ಹಾಸನ: ರಾಜ್ಯ ಸರ್ಕಾರದ ಕೆಪಿಎಸ್ ಮ್ಯಾಗ್ನೆಟ್ ಯೋಜನೆಗೆ ಜಿಲ್ಲೆಯ ಹಲವು ಗ್ರಾಮಗಳ ಪೋಷಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ‘ನಮ್ಮ ಮಕ್ಕಳನ್ನು ಕೆಪಿಎಸ್ ಶಾಲೆಗೆ ಕಳುಹಿಸುವುದಿಲ್ಲ’ ಎಂದು ಪತ್ರ ಮೂಲಕ ಲಿಖಿತವಾಗಿ ಘೋಷಿಸಿದ್ದಾರೆ. ಈ ಸಂಬಂಧ ಪೋಷಕರು ಶಿಕ್ಷಣಾಧಿಕಾರಿಗಳಿಗೆ ಬರೆದ ಪತ್ರಗಳನ್ನು ಎಐಡಿಎಸ್ಒ ಜಿಲ್ಲಾ ಸಮಿತಿ ಶನಿವಾರ ಬಿಡುಗಡೆ ಮಾಡಿತು.

ನಗರದ ಹೇಮಾವತಿ ಪ್ರತಿಮೆ ಹಿಂಭಾಗದ ಮಹಾರಾಜ ಪಾರ್ಕ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಎಐಡಿಎಸ್ಒ ಜಿಲ್ಲಾ ಘಟಕದ ಅಧ್ಯಕ್ಷೆ ಚೈತ್ರಾ, ‘7 ತಿಂಗಳಿಂದ ಶಾಲೆಗಳನ್ನು ಮುಚ್ಚುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆಗೆ ರಾಜ್ಯದ ಮೂಲೆಮೂಲೆಗಳಿಂದ ವಿರೋಧ ವ್ಯಕ್ತವಾಗುತ್ತಿದೆ. ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಗಳನ್ನು ರಚಿಸಿಕೊಂಡು ಹಳ್ಳಿ, ಹೋಬಳಿ, ತಾಲ್ಲೂಕು, ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಯಶಸ್ವಿ ಹೋರಾಟಗಳು ನಡೆದಿವೆ’ ಎಂದರು.

‘ರಾಜ್ಯದ ಜನತೆಯ ತೀವ್ರ ಪ್ರತಿರೋಧದ ನಡುವೆಯೂ ಸರ್ಕಾರ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯನ್ನು ಕೆಲ ಗ್ಯಾರಂಟಿಗಳ ತೇಪೆ ಹಚ್ಚಿ ಜಾರಿಗೊಳಿಸಲು ಮುಂದಾಗಿದೆ. ಇದು ವಿಶ್ವಾಸದ್ರೋಹ. ಆದರೆ ಹಾಸನದ ಅರಸೀಕೆರೆ, ಗೊರೂರು ಭಾಗದ ಪೋಷಕರು ಸರ್ಕಾರದ ಹಟಮಾರಿ ಧೋರಣೆಗೆ ತಕ್ಕ ಉತ್ತರ ನೀಡಿದ್ದಾರೆ’ ಎಂದು ಹೇಳಿದರು.

ಅರಸೀಕೆರೆ ತಾಲ್ಲೂಕಿನ ಡಿ.ಎಂ. ಕುರ್ಕೆ ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ಸಂಯೋಜಿಸಲು ಉದ್ದೇಶಿಸಿರುವ ಎಚ್.ಎಲ್.ಬಿ. ತಾಂಡ್ಯ, ಮಾಡಾಳು, ಹರಳಕಟ್ಟೆ, ಯಾಚಗೊಂಡನಹಳ್ಳಿ, ಎಂ.ಜಿ. ಹಟ್ಟಿ, ಎಚ್.ವಿ. ಹಟ್ಟಿ ಹಾಗೂ ಗೊರೂರು ಭಾಗದ ಶಾಲೆಗಳ ಪೋಷಕರು, ಎಸ್ಡಿಎಂಸಿ ಮತ್ತು ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಸದಸ್ಯರು, ‘ಯಾವ ಕಾರಣಕ್ಕೂ ನಮ್ಮ ಮಕ್ಕಳನ್ನು ಕೆಪಿಎಸ್ ಮ್ಯಾಗ್ನೆಟ್ ಶಾಲೆಗೆ ಕಳುಹಿಸಲು ಒಪ್ಪುವುದಿಲ್ಲ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಪತ್ರ ಮೂಲಕ ಲಿಖಿತ ಮನವಿ ಸಲ್ಲಿಸಿದ್ದಾರೆ.

‘ನಾವು ಕೂಲಿ ಮಾಡುವವರು. ಪ್ರತಿದಿನ ನಮ್ಮ ಮಕ್ಕಳನ್ನು ದೂರದ ಹಳ್ಳಿಗಳಿಗೆ ಕಳುಹಿಸಲು ಸಾಧ್ಯವಿಲ್ಲ. ಹಾಗಾಗಿ ನಮ್ಮೂರಿನ ಶಾಲೆ ನಮ್ಮೂರಲ್ಲೇ ಉಳಿಯಬೇಕು’ ಎಂದು ಎಚ್.ಎಲ್.ಬಿ. ತಾಂಡ್ಯದ ಪೋಷಕರು ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.

‘ಈ ಮೂಲಕ ಹಾಸನದ ಪೋಷಕರು ರಾಜ್ಯದ ಜನತೆಗೆ ಐತಿಹಾಸಿಕ ನಮ್ಮೂರ ಶಾಲೆ ಉಳಿಸಿ ಆಂದೋಲನಕ್ಕೆ ಮಾದರಿಯಾಗಿದ್ದಾರೆ. ರಾಜ್ಯದ ಜನತೆ ಇದರಿಂದ ಸ್ಫೂರ್ತಿ ಪಡೆದು ಪ್ರತಿ ಹಳ್ಳಿಯಿಂದ ನಮ್ಮೂರ ಶಾಲೆ ಉಳಿಸಿ ಹಾಗೂ ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹಿಮ್ಮೆಟ್ಟಿಸಿ ಘೋಷಣೆಗಳೊಂದಿಗೆ ಮುನ್ನುಗ್ಗಬೇಕು ಎಂದು ಚೈತ್ರಾ ಸಲಹೆ ನೀಡಿದರು.

ಎಐಡಿಎಸ್ಒ ಜಿಲ್ಲಾ ಘಟಕದ ಕಾರ್ಯದರ್ಶಿ ಸುಷ್ಮಾ, ಸಾರ್ವಜನಿಕರಾದ ಶಾಂತಾ ಶೆಟ್ಟಿ, ಪುಟ್ಟರಾಜಪ್ಪ, ಎಚ್.ಆರ್.ರವಿಶಂಕರ್, ಧರ್ಮರಾಜು, ತಿಮ್ಮೇಗೌಡ, ತಮ್ಮಯ್ಯ, ವೆಂಕಟೇಶ್ ಬಿ.ಎನ್., ಎನ್. ಪುಟ್ಟಸ್ವಾಮಿಗೌಡ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260510-36-1047555213

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.