ಹಾಸನ: 20 ನೇ ಶತಮಾನದ ಆದಿಯಲ್ಲಿ ಅಮೆರಿಕದ ಸಿದ್ಧ ಉಡುಪು ತಯಾರಿಕಾ ಕಾರ್ಖಾನೆಯ ಕಾರ್ಮಿಕ ಮಹಿಳೆಯರ ಹೊರಾಟದಿಂದ ಆರಂಭಗೊಂಡ ಅಂತರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸುತ್ತಿರುವ ಸಂದರ್ಭದಲ್ಲಿ ಅದರ ಮೂಲ ಉದ್ದೇಶಗಳು ಎಷ್ಟರ ಮಟ್ಟಿಗೆ ಪೂರ್ಣಗೊಂಡಿವೆ? ಮಹಿಳೆಯರು ಯಾವ ಜ್ಞಾನ ಗಳಿಸಿಕೊಳ್ಳಬೇಕು ಎಂಬುದರ ಬಗ್ಗೆ ಆಲೋಚಿಸಬೇಕಿದೆ ಎಂದು ಶಿಕ್ಷಕಿ ನಾಜಿಮಾ ಹೇಳಿದರು.

ಜಿಲ್ಲಾ ಲೇಖಕಿಯರ ಬಳಗದ ವತಿಯಿಂದ ನಗರದ ಕೆಂಪುಚಲುವಾಜಮ್ಮಣ್ಣಿ ಮಹಿಳಾ ಸಮಾಜದಲ್ಲಿ ಈಚೆಗೆ ಆಯೋಜಿಸಿದ್ದ ಸಾಹಿತ್ಯದ ನಡಿಗೆ ಸಮುದಾಯದೆಡೆಗೆ ತಿಂಗಳ ತಿರುಳು ಕಾರ್ಯಕ್ರಮ ಅವರು ಮಾತನಾಡಿದರು.

ಮಹಿಳೆಯರ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸಾಧನೆಗಳನ್ನು ಗುರುತಿಸುವುದು, ಲಿಂಗಸಮಾನತೆ ಉತ್ತೇಜಿಸುವುದು ಹಾಗೂ ಶೋಷಣೆಯ ವಿರುದ್ಧ ಧ್ವನಿ ಎತ್ತುವುದನ್ನು ಉದ್ದೇಶವಾಗಿ ಇಟ್ಟುಕೊಂಡು ಮಹಿಳಾ ದಿನವನ್ನು ಆಚರಿಸುತ್ತ ಬರುತ್ತಿದ್ದೇವೆ ಎಂದರು.

ಪ್ರತಿ ಮೂವರು ಮಹಿಳೆಯರಲ್ಲಿ ಒಬ್ಬಳು ಕೌಟುಂಬಿಕ ಹಿಂಸೆ ಅನುಭವಿಸುತ್ತಿದ್ದಾಳೆ. ಲಿಂಗ ಆಧಾರಿತ ಹಿಂಸೆ, ಉದ್ಯೋಗ ಸ್ಥಳದಲ್ಲಿ ತಾರತಮ್ಯ, ಸುರಕ್ಷತೆಯ ಕೊರತೆ, ಶಿಕ್ಷಣ ಮತ್ತು ಆರೋಗ್ಯದಲ್ಲಿನ ಅಂತರ, ರಾಜಕೀಯ ಪ್ರಾತಿನಿಧ್ಯದ ಕೊರತೆ, ಪಿತೃ ಪ್ರಧಾನ ಮನಸ್ಥಿತಿಗಳು, ಸಾಮಾಜಿಕ ಹಾಗೂ ಸಾಂಸ್ಕೃತಿಕ ನಿರ್ಬಂಧಗಳು, ಡಿಜಿಟಲ್ ಅಂತರದಂತಹ ಸಮಸ್ಯೆ ಎದುರಿಸುತ್ತಿದ್ದಾಳೆ. ಶತಮಾನ ಕಳೆದಂತೆ ಹೊಸ ಸಮಸ್ಯೆ ಎದುರಾಗುತ್ತಿವೆ ಎಂದರು.

ಇದರೊಟ್ಟಿಗೆ ಯುದ್ಧ ಮತ್ತು ಆಹಾರದ ಕೊರತೆ ಮತ್ತೆ ಮುನ್ನೆಲೆಗೆ ಬಂದಿದೆ. ಎಫ್ಸ್ಟೆನ್ ಫೈಲ್ನಲ್ಲಿ ಮಹಿಳೆಯರು ಮತ್ತು ಮಕ್ಕಳ ಶೋಚನೀಯ ಸ್ಥಿತಿ ಹೊರಬರುತ್ತಿದೆ. ಇವುಗಳ ಬಗ್ಗೆ ಚರ್ಚಿಸಬೇಕಿದೆ. ಬೃಹತ್ ಹೋರಾಟ ನಡೆಸಲೇಬೇಕು ಎಂದು ಹೇಳಿದರು.

ಲೇಖಕಿಯರ ಬಳಗದ ಅಧ್ಯಕ್ಷ ರಾಜೇಶ್ವರಿ ಹುಲ್ಲೇನಹಳ್ಳಿ ಅಧ್ಯಕ್ಷತೆ ವಹಿಸಿದ್ದರು. ವನಜಾ ಸುರೇಶ್ ಪ್ರಾಯೋಜಕತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೇಖಕಿಯರಾದ ಲಕ್ಷ್ಮಿದೇವಿ ದಾಸಪ್ಪ, ಭಾರತಿ ಹಾದಿಗೆ, ಲಲಿತಾ ಎಸ್., ರತ್ನಮ್ಮ ಬಿ.ಟಿ., ಯಮುನಾ, ಗೀತಾ ಕೆ.ಸಿ., ಭಾರತಿ ಎಚ್.ಎನ್., ಕಲ್ಪನಾ, ಅಹನಾ, ಗಿರಿಜಾಂಬ ಅವರು ಸಾಹಿತ್ಯದ ವಿವಿಧ ಪ್ರಕಾರಗಳನ್ನು ಪ್ರಸ್ತುತ ಪಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260401-36-1488486441

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.