ಹಟ್ಟಿ ಚಿನ್ನದ ಗಣಿ: ಮದುವೆ ಸಮಾಭದಲ್ಲಿ ಬಂದ ಅತಿಥಿಗಳಿಗೆ ಹಟ್ಟಿ ಪಟ್ಟಣದ ನಿವಾಸಿ ಸುಲ್ತಾನ್ ಬಾಬು ಎಂಬ ಯುವಕ ತನ್ನ ವಿವಾಹ(ವಲೀಮಾ) ಕಾರ್ಯಕ್ರಮಕ್ಕೆ ಬಂದ ಅತಿಥಿಗಳಿಗೆ, ಗೆಳೆಯರಿಗೆ ಸಂವಿಧಾನ ಪೀಠಿಕೆ ನೀಡಿದ್ದಾರೆ.

ವೃತ್ತಿಯಲ್ಲಿ ಆಟೊ ಚಾಲಕನಾಗಿರುವ ಸುಲ್ತಾನ್ ಜತ್ತಿ ಕಾಲೊನಿಯಲ್ಲಿ ವಿವಾಹವಾಗಿದ್ದು ಬಂದ ಅತಿಥಿಗಳಿಗೆ ಬಿಳಿ ಶಾಲು, ಟೋಪಿ ಹಾಕುವ ಸಂಪ್ರದಾಯಕ್ಕೆ ಕಡಿವಾಣ ಹಾಕಿ ಸಂವಿಧಾನದ ಪೀಠಿಕೆ ನೀಡಿದ್ದಾರೆ.

‘ಹಟ್ಟಿ ಪಟ್ಟಣದಲ್ಲಿ ವಿವಿಧ ಭಾಗಗಳಿಂದ ಆಗಮಿಸಿದವರು ಚಿನ್ನದ ಗಣಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಎಲ್ಲಾ ಧರ್ಮ, ಜಾತಿಯ ಜನರು ಅನ್ಯೋನ್ಯವಾಗಿದ್ದು ಇದಕ್ಕೆ ಮೂಲ ನಮ್ಮ ಸಂವಿಧಾನ ಎಂದು ಆಗಾಗ ಭಾಷಣಗಳಲ್ಲಿ ಕೇಳಿ ಸಂವಿಧಾನದ ಕಡೆ ಆಕರ್ಷಣೆಗೊಂಡು ಈ ನಿರ್ಧಾರ ಕೈಗೊಂಡಿದ್ದೇನೆ’ ಎಂದು ಸುಲ್ತಾನ್ ತಿಳಿಸಿದ್ದಾರೆ.

‘ನನ್ನ ಮಾವ(ಅಕ್ಕನ ಪತಿ) ಲಾಲ್ ಪೀರ್ ಅವರು ಸಾಮಾಜಿಕ ಹೋರಾಟಗಳಲ್ಲಿ ಭಾಗವಹಿಸುತ್ತಾರೆ. ಅವರ ಸಲಹೆ ಮೇರೆಗೆ ಸಂವಿಧಾನ ಪೀಠಿಕೆ ಹಂಚಿದ್ದೇನೆ, ನಮ್ಮ ಸಂವಿಧಾನ ನಮ್ಮ ಹೆಮ್ಮೆಯಾಗಿದೆ’ ಎಂದರು.

ವಿವಾಹಕ್ಕೆ ಬಂದ ಅನೇಕ ಪ್ರಗತಿಪರ ಹೋರಾಟಗಾರರು, ದಲಿತಪರ ಸಂಘಟನೆಗಳ ಮುಖಂಡರು ವರನ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260428-32-1866404751

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.