ಹಾಸನ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿ ನಿಲಯದ 7 ನಿಲಯಾರ್ಥಿಗಳಿಗೆ ಹಾಗೂ ಇಲಾಖೆಯ ವಸತಿ ನಿಲಯಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ದ್ವಿತೀಯ ಪಿಯುಸಿ ಮೊದಲ ಸ್ಥಾನ ಪಡೆದ 3 ವಿದ್ಯಾರ್ಥಿಗಳಿಗೆ ಏ. 14 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಹಾಸನಾಂಬ ಕಲಾಕ್ಷೇತ್ರದಲ್ಲಿ ನಡೆಯುವ ಡಾ.ಬಿ.ಆರ್. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಅಭಿನಂದನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಹಾಸನ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮನು ಕುಮಾರ್ ತಿಳಿಸಿದ್ದಾರೆ.

ಹಾಸನ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯದಲ್ಲಿದ್ದು ವ್ಯಾಸಂಗ ಮಾಡಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸ್ಪಂದನಾ ಕಲಾ ವಿಭಾಗದಲ್ಲಿ 574, ಹಾಸನದ ಶಂಕರೀಪುರದ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿನಿಲಯದ ವಿದ್ಯಾರ್ಥಿ ರುತ್ವಿಕ್ ಕೆ.ಸಿ. ವಿಜ್ಞಾನ ವಿಭಾಗದಲ್ಲಿ 566 ಹಾಗೂ ಹಾಸನ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿನಿಲಯ ಅಪೂರ್ವ ಬಿಲ್ಡಿಂಗ್ನಲ್ಲಿರುವ ವಿದ್ಯಾರ್ಥಿ ಹರ್ಷಿತ ಕೆ ವಾಣಿಜ್ಯ ವಿಭಾಗದಲ್ಲಿ 553 ಅಂಕ ಪಡೆದಿದ್ದಾರೆ.

ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಮೆಟ್ರಿಕ್ ನಂತರದ ಬಾಲಕರ (ಮುಖ್ಯ-1) ವಿದ್ಯಾರ್ಥಿನಿಲಯದ ಶ್ರೀಧರ್, ಸುಮಂತ್ ಜಿ.ಆರ್, ಪ್ರತಾಪ್ ಐ.ಜೆ, ಮಿಥುನ್ ಎಸ್., ಮೆಟ್ರಿಕ್ ನಂತರದ ಬಾಲಕರ (ಮುಖ್ಯ-2) ವಿದ್ಯಾರ್ಥಿನಿಲಯದ ಶ್ರೀನಿವಾಸ್, ಜೇನು ಬಿ.ಆರ್. ನಾಯಕ ಇ., ಗುಡ್ಡೇನಹಳ್ಳಿ ಮೆಟ್ರಿಕ್ ನಂತರದ ಬಾಲಕರ (ಯೋಜನೇತರ) ವಿದ್ಯಾರ್ಥಿ ನಿಲಯದ ಹುಲಿಗೇಶ್ ಉತ್ತಮ ಅಂಕ ಪಡೆದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-36-1655621312

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.