ಹಾಸನ: ಮಕ್ಕಳ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಗೆ ಪೌಷ್ಟಿಕ ಆಹಾರ ಸೇವನೆ ಅತಿ ಅಗತ್ಯ ಎಂದು ವೈದ್ಯೆ ಡಾ.ಸೌಮ್ಯ ಮಣಿ ಹೇಳಿದರು.

ಇಲ್ಲಿನ ವಿಜಯನಗರ ಬಡಾವಣೆಯ ಟೈಮ್ಸ್ ಅಂತರ ರಾಷ್ಟ್ರೀಯ ಶಾಲೆಯಲ್ಲಿ ಈಚೆಗೆ ನಡೆದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೋಷಕರು ಡಯಟ್ ಹೆಸರಿನಲ್ಲಿ ಮಕ್ಕಳಿಗೂ ಸತ್ವಯುತ ಆಹಾರವನ್ನು ನೀಡದೇ ಅವರ ಬೆಳವಣಿಗೆ ಕುಂಠಿತಗೊಳಿಸಬೇಡಿ. ಉತ್ತಮ ದೈಹಿಕ ಹಾಗೂ ಮಾನಸಿಕ ಬೆಳವಣಿಗೆಯು ಅವರ ಗ್ರಹಣ ಶಕ್ತಿಯನ್ನು ಹೆಚ್ಚಿಸುತ್ತದೆ. ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಆರೋಗ್ಯ ಸಮಸ್ಯೆಗಳ ಬಗ್ಗೆ ಮಹತ್ವದ ಮಾಹಿತಿ ನೀಡಿದರು.

ವಕೀಲ ರಾಜು ಕಶ್ಯಪ್ ಮಾತನಾಡಿ, ಮಕ್ಕಳನ್ನು ಮೊಬೈಲ್ನಿಂದ ದೂರವಿರಿಸಿ. ಪೋಷಕರೂ ಮೊಬೈಲ್ಗೆ ವಿರಾಮ ನೀಡಿ, ಮಕ್ಕಳ ಜೊತೆ ಕಾಲ ಕಳೆಯಬೇಕು ಎಂದು ಹೇಳಿದರು.

ಟೈಮ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಬಿ.ಕೆ. ಟೈಮ್ಸ್ ಗಂಗಾಧರ್ ಮಾತನಾಡಿ, ವಿದ್ಯಾರ್ಥಿಗಳಿಗೆ ಬೇಕಾದ ಗುಣಮಟ್ಟದ ಹಾಗೂ ಮೌಲ್ಯಯುತ ಶಿಕ್ಷಣವನ್ನು ನೀಡುವಲ್ಲಿ ಟೈಮ್ಸ್ ಶ್ರಮಿಸುತ್ತಿದೆ. ಈ ನಿಟ್ಟಿನಲ್ಲಿ ನಮ್ಮ ಪ್ರತಿಷ್ಠೆ, ಅಂತಸ್ತನ್ನು ಬದಿಗಿಟ್ಟು ಪುಟ್ಟ ಮಕ್ಕಳನ್ನು ಹೊರಗೆ ಆಡಲು ಬಿಡಿ. ಅಜ್ಜ– ಅಜ್ಜಿಯರ ಬಾಂಧವ್ಯದ ಮಡಿಲಲ್ಲಿ ಬೆಳೆಯಲು ಬಿಟ್ಟು ಅವರ ಅನುಭವದ ಒಡನಾಟ ಮಕ್ಕಳಲ್ಲಿ ಸಹ ಜೀವನವನ್ನು ಕಲಿಯುವಂತಾಗಲಿ ಎಂದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-36-1541637575

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.