ಹಾಸನ: ಸಾಮಾಜಿಕ ನ್ಯಾಯ, ಸಮಾನತೆ, ಶಿಕ್ಷಣ ಮತ್ತು ಸಬಲೀಕರಣದ ಮೌಲ್ಯಗಳನ್ನು ನೆನಪಿಸುವ ಮಹತ್ವದ ದಿನ ಇದಾಗಿದ್ದು, ಡಾ. ಅಂಬೇಡ್ಕರ್ ಅವರು ಶಿಕ್ಷಣವೇ ಸಾಮಾಜಿಕ ಪರಿವರ್ತನೆಯ ಸಾಧನ ಎಂದು ತಿಳಿಸಿರುವುದು ನಮ್ಮೆಲ್ಲರಿಗೂ ಮಾರ್ಗದರ್ಶನವಾಗಿದೆ ಎಂದು ಹಾಸನದ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಜೆ. ಅಮರೇಂದ್ರ ಹೇಳಿದರು.

ನಗರದ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಡಾ. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮನಸ್ಸಿನ ಬೆಳವಣಿಗೆ ಮಾನವ ಜೀವನದ ಪ್ರಗತಿಯ ಗುರಿಯಾಗಬೇಕು. ಜ್ಞಾನ ನೀಡುವುದರ ಜೊತೆಗೆ ಯುವ ಸಮುದಾಯ, ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಮರ್ಶಾತ್ಮಕ ಚಿಂತನೆ ಮತ್ತು ಮಾನವೀಯತೆಯನ್ನು ಬೆಳೆಸುವ ಜವಾಬ್ದಾರಿಯು ಶಿಕ್ಷಕರ ಮೇಲಿದೆ ಎಂದರು.

ಎಲ್ಲರನ್ನೂ ಸಬಲರನ್ನಾಗಿ ಮಾಡುವ ವಾತಾವರಣ ನಿರ್ಮಿಸಲು ನಾವು ಪ್ರಯತ್ನಿಸಬೇಕು. ಇದರಿಂದ ಡಾ. ಅಂಬೇಡ್ಕರ್ ಅವರ ಆದರ್ಶಗಳಿಗೆ ನಿಜವಾದ ಗೌರವ ನೀಡಿದಂತಾಗುತ್ತದೆ. ಅವರ ಜೀವನದ ಹೋರಾಟ, ದೃಢ ನಿಶ್ಚಯ ಮತ್ತು ದೇಶದ ಮೇಲಿನ ಅಪಾರ ಬದ್ಧತೆ ಪ್ರಮುಖವಾಗಿದೆ. ಸಮಾನತೆಯ ಪ್ರೇರಣೆಯಿಂದ ನಾವು ನಮ್ಮ ಕರ್ತವ್ಯಗಳನ್ನು ಇನ್ನಷ್ಟು ನಿರ್ವಹಿಸೋಣ ಎಂದು ತಿಳಿಸಿದರು.

ಕಾಲೇಜಿನ ನಿರ್ದೇಶಕ ಡಾ.ಎಸ್. ಪ್ರದೀಪ್ ಮಾತನಾಡಿ, ಡಾ. ಅಂಬೇಡ್ಕರ್ ಅವರು ಸಮಾನತೆಯ ಮತ್ತು ಪ್ರಗತಿಯ ಸಮಾಜ ನಿರ್ಮಾಣದ ದಿಕ್ಕಿನಲ್ಲಿ ಸಂಪೂರ್ಣ ಪ್ರಯತ್ನ ಮಾಡಿದ್ದಾರೆ. ಭೇದ ಭಾವನೆ ಇಲ್ಲದೇ ಎಲ್ಲರೂ ಸಮಾನವಾಗಿ ಬದುಕುವುದು ಅಂಬೇಡ್ಕರ್ ಅವರ ಉದ್ದೇಶವಾಗಿತ್ತು ಎಂದರು.

ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ.ಎ.ಜೆ.ಕೃಷ್ಣಯ್ಯ ಮಾತನಾಡಿದರು. ಕಾಲೇಜಿನ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ.ಇಂದ್ರಾ ಬಹದ್ದೂರ್, ಎನ್ಎಸ್ಎಸ್ ಅಧಿಕಾರಿ ಡಾ.ವಿಜಯಕುಮಾರ್ ತಿಲೆ, ಪರೀಕ್ಷಾ ವಿಭಾಗದ ಮುಖ್ಯಸ್ಥ ಡಾ.ಎ.ಎ. ಪ್ರಸನ್ನ, ವಿಭಾಗದ ಮುಖ್ಯಸ್ಥರಾದ ಡಾ. ರಾಜಣ್ಣ, ಡಾ, ಹರೀಶ್, ಡಾ.ಸುಮನ ಜಯಪ್ರಕಾಶ್, ಕಾಲೇಜು ರಿಜಿಸ್ಟ್ರಾರ್ ಕುಮುದಾ, ಮಾಧ್ಯಮ ಸಂಯೋಜಕ ಕಟ್ಟಾಯ ಶಿವಕುಮಾರ್, ಪ್ರಾಧ್ಯಾಪಕರಾದ ಡಾ.ಮೂರ್ತಿ ಮಹದೇವ್ ನಾಯಕ್, ಡಾ. ತ್ರೀವೇಣಿ, ಡಾ. ಶಂಭುಲಿಂಗ ಮೂರ್ತಿ, ಡಾ.ವೆಂಕಟೇಶ್ ರಾವ್ ಕೊಲ್ಲಿ, ಕಾಲೇಜಿನ ಡೀನ್, ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಸಹ ಪ್ರಾಧ್ಯಾಪಕರು, ನೌಕರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-36-942287917

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.