ಹಾಸನ: ಶಾಲಾ-ಕಾಲೇಜುಗಳನ್ನು ಪ್ರೀತಿಸಬೇಕು. ಶಾಲಾ ಕಾಲೇಜುಗಳಿಗೆ ಬೆಲೆ ಕಟ್ಟುವುದಕ್ಕೆ ಆಗುವುದಿಲ್ಲ. ಇವು ಅಕ್ಷರ ಸಂಪತ್ತನ್ನು ಕೊಡುತ್ತವೆ. ಅವುಗಳನ್ನು ರಕ್ಷಿಸುವುದು ಎಲ್ಲರ ಕರ್ತವ್ಯ. ಶಿಕ್ಷಣವನ್ನು ಎಲ್ಲ ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ನಿವೃತ್ತ ಶಿಕ್ಷಣಾಧಿಕಾರಿ ಜೆ.ಬಿ. ತಮ್ಮಣ್ಣಗೌಡ ಅಭಿಪ್ರಾಯಪಟ್ಟರು.

ನಗರದ ಗಂಧದಕೋಠಿ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ 2025-26ನೇ ಸಾಲಿನ ಸಾಂಸ್ಕೃತಿಕ, ಕ್ರೀಡೆ, ಎನ್.ಎಸ್.ಎಸ್., ರೆಡ್ ಕ್ರಾಸ್, ರೆಡ್ ರಿಬ್ಬನ್ ಮತ್ತು ಸ್ಕೌಟ್ಸ್ ಅಂಡ್ ಗೈಡ್ಸ್ ವೇದಿಕೆ ಪಠ್ಯೇತರ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ಸಾವಿರಾರು ಮಾತುಗಳಿಗಿಂತ ಒಂದು ಸಣ್ಣ ಕೆಲಸ ಲೇಸು. ಬದುಕಿನಲ್ಲಿ ಮನುಷ್ಯ ಏನು ಮಾಡಿದ ಎಂಬುದು ಮುಖ್ಯ ಎಂಬ ಗಾಂಧೀಜಿಯವರ ಮಾತು ಹಾಗೂ ಬಾಳಬೇಕು, ದುಡಿಯಬೇಕು, ಸಾಯಬೇಕು ಎಂಬ ಗೊರೂರು ರಾಮಸ್ವಾಮಿ ಅಯ್ಯಂಗಾರ್ ಮಾತನ್ನು ನೆನಪಿನಲ್ಲಿ ಇಟ್ಟುಕೊಳ್ಳಬೇಕು’ ಎಂದರು.

‘ನಾವು 21ನೇ ಶತಮಾನದಲ್ಲಿ ಇದ್ದೇವೆ. ಇದು ಸ್ಪರ್ಧಾತ್ಮಕ ಪ್ರಪಂಚ. ಎಲ್ಲರೂ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು. ಗೆಲ್ಲುವುದು, ಸೋಲುವುದು ಸಹಜ. ವಿದ್ಯಾರ್ಥಿಗಳ ಗುರಿ ಯಾವಾಗಲೂ ದೊಡ್ಡದಾಗಿರಬೇಕು. ಆಗ ಸಾಧನೆ ಕೂಡ ದೊಡ್ಡದಾಗಿರುತ್ತದೆ. ಜಾತಿ, ಮತ ಭೇದವನ್ನು ಬಿಡಿ. ಮಾನವತೆಗೆ ಜೀವ ಕೊಡಿ’ ಎಂದರು.

‘ವಿದ್ಯಾರ್ಥಿಗಳು ತಪಸ್ವಿಗಳು. ವಿದ್ಯಾರ್ಥಿಗಳು ಭವಿಷ್ಯದ ಏಳಿಗೆಗಾಗಿ ತಪಸ್ಸು ಮಾಡಬೇಕು. ಇದರ ಫಲದಿಂದ ತಂದೆ, ತಾಯಿ, ಗುರುಗಳು, ಸಮಾಜ, ಸರ್ಕಾರ ಎಲ್ಲ ಸಂತೋಷಪಡುತ್ತದೆ. ಕಾಲಕ್ಕೆ ಯಾವುದೇ ಗುಣ ಇರುವುದಿಲ್ಲ. ಅದು ನಿರ್ಗುಣ. ಶ್ರದ್ದೆ ಇದ್ದರೆ ನೀ ಗೆದ್ದೆ’ ಎಂದು ಹೇಳಿದರು.

ಪ್ರಾಂಶುಪಾಲ ಡಿ.ಕೆ. ಮಂಜಯ್ಯ ಮಾತನಾಡಿ, ‘ಒಂದು ಪರಿಸರ ಚೆನ್ನಾಗಿ ಇರಬೇಕೆಂದರೆ ಕಾಲೇಜಿನ ಪರಿಸರ ಚೆನ್ನಾಗಿ ಇರಬೇಕು. ಬುದ್ಧ, ಬಸವಣ್ಣ, ಅಂಬೇಡ್ಕರ್ ಮತ್ತು ಗಾಂಧಿಯವರ ಚಿಂತನೆ ಪುಸ್ತಕಗಳನ್ನು ಓದಿದ್ದೇನೆ. ಎಲ್ಲ ವಿಭಾಗದ ಪ್ರಾಧ್ಯಾಪಕರು ಹೇಳುವ ಕಾರ್ಯಗಳನ್ನು ಮತ್ತು ಕೆಲಸಗಳನ್ನು ಚಾಚು ತಪ್ಪದೇ ಮಾಡುತ್ತಾರೆ. ಎಲ್ಲರೂ ಸಹಕರಿಸುತ್ತಾರೆ. ವಿದ್ಯಾರ್ಥಿಗಳು ಕಲಿಕೆಯ ಮನಸ್ಥಿತಿಯನ್ನು ಬೆಳೆಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪ್ರಾಧ್ಯಾಪಕರು,ಉಪನ್ಯಾಸಕರು ಇದ್ದರು. ಮೋಹನ್ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕ ಕಾಂತರಾಜು ಸ್ವಾಗತಿಸಿದರು. ಪೂರ್ಣಿಮಾ ವಂದಿಸಿದರು. ಲೋಕೇಶ್ ನಿರೂಪಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-36-702054093

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.