ಹಾಸನ: ‘ಭೌತಿಕ ರಂಗಭೂಮಿಯಲ್ಲಿ ನಿರ್ದೇಶಕರು ಸೂತ್ರಧಾರರಂತೆ ಪ್ರಮುಖ ಪಾತ್ರ ವಹಿಸುತ್ತಾರೆ’ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಲ್.ಮಲ್ಲೇಶಗೌಡ ಹೇಳಿದರು.

ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ, ರಂಗಭೂಮಿ ಕಲಾವಿದರ ಸಂಘ, ಜಿಲ್ಲಾ ಕಲಾವಿದರ ಹಿತರಕ್ಷಣಾ ಸಮಿತಿ ಹಾಗೂ ವಿವಿಧ ಕಲಾ ಸಂಘಗಳ ಸಹಯೋಗದಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ನಗರದ ಕನ್ನಡ ಸಾಹಿತ್ಯ ಪರಿಷತ್ನಲ್ಲಿ ಆಯೋಜಿಸಿದ್ದ ರಂಗಗೀತೆ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ನಿರ್ದೇಶಕರು ಪಾತ್ರಧಾರಿಗಳಿಂದ ಸೂಕ್ಷ್ಮ ಅಭಿವ್ಯಕ್ತಿಯನ್ನು ಹೊರತೆಗೆದು ಪಾತ್ರಕ್ಕೆ ಜೀವ ತುಂಬುವ ಜವಾಬ್ದಾರಿ ಹೊಂದಿರುತ್ತಾರೆ’ ಎಂದು ವಿವರಿಸಿದರು.

ಹಿರಿಯ ಕಲಾವಿದ ಗ್ಯಾರಂಟಿ ರಾಮಣ್ಣ ಮಾತನಾಡಿ, ರಂಗಭೂಮಿ ಎಂದರೆ ನಿರ್ದಿಷ್ಟ ವೇದಿಕೆ ಮಾತ್ರವಲ್ಲ, ಭೂಮಿಯ ಎಲ್ಲಿಯಾದರೂ ಬೆಟ್ಟ, ಬೀದಿ ಅಥವಾ ವೇದಿಕೆ ಕಲಾ ಪ್ರದರ್ಶನ ನಡೆಯುವ ಎಲ್ಲ ಸ್ಥಳವೂ ರಂಗಭೂಮಿಯೇ ಎಂದು ಹೇಳಿದರು.

ಸಾಹಿತಿ ಗೊರೂರು ಅನಂತರಾಜು ಮಾತನಾಡಿ, ‘1948ರಲ್ಲಿ ಯುನೆಸ್ಕೋ ಆಶ್ರಯದಲ್ಲಿ ಅಂತರರಾಷ್ಟ್ರೀಯ ಥಿಯೇಟರ್ ಇನ್ಸ್ಟಿಟ್ಯೂಟ್ ಸ್ಥಾಪನೆಯಾಗಿದ್ದು, 1961ರಲ್ಲಿ ನಡೆದ ಅಂತರರಾಷ್ಟ್ರೀಯ ಥಿಯೇಟರ್ ಕಾಂಗ್ರೆಸ್ನಲ್ಲಿ ವಿಶ್ವ ರಂಗಭೂಮಿ ದಿನಾಚರಣೆ ಪ್ರಸ್ತಾಪ ಅಂಗೀಕರಿಸಲಾಯಿತು. 1962ರಿಂದ ಆಚರಣೆ ಪ್ರಾರಂಭವಾಯಿತು’ ಎಂದು ಮಾಹಿತಿ ನೀಡಿದರು.

ನಿವೃತ್ತ ತಹಸೀಲ್ದಾರ್ ಎ.ವಿ.ರುದ್ರಪ್ಪಾಜಿರಾವ್ ಮಾತನಾಡಿದರು. ಜಿಲ್ಲಾ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ರಾಮಘಟ್ಟ ಜಗದೀಶ್, ನಟರಾದ ಎಚ್.ಎಂ. ಪ್ರಭಾಕರ್, ಆಡುವಳ್ಳಿ ಸುನೀಲ್, ಕಾರ್ಲೆ ಗೋವಿಂದೇಗೌಡ, ಪ್ರದೀಪ್ ಗವೇನಹಳ್ಳಿ, ಭುವನೇಶ್ವರಿ ಉಪಸ್ಥಿತರಿದ್ದರು. 50ಕ್ಕೂ ಹೆಚ್ಚು ಕಲಾವಿದರು ಹಾಗೂ ಮಹಿಳೆಯರು ರಂಗಗೀತೆ ಗಾಯನ ನಡೆಸಿದರು. ಬೆಳ್ಳೂರು ಕ್ರಾಸ್ನ ಡಿ.ಸಿ. ಮಂಜುನಾಥ್ ಹಾರ್ಮೋನಿಯಂ ಹಾಗೂ ಅಶ್ವಥ್ ಕುಮಾರ್ ಕೀ ಬೋರ್ಡ್ ಮೂಲಕ ಸಹಕಾರ ನೀಡಿದರು.

ಕಸಾಪ ವತಿಯಿಂದ 50 ಮಂದಿ ರಂಗ ಕಲಾವಿದರನ್ನು ಸನ್ಮಾನಿಸಲಾಯಿತು. ಪರಿಷತ್ತಿನ ಪದಾಧಿಕಾರಿಗಳು ಭಾಗವಹಿಸಿದ್ದರು. ಗೌರವ ಕಾರ್ಯದರ್ಶಿ ಬಿ.ಆರ್.ಬೊಮ್ಮೇಗೌಡ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260330-36-1707454185

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.