ಹರಪನಹಳ್ಳಿ: ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಚುನಾವಣೆಗೆ ತಡೆಯಾಜ್ಞೆ ನೀಡಿದ್ದ ಬೆಂಗಳೂರಿನ ಸಿಟಿ ಸಿವಿಲ್ ಕೋರ್ಟ್ ಆದೇಶವನ್ನು ಎತ್ತಿ ಹಿಡಿದು ತಡೆಯಾಜ್ಞೆ ಆದೇಶ ಮಾಡಿರುವ ಹೈಕೋರ್ಟ್ ತೀರ್ಪನ್ನು ಸ್ಥಳೀಯ ಗುರುಬಳಗ ವಿಚಾರ ವೇದಿಕೆಯ ಮುಖಂಡರು ಸ್ವಾಗತಿಸಿದ್ದಾರೆ.

ಹರಪನಹಳ್ಳಿಯಲ್ಲಿ 11 ಜನ ಒಳಗೊಂಡು ರಾಜ್ಯದಲ್ಲಿ 25,000 ಜನ ಶಿಕ್ಷಕರನ್ನು ಹೊರಗಿಟ್ಟು ಸಂವಿಧಾನ ಬದ್ದವಾಗಿ ನಡೆಯಬೇಕಿದ್ದ ರಾಜ್ಯ ಚುನಾವಣೆಯನ್ನು ಅಕ್ರಮವಾಗಿ ನಡೆಸಿ ಸಂವಿಧಾನಕ್ಕೆ ಅಪಚಾರವೆಸಗಿದ್ದಾರೆ. ಏಪ್ರಿಲ್ 30ರಂದೇ ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಚುನಾವಣೆಗೆ ಕೋರ್ಟ್ ತಡೆ ನೀಡಿತ್ತು. ಆದರೂ ಚುನಾವಣೆ ಅಧಿಕಾರಿ ನ್ಯಾಯಾಲಯ ಆದೇಶ ಉಲ್ಲಂಘಿಸಿದ್ದಾರೆ. ಮೇ 4ರಂದು ಹೈಕೋರ್ಟ್ ಸಹ ಚುನಾವಣೆಗೆ ತಡೆ ನೀಡಿದೆ. ಮುಂದಿನ ಹಂತದ ವಿಚಾರಣೆಯನ್ನು ಜೂನ್.29ರಂದು ನಡೆಯಲಿದೆ. ಅಲ್ಲಿಯವರೆಗೆ ಯಾವುದೇ ಚುನಾವಣೆ ಪ್ರಕ್ರಿಯೆ ಮುಂದುವರೆಸುವಂತಿಲ್ಲ. ಈವರೆಗೂ ಪ್ರಕಟವಾದ ಎಲ್ಲಾ ಆದೇಶಗಳು ಅಸಿಂಧುವೆಂದು ಕೋರ್ಟ್ ಆದೇಶಿಸಿದ ಹಿನ್ನೆಲೆಯಲ್ಲಿ, ರಾಜ್ಯ ಚುನಾವಣೆ ಅಧಿಕಾರಿ ಮೂಲಿಮನಿ ಮೆಹಬೂಬ್ ಪಾಷ ಅವರು ಚುನಾವಣೆ ಪ್ರಕ್ರಿಯೆ ಸ್ಥಗಿತಗೊಳಿಸಿದ್ದಾರೆ ಎಂದು ಗುರುಬಳಗ ವಿಚಾರವೇದಿಕೆಯ ಮುಖಂಡರಾದ ಮಕರಬ್ಬಿ ಷರೀಪ್, ಅಂಜಿನಪ್ಪ ಕಮ್ಮತ್ತರ, ಮಂಜುನಾಥ ಪೂಜಾರ, ಎನ್.ಜಿ.ಸೋಮಣ್ಣ, ಪಿ.ಸುಬ್ಬಣ್ಣ, ಟಿಎಚ್ಎಂಪ ಲತಾ, ಸಂಗಯ್ಯ, ಗಿರಿರಾಜ್, ಜಿ.ಕರಿಬಸಪ್ಪ, ಕೆ.ರಿಜ್ವಾನ್ ಸಾಬ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-25-1974178701

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.