರು.

ಶಿರೋಳದ ಗುರುಸಿದ್ದೇಶ್ವರ ಶಿವಾಚಾರ್ಯರು ಸಮ್ಮುಖ ವಹಿಸಿ ಮಾತನಾಡಿ, ನಾವು ಬೆಳೆದ ಪರಿಸರ ನಮ್ಮ ಮೇಲೆ ಅಗಾಧವಾದ ಪ್ರಭಾವ ಬೀರುತ್ತದೆ. ಸಾಧು-ಸಂತರು ನಡೆದಾಡಿದ ನೆಲಕ್ಕೆ ಪುಣ್ಯದ ಶಕ್ತಿಯಿರುತ್ತದೆ. ಅಂಥ ಮಹಾತ್ಮ ಹಾನಗಲ್ ಲಿಂ.ಕುಮಾರ ಶಿವಯೋಗಿಗಳವರ ತಪೋಭೂಮಿಯಲ್ಲಿ ಶಿಕ್ಷಣದ ಕೈಂಕರ್ಯದಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸಿದ ಎಲ್ಲರೂ ಪುಣ್ಯಾತ್ಮರು ಎಂದರು.

ಇಲ್ಲಿ ಜ್ಞಾನಾರ್ಜನೆ ಮಾಡಿದವರು ಬದುಕಿನಲ್ಲಿ ಯಶಸ್ಸು ಪಡೆದು ಸತ್ಕಾರ್ಯದ ಮೂಲಕ ಸಮಾಜಕ್ಕೆ ಮಾದರಿಯಾಗಬಲ್ಲರು. ಇದರಲ್ಲಿ ಗುರು-ಶಿಷ್ಯರಿಬ್ಬರ ಸಾರ್ಥಕತೆಯಿದೆ ಎಂದರು. ಹುಬ್ಬಳ್ಳಿ ಮೂರುಸಾವಿರ ಮಠದ ವ್ಯವಸ್ಥಾಪಕ ಎ.ಬಿ.ಪಾಟೀಲ ಕಾರ್ಯಕ್ರಮ ಉದ್ಘಾಟಿಸಿದರು. ಸಾಹಿತಿ ಮಾರುತಿ ಶಿಡ್ಲಾಪೂರ, ಗಣ್ಯರಾದ ರವಿ ಬೆಂಚಳ್ಳಿ, ಶಿಶಿರೇಖಾ ಪಟ್ಟಣಶೆಟ್ಟಿ, ಎಸ್.ವೈ.ದೊಡ್ಡಮನಿ, ಎಸ್.ನಾಗರಾಜ್, ಬಿ.ಡಿ.ಮಾಳಗಿ ಮಾತನಾಡಿದರು. ಸೇವಾ ನಿವೃತ್ತಿ ಹೊಂದಿದ ಈ ಶಾಲೆಯ ಮುಖ್ಯ ಶಿಕ್ಷಕ ಸಿ.ಎಸ್.ವಸ್ತ್ರದ ಅವರನ್ನು ವಿದ್ಯಾರ್ಥಿಗಳು ಸನ್ಮಾನಿಸಿದರು. ಶಾಲೆಯಲ್ಲಿ ಸೇವೆ ಸಲ್ಲಿಸಿದ 36 ಜನ ಶಿಕ್ಷಕರಿಗೆ ಗುರುವಂದನೆ ಸಲ್ಲಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260601-22-1986633673

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.