ಹನುಮಸಾಗರ: ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ (ಕೆಪಿಎಸ್) ಬಾಲಕರ ಹಿರಿಯ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಎಲ್ಕೆಜಿ ಹಾಗೂ ಯುಕೆಜಿ ವಿದ್ಯಾರ್ಥಿಗಳಿಗಾಗಿ ನಾಲ್ಕು ತರಗತಿ ಕೊಠಡಿಗಳನ್ನು ಸಂಪೂರ್ಣವಾಗಿ ನವೀಕರಿಸಿ, ತ್ರಿಡಿ ಪೇಂಟಿಂಗ್ಗಳ ಮೂಲಕ ಆಕರ್ಷಕವಾಗಿ ರೂಪಿಸಲಾಗಿದೆ. ಬಣ್ಣ, ಚಿತ್ರ ಹಾಗೂ ಕಲಾತ್ಮಕತೆ ಮಕ್ಕಳನ್ನು ಸೆಳೆಯುತ್ತಿದ್ದು ಸಂಜೆ ವೇಳೆ ಪಾಲಕರೊಂದಿಗೆ ವಾಕಿಂಗ್ ಬರುತ್ತಿರುವ ಮಕ್ಕಳನ್ನೂ ಆಕರ್ಷಿಸುತ್ತಿವೆ.

ಈ ವಿಶಿಷ್ಟ ಉಪಕ್ರಮವು ಮಕ್ಕಳಲ್ಲಿ ಕಲಿಕೆಯ ಆಸಕ್ತಿ ಹೆಚ್ಚಿಸುವುದರ ಜೊತೆಗೆ ಪಾಠ ಸುಲಭವಾಗಿ ಅರ್ಥಮಾಡಿಕೊಳ್ಳಲು ನೆರವಾಗುತ್ತಿದೆ. ಪ್ರಾಥಮಿಕ ಹಂತದ ವಿದ್ಯಾರ್ಥಿಗಳಿಗೆ ಕೇವಲ ಪುಸ್ತಕಾಧಾರಿತ ಬೋಧನೆಗಿಂತ ದೃಶ್ಯಮಾಧ್ಯಮಗಳ ಮೂಲಕ ಕಲಿಕೆ ಹೆಚ್ಚು ಪರಿಣಾಮಕಾರಿ ಎಂಬ ಉದ್ದೇಶದಿಂದ ಪ್ರತಿಯೊಂದು ತರಗತಿಯನ್ನು ವಿಷಯಾಧಾರಿತವಾಗಿ ವಿನ್ಯಾಸಗೊಳಿಸಲಾಗಿದೆ.

ಬೆಳಿಗ್ಗೆ ಎದ್ದ ತಕ್ಷಣ ಹಲ್ಲು ತೊಳೆಯುವ ದೈನಂದಿನ ಅಭ್ಯಾಸದಿಂದ ಹಿಡಿದು ವೈಯಕ್ತಿಕ ಸ್ವಚ್ಛತೆ ಬಗ್ಗೆ ಅರಿವು ಮೂಡಿಸುವ ಚಿತ್ರಣಗಳು ಮಕ್ಕಳಲ್ಲಿ ಉತ್ತಮ ಜೀವನಶೈಲಿ ರೂಪಿಸುವಲ್ಲಿ ಸಹಕಾರಿಯಾಗುತ್ತಿವೆ. ಇಂಗ್ಲಿಷ್ ಮೂಲಾಕ್ಷರಗಳು (A–Z), ಸಂಯುಕ್ತಾಕ್ಷರಗಳು, ಪದರಚನೆಗಳನ್ನು ಬಣ್ಣಬಣ್ಣದ ತ್ರಿಡಿ ಚಿತ್ರಗಳ ಮೂಲಕ ಪರಿಚಯಿಸಲಾಗಿದ್ದು, ಮಕ್ಕಳು ಆಟದ ನಡುವೆ ಕಲಿಯುವ ವಾತಾವರಣ ನಿರ್ಮಾಣವಾಗಿದೆ.

ಪ್ರಾಣಿ–ಪಕ್ಷಿಗಳ ಚಿತ್ರಗಳು ಮಕ್ಕಳಲ್ಲಿ ಪ್ರಕೃತಿ ಪ್ರೀತಿ ಬೆಳೆಸುತ್ತಿದ್ದು, ಪ್ರತಿಯೊಂದು ಚಿತ್ರವೂ ಅವರ ಮನಸ್ಸಿನಲ್ಲಿ ದೀರ್ಘಕಾಲ ಉಳಿಯುವಂತೆ ವಿನ್ಯಾಸಗೊಳಿಸಲಾಗಿದೆ. ಮನುಷ್ಯ ದೇಹದ ಅಂಗಾಂಗಗಳು ಹಾಗೂ ಅವುಗಳ ಕಾರ್ಯಗಳನ್ನು ಸರಳವಾಗಿ ವಿವರಿಸುವ ಚಿತ್ರಗಳು ಪ್ರಾಥಮಿಕ ವೈಜ್ಞಾನಿಕ ಅರಿವು ನೀಡುತ್ತಿವೆ. ಟ್ರಾಫಿಕ್ ಸಿಗ್ನಲ್ಗಳ ಚಿತ್ರಣದ ಮೂಲಕ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಚಿಟ್ಟೆಯ ಜೀವನಚಕ್ರ ಹಂತ ಹಂತವಾಗಿ ಚಿತ್ರಿಸುವ ಮೂಲಕ ವಿಜ್ಞಾನ ವಿಷಯದತ್ತ ಮಕ್ಕಳ ಕುತೂಹಲವನ್ನು ಹೆಚ್ಚಿಸಲಾಗಿದೆ. ವಂಶಾವಳಿ ಚಿತ್ರಣವು ಕುಟುಂಬ ಸಂಬಂಧಗಳನ್ನು ಸುಲಭವಾಗಿ ತಿಳಿಯುವಂತೆ ಮಾಡುತ್ತಿದೆ.

ಈ ತ್ರಿಡಿ ಚಿತ್ರಗಳ ಮುಖ್ಯ ವೈಶಿಷ್ಟ್ಯವೆಂದರೆ, ಮಕ್ಕಳು ಚಿತ್ರಗಳನ್ನು ನೋಡಿದ ಕ್ಷಣದಲ್ಲೇ ವಿಷಯವನ್ನು ಗ್ರಹಿಸುವಂತಿರುವುದು. ಬಣ್ಣಗಳ ಸಮತೋಲನ, ಆಕರ್ಷಕ ವಿನ್ಯಾಸ ಹಾಗೂ ಜೀವಂತ ಚಿತ್ರಣಗಳು ಮಕ್ಕಳನ್ನು ತರಗತಿಯಲ್ಲಿ ಹೆಚ್ಚು ತೊಡಗಿಸಿಕೊಳ್ಳುವಂತೆ ಪ್ರೇರೇಪಿಸುತ್ತಿವೆ. ಇದರಿಂದ ಶಿಕ್ಷಕರಿಗೂ ಬೋಧನೆ ಸುಗಮವಾಗಿದ್ದು, ಮಕ್ಕಳು ಸಕ್ರಿಯವಾಗಿ ಕಲಿಕೆಯಲ್ಲಿ ಭಾಗವಹಿಸುತ್ತಿದ್ದಾರೆ. ಈ ಎಲ್ಲಾ ಮನಮೋಹಕ ತ್ರಿಡಿ ಚಿತ್ರಗಳನ್ನು ಮೆದಿಕೇರಿ ಆರ್ಟ್ ಗ್ಯಾಲರಿಯ ನಿಪುಣ ಕಲಾವಿದರು ಸೃಜನಾತ್ಮಕವಾಗಿ ರೂಪಿಸಿದ್ದಾರೆ. ಅವರ ಕಲಾತ್ಮಕ ಸ್ಪರ್ಶದಿಂದ ತರಗತಿ ಕೊಠಡಿಗಳು ನಿಜವಾದ ಕಲಿಕಾ ಲೋಕವಾಗಿ ರೂಪಾಂತರಗೊಂಡಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-35-770291852

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.