ಹರಿಹರ: ನಗರದ ಗಿರಿಯಮ್ಮ ಆರ್.ಕಾಂತಪ್ಪ ಶ್ರೇಷ್ಠಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶಿಕಾರಿಪುರದ ಸುವ್ವಿ ಪಬ್ಲಿಕೇಷನ್ಸ್ ಮತ್ತು ಜನಸ್ಪಂದನ ಟ್ರಸ್ಟ್ ಸಹಯೋಗದಲ್ಲಿ ಮೇ 8ರಂದು ಬೆಳಿಗ್ಗೆ 10ಕ್ಕೆ ‘ಮಹಿಳಾ ಸಬಲೀಕರಣ; ಸಮಕಾಲೀನ ಸವಾಲುಗಳು ಮತ್ತು ಮುಂದಣ ಹಾದಿ’ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣ ಆಯೋಜಿಸಲಾಗಿದೆ.

ನಗರಸಭೆಯ ಪೌರಕಾರ್ಮಿಕ ಮಹಿಳೆಯರು ವಿಚಾರ ಸಂಕಿರಣ ಉದ್ಘಾಟಿಸಲಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಸಮಾಜ ವಿಜ್ಞಾನ ವಿಭಾಗದ ಡೀನ್ ಎಚ್.ಡಿ. ಪ್ರಶಾಂತ್ ದಿಕ್ಸೂಚಿ ಭಾಷಣ ಮಾಡುವರು. ದಾವಣಗೆರೆ ಗ್ರಾಮಾಂತರ ಡಿವೈಎಸ್ಪಿ ರುದ್ರೇಶ್ ಎಸ್. ಉಜ್ಜನಕೊಪ್ಪ, ಪೌರ ಸೇವಾ ಸಮಿತಿ ಅಧ್ಯಕ್ಷ ಜಿ.ಎಂ.ತಿಪ್ಪೇಸ್ವಾಮಿ, ಕಾರ್ಯದರ್ಶಿ ಎಸ್.ಪ್ರಸನ್ನಕುಮಾರ್ ಹಾಗೂ ಇತರರು ಭಾಗವಹಿಸುವರು. ಪ್ರಾಚಾರ್ಯ ಶ್ರೀನಿವಾಸ ಅಜೂರ ಅಧ್ಯಕ್ಷತೆ ವಹಿಸುವರು.

ಮಧ್ಯಾಹ್ನ 12ಕ್ಕೆ ನಡೆಯುವ ‘ಬಿ.ಆರ್.ಅಂಬೇಡ್ಕರ್; ಭಾರತದ ಮಹಿಳೆ ಮತ್ತು ಹಿಂದೂ ಕೋಡ್ ಬಿಲ್’ ಕುರಿತು ಧಾರವಾಡದ ಪ್ರಾಧ್ಯಾಪಕಿ ಅನಸೂಯ ಕಾಂಬಳೆ ಹಾಗೂ ‘ಮಹಿಳಾ ಸಬಲೀಕರಣ; ಸಮಕಾಲೀನ ಸವಾಲುಗಳು’ ಕುರಿತು ಚಿತ್ರದುರ್ಗದ ಪ್ರಾಧ್ಯಾಪಕಿ ಯಶೋಧಾ ಸಿ.ವೈ. ಮಾತನಾಡುವರು. ದಾವಣಗೆರೆ ವಿ.ವಿ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಮುಖ್ಯಸ್ಥ ಅಶೋಕ್ ಕುಮಾರ್ ಪಾಳೇದ ಅಧ್ಯಕ್ಷತೆ ವಹಿಸುವರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260508-43-1576661982

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.