ಹಾಸನ: ವಿದ್ಯಾರ್ಥಿಗಳು ಪಠ್ಯಜ್ಞಾನಕ್ಕೆ ಮಾತ್ರ ಸೀಮಿತವಾಗದೇ ಪ್ರಾಯೋಗಿಕ ಜ್ಞಾನ ಮತ್ತು ಉದ್ಯಮೋನ್ಮುಖ ಕೌಶಲ ಕಲಿಯುವುದು ಅವಶ್ಯಕ ಎಂದು ಮಲೆನಾಡು ತಾಂತ್ರಿಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಆರ್.ಟಿ. ದ್ಯಾವೇಗೌಡ ಹೇಳಿದರು.

ನಗರದ ಮಲೆನಾಡು ಎಂಜಿನಿಯರಿಂಗ್ ಕಾಲೇಜಿನ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ವಿಭಾಗವು ಸ್ಕಿಲ್ ಮತ್ತು ಕನ್ಸಲ್ಟನ್ಸಿ ಸೆಂಟರ್ ಸಹಯೋಗದಲ್ಲಿ ಆಯೋಜಿಸಿರುವ ಐದು ದಿನಗಳ ಪ್ರಾಕ್ಟಿಕಲ್ ಅಂಡ್ ಟ್ರೈನಿಂಗ್ ಆನ್ ಎಲೆಕ್ಟ್ರಿಕಲ್ ಸ್ವಿಚ್ಗಿಯರ್ ಸಿಸ್ಟಮ್ಸ್, ಪ್ರೊಟೆಕ್ಷನ್ ತಂತ್ರಗಳು ಮತ್ತು ಅವುಗಳ ಅನ್ವಯಿಕೆ ತರಬೇತಿ ಶಿಬಿರದಲ್ಲಿ ಅವರು ಮಾತನಾಡಿದರು.

ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ಅವಧಿಯಲ್ಲಿ ಪಾಠವನ್ನು ಗಮನವಿಟ್ಟು ಕೇಳಿ ಕಲಿಯುವುದರ ಜೊತೆಗೆ ಪ್ರಾಯೋಗಿಕ ಜ್ಞಾನ ಹೊಂದಬೇಕು. ಇಂತಹ ತರಬೇತಿ ಶಿಬಿರಗಳು ವಾಸ್ತವಿಕ ಜೀವನದಲ್ಲಿ ಬಳಸುವ ತಾಂತ್ರಿಕ ಜ್ಞಾನವನ್ನು ಪರಿಚಯಿಸಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಭವ ಒದಗಿಸುತ್ತವೆ ಎಂದು ಹೇಳಿದರು.

ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರಿಂಗ್ ಕ್ಷೇತ್ರವು ಅತ್ಯಂತ ಪ್ರಮುಖವಾಗಿದ್ದು, ಉದ್ಯೋಗ ಪಡೆಯುವುದಷ್ಟೇ ಅಲ್ಲದೇ ಉದ್ಯೋಗ ಸೃಷ್ಟಿಸುವ ಸಾಮರ್ಥ್ಯವನ್ನೂ ಹೊಂದಿದೆ. ಈ ಕ್ಷೇತ್ರದಲ್ಲಿ ವಿದ್ಯಾಭ್ಯಾಸ ಮಾಡಿದವರು ಸ್ವಯಂ ಉದ್ಯೋಗದತ್ತ ಸಾಗಲು ಸಾಕಷ್ಟು ಅವಕಾಶಗಳಿವೆ ಎಂದು ತಿಳಿಸಿದರು.

ಉದ್ಘಾಟಿಸಿ ಮಾತನಾಡಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಚೌಡವಳ್ಳಿ ಜಗದೀಶ್, ವಿದ್ಯಾರ್ಥಿಗಳ ಅನುಕೂಲಕ್ಕಾಗಿ ವಿವಿಧ ತರಬೇತಿ ನೀಡುವ ಉದ್ದೇಶ ಹೊಂದಿದ್ದು, ತಜ್ಞರಿಂದ ಸಮಗ್ರ ಮಾಹಿತಿ ದೊರೆಯುವುದರಿಂದ ವಿದ್ಯಾರ್ಥಿಗಳ ಕಲಿಕೆಗೆ ಇದು ನೆರವಾಗಲಿದೆ. ಉದ್ಯೋಗದ ಜೊತೆಗೆ ಸ್ವಂತ ಉದ್ಯಮ ಆರಂಭಿಸಲು ಇಂತಹ ತರಬೇತಿಗಳು ಸಹಕಾರಿ ಆಗುತ್ತವೆ ಎಂದರು.

ಡಾಬ್ಸನ್ ತರಬೇತಿ ವಿಭಾಗದ ನಿರ್ದೇಶಕ ಡಿ.ವಿ. ಶಿವಾನಂದ್ ಮಾತನಾಡಿ, ಅಧ್ಯಯನದ ಜೊತೆಗೆ ಕಾರ್ಯಾನುಭವವೂ ವಿದ್ಯಾರ್ಥಿಗಳಿಗೆ ಅಗತ್ಯವಾಗಿದೆ. ಪಾಠದ ಜೊತೆಗೆ ಪ್ರಾಯೋಗಿಕ ಅನುಭವವು ವಿದ್ಯಾರ್ಥಿಗಳ ವೃತ್ತಿ ಜೀವನಕ್ಕೆ ಬಲ ನೀಡುತ್ತದೆ ಎಂದು ಹೇಳಿದರು.

ಎಲೆಕ್ಟ್ರಿಕಲ್ ಕಂಟ್ರೋಲ್ ಪ್ಯಾನೆಲ್ ವಿನ್ಯಾಸ, ತಯಾರಿಕೆ ಮತ್ತು ಸ್ಥಾಪನೆ ಸೇರಿದಂತೆ ವಿವಿಧ ತರಬೇತಿಗಳ ಮೂಲಕ ವಿದ್ಯಾರ್ಥಿಗಳಿಗೆ ಉದ್ಯೋಗ ಹಾಗೂ ಸ್ವಯಂ ಉದ್ಯೋಗದ ಅವಕಾಶ ಪರಿಚಯಿಸಲಾಗುತ್ತಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಕಾಲೇಜಿನ ಪ್ರಾಂಶುಪಾಲ ಡಾ. ಎಚ್.ಜೆ. ಅಮರೇಂದ್ರ, ಕಾಲೇಜಿನ ಎಲ್ಲ ವಿಭಾಗಗಳ ಮೂಲಕ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ, ಅವರ ಜ್ಞಾನ ಹಾಗೂ ಮನೋಸ್ಥೈರ್ಯ ಹೆಚ್ಚಿಸಲು ಪ್ರಯತ್ನಿಸಲಾಗುತ್ತಿದೆ. ವಿದ್ಯಾರ್ಥಿಗಳು ಈ ಅವಕಾಶದ ಸದುಪಯೋಗ ಪಡೆಯಬೇಕು ಎಂದು ಸಲಹೆ ನೀಡಿದರು.

ಎಲೆಕ್ಟ್ರಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗದ ಮುಖ್ಯಸ್ಥ ಡಾ. ರಾಜಣ್ಣ ಸ್ವಾಗತಿಸಿದರು. ಸಂಸ್ಥೆಯ ಖಜಾಂಚಿ ಎಚ್.ಡಿ. ಪಾರ್ಶ್ವನಾಥ್, ಸ್ಕಿಲ್ ಮತ್ತು ಕನ್ಸಲ್ಟನ್ಸಿ ಸೆಂಟರ್ ಮುಖ್ಯಸ್ಥ ಡಾ. ಎ.ಜೆ. ಕೃಷ್ಣಯ್ಯ, ತರಬೇತಿ ನಿರ್ದೇಶಕ ಬಸವೇಶ ಶೆಟ್ಟಿ ಎಸ್., ರಾಜೇಶ್ವರಿ ಬಿ.ಎಸ್., ಡಾ. ರಾಘವೇಂದ್ರ ಪ್ರಸಾದ್ ದೇಶಪಾಂಡೆ, ಸಂಯೋಜಕರಾದ ಡಾ. ಆರ್.ಕೆ. ಧವಳ ಹಾಗೂ ಎಸ್.ಕೆ. ಯೋಗಿತಾ, ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಅಧಿಕಾರಿ ಡಾ. ಇಂದ್ರ ಬಹದ್ದೂರ್, ಸಿವಿಲ್ ವಿಭಾಗದ ಮುಖ್ಯಸ್ಥೆ ಸುಮನಾ ಜಯಂತ್ ಹಾಗೂ ವಿವಿಧ ವಿಭಾಗಗಳ ಪ್ರಾಧ್ಯಾಪಕರು, ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260409-36-1957843026

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.