ಹಾಸನ: ‘ಜಗತ್ತನ್ನು ಗಮನಿಸುವ ಅರಿವು ನಮ್ಮನ್ನು ಹೊಸ ಆಲೋಚನೆ, ಹೊಸ ಚಿಂತನೆಗಳಿಗೆ ತೆರೆಯುತ್ತದೆ. ಛಾಯಾಚಿತ್ರ ಪತ್ರಕರ್ತರಾಗಿ ಸುತ್ತಲಿನ ವಿದ್ಯಮಾನಗಳನ್ನು ಅನುಭವಿಸಿದಾಗ ಮಾತ್ರ ನೈಜ ಮತ್ತು ವಸ್ತುನಿಷ್ಠ ಸುದ್ದಿಗಳನ್ನು ತಲುಪಿಸಲು ಸಾಧ್ಯ’ ಎಂದು ಚಿಂತಕ, ಹವ್ಯಾಸಿ ಛಾಯಾಗ್ರಾಹಕ ಎಚ್.ಆರ್. ನವೀನ್ ಕುಮಾರ್ ಹೇಳಿದರು.

ನಗರದ ಸರ್ಕಾರಿ ಕಲಾ, ವಾಣಿಜ್ಯ ಮತ್ತು ಸ್ನಾತಕೋತ್ತರ ಕಾಲೇಜಿನಲ್ಲಿ ಪತ್ರಿಕೋದ್ಯಮ ವಿಭಾಗದ ವತಿಯಿಂದ ಮಂಗಳವಾರ ಆಯೋಜಿಸಿದ್ದ ‘ದಿ ಆರ್ಟ್ ಅಂಡ್ ಸೈನ್ಸ್ ಆಫ್ ಫೋಟೋಗ್ರಫಿ’ ಒಂದು ದಿನದ ಕೌಶಲಾಭಿವೃದ್ಧಿ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಪತ್ರಿಕೋದ್ಯಮದ ವಿದ್ಯಾರ್ಥಿಗಳಿಗೆ ಕ್ಯಾಮೆರಾ ಮತ್ತು ಛಾಯಾಗ್ರಹಣದ ಬಗ್ಗೆ ಪ್ರಾಯೋಗಿಕ ಮಾಹಿತಿ ನೀಡಿದರು.

‘ತಂತ್ರಜ್ಞಾನವನ್ನು ಕಲಾತ್ಮಕ ರೀತಿಯಲ್ಲಿ ದುಡಿಸಿಕೊಳ್ಳುವುದರಿಂದ ಹೆಚ್ಚು ಕ್ರಿಯಾಶೀಲರಾಗುತ್ತೇವೆ. ತೆರೆದ ಅವಕಾಶಗಳು ನಮ್ಮವಿಶ್ವಾಸವನ್ನು ಹೆಚ್ಚಿಸುತ್ತವೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ರಾಜು ಡಿ.ಎಸ್. ಮಾತನಾಡಿ, ‘ಪತ್ರಕರ್ತರು ಪ್ರಚಲಿತ ವಿದ್ಯಮಾನಗಳ ನಿರ್ವಾಹಕರು. ಜಗತ್ತಿನಾದ್ಯಂತ ಕ್ಷಣ ಕ್ಷಣ ಮಾಹಿತಿಗಳನ್ನು ವಿವರಿಸುವ ಹಂತದಲ್ಲಿ ಛಾಯಾಚಿತ್ರ ಪತ್ರಕರ್ತರ ಪಾತ್ರ ದೊಡ್ಡದಿದೆ. ವಿದ್ಯಾರ್ಥಿ ದಿಸೆಯಲ್ಲಿಯೇ ಕೌಶಲ ಕಾರ್ಯಾಗಾರಗಳ ಮೂಲಕ ನೈತಿಕತೆ ಮತ್ತು ಸೃಜನಶೀಲತೆ ಕಲಿಸುವ ಕೆಲಸವಾಗಬೇಕು’ ಎಂದರು.

ಕಾಲೇಜಿನ ಶೈಕ್ಷಣಿಕ ಡೀನ್ ಹರೀಶ್ ಎಂ.ಕೆ. ಮಾತನಾಡಿ, ‘ಸಮಾಜವನ್ನು ಸೂಕ್ಷ್ಮವಾಗಿ ಗ್ರಹಿಸುವ ಶಕ್ತಿ ಉತ್ತಮ ಪತ್ರಿಕೋದ್ಯಮಿಯನ್ನು ರೂಪಿಸುತ್ತದೆ. ಮಾನವೀಯತೆ ಮತ್ತು ಪ್ರೇರಣೆಯಿಂದ ಉಂಟಾದ ಅಕ್ಷರ ಮತ್ತು ಚಿತ್ರಗಳು ಉತ್ತಮ ಸಮಾಜವನ್ನು ಕಟ್ಟಿಕೊಡುವಲ್ಲಿ ಮುಖ್ಯ ಪಾತ್ರ ವಹಿಸುತ್ತವೆ. ವಿದ್ಯಾರ್ಥಿಗಳು ಆ ನಿಟ್ಟಿನಲ್ಲಿ ತಯಾರಾಗಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಇಳಿಯುವಂತಾಗಬೇಕು’ ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಿಭಾಗದ ಮುಖ್ಯಸ್ಥೆ ಪ್ರಮೀಳಾ, ‘ಶೈಕ್ಷಣಿಕ ಜ್ಞಾನವನ್ನು ಸಮರ್ಪಕವಾಗಿ ಬದುಕಿಗೆ ಅನ್ವಯಿಸಲು ಕೌಶಲ ಅಗತ್ಯ. ಅದರಲ್ಲೂ ಪತ್ರಿಕೋದ್ಯಮವು ಸೃಜನಶೀಲತೆ ನಿರೀಕ್ಷಿಸುವ ಕ್ಷೇತ್ರ. ಪ್ರಾಯೋಗಿಕ ಕಲಿಕೆಯಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಛಾಯಾಚಿತ್ರ ಕಾರ್ಯಾಗಾರ ಆಯೋಜಿಸಿದ್ದು, ಮುಂದಿನ ದಿನಗಳಲ್ಲೂ ಪ್ರಾಯೋಗಿಕ ಕಲಿಕೆಗೆ ಒತ್ತು ಕೊಡಬೇಕಿದೆ’ ಎಂದು ಹೇಳಿದರು.

ಪತ್ರಾಂಕಿತ ವ್ಯವಸ್ಥಾಪಕ ಸತ್ಯಮೂರ್ತಿ ಮಾತನಾಡಿದರು. ಪತ್ರಿಕೋದ್ಯಮ ವಿಭಾಗದ ಭವ್ಯ, ಸಚಿನ್ ಎನ್.ಜೆ., ಸತೀಶ್ ಎ.ಜಿ. ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260410-36-1298499769

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.