ಹಾಸನ: ‘ರಕ್ತದಾನದ ಮಹತ್ವವನ್ನು ಪ್ರತಿಯೊಬ್ಬರೂ ಅರಿಯಬೇಕಿದೆ’ ಎಂದು ಹಿಮ್ಸ್ ಪ್ರಾಂಶುಪಾಲ ಡಾ.ಬಿ.ಸಿ.ರವಿಕುಮಾರ್ ಹೇಳಿದರು.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಹಾಸನ ತಾಲ್ಲೂಕು ಘಟಕದ, ಭಾರತ್ ಸ್ಕೌಟ್ಸ್ ಗೈಡ್ಸ್ ಜಿಲ್ಲಾ ಸಂಸ್ಥೆ ಹಾಗೂ ಹಾಸನ ತಾಲ್ಲೂಕು ರೆಡ್ ಕ್ರಾಸ್ ಸಂಸ್ಥೆ, ಜಯಚಾಮರಾಜೇಂದ್ರ ಆಸ್ಪತ್ರೆಗಳ ಆಶ್ರಯದಲ್ಲಿ ನಗರದ ಸ್ಕೌಟ್ಸ್ ಭವನದಲ್ಲಿ ಶುಕ್ರವಾರ ವಿಶ್ವ ರೆಡ್ ಕ್ರಾಸ್ ದಿನಾಚರಣೆ ನಿಮಿತ್ತ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.

ಒಂದು ಯುನಿಟ್ ರಕ್ತವು ಮೂರು ಜೀವ ಉಳಿಸಬಲ್ಲದು. ಅಪಘಾತ, ಪ್ರಸವಪೂರ್ವ ರಕ್ತಸ್ರಾವ, ಶಸ್ತ್ರಚಿಕಿತ್ಸೆ, ಕ್ಯಾನ್ಸರ್ ಚಿಕಿತ್ಸೆ ಮತ್ತು ಅಕಾಲಿಕ ಶಿಶುಗಳಿಗೆ ರಕ್ತದ ತಕ್ಷಣದ ಅವಶ್ಯಕತೆ ಇರುತ್ತದೆ. ಬ್ಲಡ್ ಬ್ಯಾಂಕ್ಗಳಲ್ಲಿ ರಕ್ತದ ಬೇಡಿಕೆ ಹೆಚ್ಚಿದ್ದು, ಪೂರೈಕೆ ಕಡಿಮೆ ಇದೆ. ಜಾಗತಿಕವಾಗಿ ಪ್ರತಿ 2 ಸೆಕೆಂಡ್ಗೆ ರಕ್ತದ ಅಗತ್ಯವಿರುತ್ತದೆ. ರಕ್ತದಾನಿಗಳ ಅರ್ಹತೆ, ವಯಸ್ಸು ಬಹಳ ಮುಖ್ಯ. 18ರಿಂದ 60 ವರ್ಷದೊಳಗಿನ 45-50 ಕೆ.ಜಿ.ಗಿಂತ ಹೆಚ್ಚು ತೂಕ ಮತ್ತು ಉತ್ತಮ ಆರೋಗ್ಯ ಹೊಂದಿರಬೇಕು. ಎಚ್.ಐ.ವಿ., ಹೆಪಟೈಟಿಸ್ನಂತಹ ಕಾಯಿಲೆಗಳು ಇರಬಾರದು. ಪುರುಷರು ಪ್ರತಿ 3 ತಿಂಗಳಿಗೊಮ್ಮೆ ಮತ್ತು ಮಹಿಳೆಯರು ಪ್ರತಿ 4 ತಿಂಗಳಿಗೊಮ್ಮೆ ರಕ್ತದಾನ ಮಾಡಬಹುದು ಎಂದರು.

ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಹಾಸನ ತಾಲ್ಲೂಕು ಸಭಾಪತಿ ಸುರೇಶ್ ಗುರೂಜಿ, ಮಲೆನಾಡು ತಾಂತ್ರಿಕ ವಿದ್ಯಾಲಯದ ಪ್ರೊ.ಈ.ಮಂಜುನಾಥ್, ಎ.ವಿ.ಕೆ. ಕಾಲೇಜಿನ ಉಪನ್ಯಾಸಕ ಪ್ರಕಾಶ್, ಟೈಮ್ಸ್ ಶಿಕ್ಷಣ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಡಾ.ಸುರೇಂದ್ರ ಕುಮಾರ್, ನಿವೃತ್ತ ನೌಕರರ ಸಂಘದ ಬನವಾಸೆ ರುದ್ರಪ್ಪ, ಬ್ಯಾಂಕ್ ನೌಕರರ ಸಂಘದ ಮಾಜಿ ಅಧ್ಯಕ್ಷ ಪರಮಶಿವಯ್ಯ, ಆರೋಗ್ಯ ಇಲಾಖೆಯ ಪ್ರಯೋಗಾಲಯದ ಮುಖ್ಯಸ್ಥ ಶಿವಸ್ವಾಮಿ ಮಾತನಾಡಿದರು.

ಕನ್ನಡ ಸಾಹಿತ್ಯ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಕೊಟ್ರೇಶ್ ಎಸ್.ಉಪ್ಪಾರ್, ರೋವರ್ ಭೂಮೇಶ್, ಸಾಹಿತಿ ಎಚ್.ಎಸ್.ಪ್ರತಿಮಾ ಹಾಸನ, ಗೈಡ್ ಶಿಕ್ಷಕಿಯರಾದ ವಾಣಿ ಪ್ರಕಾಶ್, ರಾಣಿ ಚರಾಶ್ರೀ, ಪುಷ್ಪ ಮಗ್ಗೆ, ರೇಣುಕಾ ಮೋಹನ್, ಎಚ್.ಎಂ.ಪ್ರಿಯಾಂಕ, ಸ್ಕೌಟ್ ಮಾಸ್ಟರ್ ಮಲ್ಲೇಶ್, ರೋವರ್ ಭೂಮೇಶ್ ಸೇರಿದಂತೆ 20 ಹೆಚ್ಚು ಸ್ಕೌಟ್ ಗೈಡ್ ಶಿಕ್ಷಕರು, ರೋವರ್ಸ್ ರೇಂಜರ್ಸ್ ರಕ್ತದಾನ ಮಾಡಿದರು.

ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ತಾಲ್ಲೂಕು ಘಟಕದ ಅಧ್ಯಕ್ಷೆ ಕೆ.ಸಿ.ಗೀತಾ, ಭಾರತ್ ಸ್ಕೌಟ್ಸ್ ಜಿಲ್ಲಾ ಉಪಾಧ್ಯಕ್ಷೆ ಎಂ.ಬಿ.ಗಿರಿಜಾಂಬಿಕ, ಜಿಲ್ಲಾ ಗೈಡ್ ಆಯುಕ್ತೆ ಜಯಾ ರಮೇಶ್, ರಾಜ್ಯ ಸಹಾಯಕ ಸಂಘಟನಾ ಆಯುಕ್ತೆ ಎಚ್.ಎಂ. ಪ್ರಿಯಾಂಕ, ಎಚ್.ಜಿ.ಕಾಂಚನಮಾಲ, ಆರ್.ಜಿ. ಗಿರೀಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-36-1779307989

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.