ಹರಿಹರ: ‘ನೈತಿಕತೆ, ಪ್ರಾಮಾಣಿಕತೆ ಮತ್ತು ವೃತ್ತಿಪರ ಹೊಣೆಗಾರಿಕೆಗೆ ಆದ್ಯತೆ ನೀಡುವ ನಿರ್ವಾಹಕರು ಯಶಸ್ವಿ ಆಡಳಿತಗಾರರಾಗಿ ಆಡಳಿತ ನೀಡಲು ಸಾಧ್ಯ’ ಎಂದು ಅರವಿಂದ ಲಿಮಿಟೆಡ್ನ ಟೆಲಿಕಾಂ ಬಿಸಿನೆಸ್ ಸಿಎಚ್ಆರ್ಒ ಸುಧೀರ್ ಮಥಿತಿ ಹೇಳಿದರು.

ನಗರದ ಕಿರ್ಲೋಸ್ಕರ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ (ಕಿಮ್) ಸಂಸ್ಥೆಯಲ್ಲಿ ಈಚೆಗೆ ನಡೆದ 2026ನೇ ಸಾಲಿನ ಮ್ಯಾನೇಜ್ಮೆಂಟ್ ಸ್ನಾತಕೋತ್ತರ ಡಿಪ್ಲೊಮಾ ಪದವಿ ಪ್ರದಾನ ಸಮಾರಂಭದಲ್ಲಿ ಅತಿಥಿಯಾಗಿ ಮಾತನಾಡಿದರು.

‘ಸುರಕ್ಷಿತ ವಲಯದಲ್ಲಿ ಇರಬೇಕೆಂದು ಬಯಸುವ ವಿದ್ಯಾರ್ಥಿಗಳು ಔದ್ಯೋಗಿಕವಾಗಿ ಉತ್ತಮ ಅವಕಾಶಗಳನ್ನು ಪಡೆಯಲು ವಿಫಲವಾಗುತ್ತಾರೆ. ನಿರಂತರ ಕಲಿಕೆ ಮತ್ತು ಸವಾಲುಗಳನ್ನು ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು’ ಸಲಹೆ ನೀಡಿದರು.

‘ವೇಗವಾಗಿ ಬದಲಾಗುತ್ತಿರುವ ಡಿಜಿಟಲ್ ಯುಗದಲ್ಲಿ ಹೊಂದಿಕೊಳ್ಳುವಿಕೆ, ವಿಶ್ಲೇಷಣಾತ್ಮಕ ಚಿಂತನೆ ಮತ್ತು ಮೌಲ್ಯಾಧಾರಿತ ನಾಯಕತ್ವದ ಅಗತ್ಯವಿದೆ, ಪದವೀಧರರು ನಿರಂತರ ಕಲಿಕೆಯನ್ನು ಅಳವಡಿಸಿಕೊಂಡು ಸಮಾಜದ ಒಳಿತಿಗಾಗಿ ತಮ್ಮ ಜ್ಞಾನವನ್ನು ಬಳಸಿಕೊಳ್ಳಬೇಕು’ ಎಂದು ‘ಡೇಟಾ ನಿಖರತೆಯಿಂದ ನಿರ್ಧಾರ ಶಕ್ತಿಯವರೆಗೆ’ ಎಂಬ ಸಮಾರಂಭದ ಪ್ರಮುಖ ಆಶಯವನ್ನು ಪರಿಚಯಿಸಿದ ಸಂಸ್ಥೆಯ ಕಾರ್ಯದರ್ಶಿ ಜಾರ್ಜ್ ವರ್ಗೀಸ್ ಹೇಳಿದರು.

ಕೃತಕ ಬುದ್ಧಿಮತ್ತೆ, ಡೇಟಾ ವಿಶ್ಲೇಷಣೆ ಮತ್ತು ಡಿಜಿಟಲ್ ತಂತ್ರಜ್ಞಾನಗಳ ಮಹತ್ವವನ್ನು ವಿವರಿಸಿ, ಶಿಸ್ತು, ನಿರಂತರತೆ ಮತ್ತು ಸಮಸ್ಯೆ ಪರಿಹಾರ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ಶೈಕ್ಷಣಿಕ ವರದಿಯನ್ನು ಮಂಡಿಸಿದ ನಿರ್ದೇಶಕ ಪ್ರೊ.ವಿ.ಶ್ರೀಧರ್ ಅವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಶೈಕ್ಷಣಿಕ ಸಾಧನೆಗಾಗಿ ಪದಕಗಳು ಮತ್ತು ಪ್ರಶಸ್ತಿಗಳನ್ನು ನೀಡಲಾಯಿತು. ರಾಂಪುರಂ ರೋಷನ್ ಜಮೀರ್ ಅವರಿಗೆ ಚಿನ್ನದ ಪದಕ ಲಭಿಸಿದರೆ, ಯಶವಂತ್ ರಾಮ್ಕುಮಾರ್ ಚುಕ್ಕಾ ಅವರಿಗೆ ಬೆಳ್ಳಿ ಪದಕ ಪ್ರದಾನ ಮಾಡಲಾಯಿತು. ವಿಶೇಷ ವಿಭಾಗಗಳಲ್ಲಿ ಸಂಜನಾ (ಮಾರ್ಕೇಟಿಂಗ್), ಮೊಹಮ್ಮದ್ ಸಾಹಿಲ್ (ಹ್ಯೂಮನ್ ರಿಸೋರ್ಸಸ್), ರಾಂಪುರಂ ರೋಷನ್ ಜಮೀರ್ (ಆಪರೇಷನ್ಸ್) ಹಾಗೂ ಪ್ರಸನ್ನ ರಾಮ್ (ಬಿಸಿನೆಸ್ ಅನಾಲಿಟಿಕ್ಸ್) ಅವರನ್ನು ಗೌರವಿಸಲಾಯಿತು.

2026ರ ಬ್ಯಾಚ್ನ 77 ವಿದ್ಯಾರ್ಥಿಗಳು ಪದವಿ ಸ್ವೀಕರಿಸಿದರು. ಅಸೋಸಿಯೇಟ್ ಡೀನ್ (ಅಕಾಡೆಮಿಕ್ಸ್) ಪ್ರೊ.ದೇವದತ್ತ ದಾಸ್ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಸಮಾರಂಭಕ್ಕೂ ಮುನ್ನ ಮೆರವಣಿಗೆ ನಡೆಸಲಾಯಿತು. ಪ್ರೊ.ಶಾಂತಿಕಾ ಯು.ಎಂ. ಮತ್ತು ಪ್ರೊ.ಕಿರಣ್ ಕುಮಾರ್ ಜಿ.ಕೆ. ಕಾರ್ಯಕ್ರಮ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260506-43-214836730

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.