ಹನೂರು: ಕಲಿಕಾರ್ಥಿಯ ಮೂಲ ಗುರಿ ಕಲಿಯುವ ಹಂಬಲ. ವಿದ್ಯಾರ್ಥಿಗಳಲ್ಲಿನ ಸೃಜನಶೀಲತೆ, ಆಸಕ್ತಿ, ಅವರ ಕೌಶಲವನ್ನು ಹೊರತರುವುದರ ಬೇಸಿಗೆ ಶಿಬಿರದ ಮೂಲ ಉದ್ದೇಶವಾಗಿದೆ ಎಂದು ಮಹದೇಶ್ವರ ಬೆಟ್ಟ ಸಾಲೂರು ಬೃಹನ್ಮಠದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ತಿಳಿಸಿದರು.

ಮಹದೇಶ್ವರ ಬೆಟ್ಟದ ಸಾಲೂರು ಬೃಹನ್ಮಠದಲ್ಲಿ ಮಹದೇಶ್ವರ ಸ್ವಾಮಿ ಕೃಪಾ ಎಜುಕೇಶನ್ ಸೊಸೈಟಿ ವತಿಯಿಂದ ಉಚಿತವಾಗಿ ಮಕ್ಕಳಿಗೆ 5 ದಿನಗಳ ಕಾಲ ಬೇಸಿಗೆ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಮಕ್ಕಳಿಗಾಗಿ ಆಯೋಜಿಸಿರುವ ಈ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿರುವುದು ಅತ್ಯಂತ ಸಂತಷದಾಯಕ ವಿಷಯ. ಈ 5 ದಿನವೂ ಮಕ್ಕಳೊಂದಿಗೆ ಬೆರೆತು ಕಲಿಯುವ ಉದ್ದೇಶದಿಂದ ಆಗಮಿಸಿರುವ ಸಂಪನ್ಮೂಲ ವ್ಯಕ್ತಿಗಳಿಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಏನನ್ನೇ ಕಲಿಯಲು ಮೊದಲು ನಮ್ಮ ಸ್ಥಳೀಯ ಭಾಷೆಯ ಪ್ರೇಮ ಇರಬೇಕು. ಆಡಳಿತಕ್ಕಾಗಿ ಉಳಿದ ಭಾಷೆಗಳನ್ನು ಕಲಿಯಬೇಕಿದೆ. ಯಾವುದೇ ಬದಲಾವಣೆಯು ಚಿಕ್ಕ ವಯಸ್ಸಿನಿಂದಲೇ ಆರಂಭವಾಗಬೇಕಾಗಿದೆ ಎಂದು ತಿಳಿಸಿದರು.

ಬರಹಗಾರ್ತಿ ಕುಸುಮ ಆಯರಹಳ್ಳಿ ಮಾತನಾಡಿ, ಸಾಧಿಸುವ ಛಲ ಮತ್ತು ಮನಸ್ಸಿದ್ದರೆ, ಏನನ್ನಾದರೂ ಸಾಧಿಸಬಹುದು. ಶ್ರೀಮಠದಿಂದ ಬೆಳವಣಿಗೆಯ ಮಟ್ಟ ಉತ್ತುಂಗಕ್ಕೇರಿದೆ. ಪೂಜ್ಯರ ಯೋಚನಾ ಮಾರ್ಗ ಈಗಿನ ಜನಾಂಗಕ್ಕೆ ಮಾದರಿಯಾಗಿದೆ. ಇಂದು ನಾವಿಲ್ಲಿ ಬಂದಿರೋದು ಪರಸ್ಪರ ವಿಷಯ ವಿನಿಮಯಗಳಾಗಿ, ನಿಮ್ಮಿಂದಲೇ ನಾವಿಂದು ಹಲವಾರು ವಿಷಯಗಳನ್ನು ಕಲಿಯಲು ಬಂದಿದ್ದೇವೆ. ಇನ್ನು ಮುಂದಿನ ಈ ದಿನಗಳು ಅತ್ಯಂತ ಹರ್ಷದಾಯಕವೂ, ಆಸಕ್ತಿದಾಯಕವಾಗಿರಲಿ ಎಂದು ತಿಳಿಸಿದರು.

ಪತ್ರಕರ್ತೆ ಶೋಭಾ ಮಳವಳ್ಳಿ ಮಾತನಾಡಿ, ಶಿಕ್ಷಣವೇ ಶಕ್ತಿ. ಶಿಕ್ಷಣದಿಂದ ಏನನ್ನಾದರೂ ಸಾಧಿಸಲು ಸಾಧ್ಯ, ಆತ್ಮವಿಶ್ವಾಸವೇ ಸಾಧನೆಯ ಮೊದಲ ಹೆಜ್ಜೆ. ಇಂದಿನ ನಮ್ಮ ಅಳಿಲು ಸೇವೆ ಮಹದೇಶ್ವರರ ಪಾದಗಳಿಗೆ ಅರ್ಪಣೆ. ಮಕ್ಕಳ ಭವಿಷ್ಯದ ಕನಸಿಗೆ ನೀರೆರೆಯುವ ಪ್ರಯತ್ನವಷ್ಟೇ ನಮ್ಮದು. ಈ ಶಿಬಿರವು ನಿಮ್ಮಲ್ಲಿ ಹೊಸ ಉತ್ಸಾಹವನ್ನು ತುಂಬಲಿ ನಿಮ್ಮಲ್ಲಿನ ಪ್ರತಿಭೆ ಹೊರಹಾಕಲು ಈ ಸುಂದರ ವೇದಿಕೆ ಸಾಕ್ಷಿಯಾಗಲಿ ಎಂದರು

ನಿವೃತ್ತ ಪ್ರಾಧ್ಯಾಪಕ ಶಿವರಾಜಪ್ಪ ಮಾತನಾಡಿ, ನಾನೊಬ್ಬ ಶ್ರೀಮಠದ ಹಳೆಯ ವಿದ್ಯಾರ್ಥಿ. ಇಂದಿಗೂ ಕೂಡಾ ನನ್ನ ಒಡನಾಟ ಈ ಸಂಸ್ಥೆಯೊಂದಿಗಿದೆ. ಶ್ರೀಮಠವು ಹಲವಾರು ಬಡ ವಿದ್ಯಾರ್ಥಿಗಳ ಪಾಲಿಗೆ ವರದಾನವಾಗಿದೆ. ಎಲ್ಲಾ ಗ್ರಾಮೀಣ ಮಕ್ಕಳ ಧೈರ್ಯ ಮತ್ತು ಆತ್ಮವಿಶ್ವಾಸ, ಏನನ್ನಾದರೂ ಸಾಧಿಸಬೇಕೆನ್ನುವ ಛಲಕ್ಕೆ ಇಂತಹ ಶಿಬಿರಗಳು ಒಂದು ಉತ್ತಮ ವೇದಿಕೆಯಾಗಿದೆ. ಇಂದಿನ ಈ ಬದಲಾವಣೆಗೆ ಹಿರಿಯ ಪೂಜ್ಯರ ಆಶೀರ್ವಾದದೊಂದಿಗೆ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳವರ ಪ್ರಯತ್ನವೇ ಕಾರಣ. ಪ್ರತಿಯೊಬ್ಬ ವ್ಯಕ್ತಿಯೂ ಶಿಸ್ತಿನಿಂದ ಬೆಳೆದರೆ ಯಶಸ್ಸು ಅವನನ್ನೆ ಹಿಂಬಾಲಿಸಿ ಬರುತ್ತದೆ. ಇಂತಹ ಬೇಸಿಗೆ ಶಿಬಿರಗಳು ಭವಿಷ್ಯವನ್ನು ರೂಪಿಸಿಕೊಳ್ಳಲು ಅತ್ಯಂತ ಸಹಕಾರಿ ಇಲ್ಲಿ ಕಲಿಕೆಗಳೇ ನಿಮ್ಮನ್ನು ಹುಡುಕಿಕೊಂಡು ಬರುತ್ತವೆ ಎಂದರು

ಈ ಸಂದರ್ಭದಲ್ಲಿ ವಿಶ್ರಾಂತ ಉಪ ಕುಲಪತಿಗಳಾದ ಶ್ರೀಮತಿ ಇಂದುಮತಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-37-1505253728

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.