ಹಾಸನ: ಪುಸ್ತಕಗಳು ಆತ್ಮದ ದನಿಗಳಾಗಿದ್ದು, ಸಹೃದಯ ಓದುಗನಲ್ಲಿ ಆನಂದದ ಅನುಭೂತಿಯನ್ನು ಉಂಟು ಮಾಡುವ ಶಕ್ತಿ ಹೊಂದಿವೆ ಎಂದು ಲೇಖಕ, ನಿವೃತ್ತ ಉಪನ್ಯಾಸಕ ಗೊರೂರು ಶಿವೇಶ್ ಹೇಳಿದರು.

ವಿಶ್ವ ಪುಸ್ತಕ ದಿನದ ಅಂಗವಾಗಿ ಗುರುವಾರ ನಗರದ ಅದಮ್ಯ ಪುಸ್ತಕ ಭಂಡಾರದಲ್ಲಿ ಅದಮ್ಯ ಬುಕ್ಸ್, ಕದಂಬ ಸೈನ್ಯ ಕನ್ನಡ ಸಂಘಟನೆ ಹಾಗೂ ಸಾಹಿತ್ಯಾಭಿಮಾನಿಗಳ ಬಳಗದ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಶ್ವ ಪುಸ್ತಕ ದಿನವು ಭಾಷೆಯ ಹಬ್ಬವಾಗಿದ್ದು, ವಿಶ್ವ ಪ್ರಸಿದ್ಧ ನಾಟಕಕಾರ ವಿಲಿಯಂ ಶೇಕ್ಸ್ಪೀಯರ್ ಅವರ ಹುಟ್ಟು ಹಾಗೂ ಮರಣದ ದಿನವಾಗಿರುವುದು ವಿಶೇಷ. ಶೇಕ್ಸ್ಪೀಯರ್ ಅವರ ಕೃತಿಗಳು ಮಾನವ ಬದುಕಿನ ಭಾವನೆಗಳನ್ನು ಆಳವಾಗಿ ಚಿತ್ರಿಸುತ್ತವೆ. ಅದೇ ರೀತಿಯಲ್ಲಿ ಪ್ರತಿಯೊಂದು ಪುಸ್ತಕವೂ ಮಾನವ ಜೀವನದ ವಿಭಿನ್ನ ಮುಖಗಳನ್ನು ನಮಗೆ ಪರಿಚಯಿಸುತ್ತದೆ ಎಂದು ಹೇಳಿದರು.

ಡಾ. ಬರಾಳು ಶಿವರಾಮ ಮಾತನಾಡಿ, ಪುಸ್ತಕ ಓದುವ ಅಭ್ಯಾಸವು ವ್ಯಕ್ತಿಯ ಚಿಂತನೆಗೆ ಆಳವನ್ನು ನೀಡುತ್ತದೆ. ಓದು ಜೀವನದ ದಿಕ್ಕನ್ನು ತಿದ್ದುವ ಶಕ್ತಿಯಾಗಿದೆ ಎಂದು ಹೇಳಿದರು.

ಆನಂದ್ ನೆಲ್ಲಿಗೆರೆ ಮಾತನಾಡಿ, ಜ್ಞಾನವೇ ಮಾನವನ ನಿಜವಾದ ಸಂಪತ್ತು. ಅದನ್ನು ಹೆಚ್ಚಿಸುವ ಸರಳ ಮಾರ್ಗ ಪುಸ್ತಕ ಓದುವುದು ಎಂದರು.

ಕೊಟ್ರೇಶ್ ಎಸ್. ಉಪ್ಪಾರ್ ಮಾತನಾಡಿ, ಪುಸ್ತಕಗಳು ಶಿಕ್ಷಕರಿಗಿಂತ ಹೆಚ್ಚಾಗಿ ಜೀವನ ಪಾಠಗಳನ್ನು ಕಲಿಸುತ್ತವೆ. ಅವು ನಮ್ಮೊಳಗಿನ ಮಾನವೀಯತೆ ಬೆಳೆಸುತ್ತವೆ ಎಂದರು.

ರವಿ ನಾಕಲಗೂಡು, ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸಲು ಇಂತಹ ಸಾಹಿತ್ಯ ಕಾರ್ಯಕ್ರಮಗಳು ಇಂದಿನ ಕಾಲದಲ್ಲಿ ಅಗತ್ಯ. ಪುಸ್ತಕಗಳು ಜ್ಞಾನಕ್ಕೆ ಬಾಗಿಲು ತೆರೆಯುತ್ತವೆ ಎಂದು ಹೇಳಿದರು.

ಗೊರೂರು ಅನಂತರಾಜು ಮಾತನಾಡಿ, ಸಾಹಿತ್ಯವೆಂದರೆ ಸಮಾಜದ ಪ್ರತಿಬಿಂಬ. ಪುಸ್ತಕಗಳ ಮೂಲಕ ನಮ್ಮ ಸಂಸ್ಕೃತಿ ಮತ್ತು ಮೌಲ್ಯಗಳನ್ನು ಉಳಿಸಬಹುದು ಎಂದು ಅಭಿಪ್ರಾಯಪಟ್ಟರು. ಅಧ್ಯಕ್ಷತೆ ವಹಿಸಿದ್ದ ಎ.ಎಚ್. ಗಣೇಶ್, ಒಳ್ಳೆಯ ಓದು ಒಳ್ಳೆಯ ಬದುಕಿಗೆ ದಾರಿ ಮಾಡಿಕೊಡುತ್ತದೆ. ವಿದ್ಯಾರ್ಥಿಗಳು ಪುಸ್ತಕಗಳನ್ನು ತಮ್ಮ ಸ್ನೇಹಿತರನ್ನಾಗಿ ಮಾಡಿಕೊಂಡರೆ ಯಶಸ್ಸು ಖಚಿತ ಎಂದು ಹೇಳಿದರು.

ಲೇಖಕ ವಿಶ್ವಾಸ್ ಡಿ. ಗೌಡ ಮಾತನಾಡಿ, ಪುಸ್ತಕಗಳು ಕೇವಲ ಜ್ಞಾನವಲ್ಲ. ಅವು ಮನಸ್ಸುಗಳನ್ನು ಸಂಪರ್ಕಿಸುವ ಸೇತುವೆಗಳಾಗಿವೆ. ಓದುವ ಸಂಸ್ಕೃತಿ ಬೆಳೆದರೆ ಸಮಾಜವೂ ಸೃಜನಾತ್ಮಕವಾಗಿ ಬೆಳೆಯುತ್ತದೆ ಎಂದು ಹೇಳಿದರು. ಪುಸ್ತಕ ಮಾರಾಟಗಾರ ನಾಗೇಂದ್ರ ವಂದಿಸಿದರು. ಗಾಯಕ ಶ್ರೀಕಾಂತ್ ಗೊರೂರು ಪ್ರಾರ್ಥಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-36-1786016551

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.