ಸಂತೋಷ ಜಿಗಳಿಕೊಪ್ಪ

ಹಾವೇರಿ: ಜಿಲ್ಲೆಯಲ್ಲಿ ಹೊಸದಾಗಿ 18 ಕೆಪಿಎಸ್ (ಕರ್ನಾಟಕ ಪಬ್ಲಿಕ್ ಸ್ಕೂಲ್) ಆರಂಭಿಸಲು ತಯಾರಿ ನಡೆಸುತ್ತಿರುವ ಶಾಲಾ ಶಿಕ್ಷಣ ಇಲಾಖೆ, ಕೆಪಿಎಸ್ ಜೊತೆಯಲ್ಲಿ 64 ಸರ್ಕಾರಿ ಶಾಲೆಗಳನ್ನು ವಿಲೀನ ಮಾಡಲು ಪಟ್ಟಿ ಸಿದ್ಧಪಡಿಸಿದೆ.

ಇಲಾಖೆಯ ಶಾಲೆಗಳ ವಿಲೀನ ಕ್ರಮಕ್ಕೆ ಜಿಲ್ಲೆಯ ಹಲವು ಗ್ರಾಮಗಳಲ್ಲಿ ವಿರೋಧ ವ್ಯಕ್ತವಾಗುತ್ತಿದ್ದು, ಗ್ರಾಮಸ್ಥರು ರಸ್ತೆಗೆ ಇಳಿದು ಪ್ರತಿಭಟನೆ ನಡೆಸುತ್ತಿದ್ದಾರೆ.

ಗ್ರಾಮೀಣ ಭಾಗದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಕರ್ನಾಟಕ ಪಬ್ಲಿಕ್ ಸ್ಕೂಲ್ಗಳನ್ನು (ಕೆಪಿಎಸ್) ತೆರೆಯಲು ಮುಂದಾಗಿರುವ ರಾಜ್ಯ ಸರ್ಕಾರ, ಕೆಪಿಎಸ್ ಶಾಲೆ ವ್ಯಾಪ್ತಿಯ ಸುತ್ತಮುತ್ತಲಿನ ಸರ್ಕಾರಿ ಶಾಲೆಗಳನ್ನು ಆಡಳಿತಾತ್ಮಕವಾಗಿ ವಿಲೀನಗೊಳಿಸುವ ಪ್ರಕ್ರಿಯೆಗೆ ಈಗಾಗಲೇ ಚಾಲನೆ ನೀಡಿದೆ.

ಜಿಲ್ಲೆಯಲ್ಲಿಯೂ 18 ಕೆಪಿಎಸ್ ಶಾಲೆಗಳು ಆರಂಭವಾಗುತ್ತಿದ್ದು, ಈ ಶಾಲೆಗಳ ಸುತ್ತಮುತ್ತಲಿನ 0.5 ಕಿ.ಮೀ.ನಿಂದ 5 ಕಿ.ಮೀ ವರೆಗಿನ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಇಲಾಖೆಯ ಹಿರಿಯ ಅಧಿಕಾರಿಗಳು ಒಪ್ಪಿಗೆ ನೀಡುತ್ತಿದ್ದಂತೆ, ಶಾಲೆಗಳು ವಿಲೀನವಾಗಲಿವೆ.

5 ಕಿ.ಮೀ.ನಿಂದ 12 ಕಿ.ಮೀ. ದೂರದಲ್ಲಿರುವ ಸರ್ಕಾರಿ ಶಾಲೆಗಳನ್ನು, ಕೆಪಿಎಸ್ ಜೊತೆ ವಿಲೀನ ಮಾಡುವ ಬಗ್ಗೆಯೂ ಪ್ರಸ್ತಾಪಿಸಲಾಗಿದೆ. ಆದರೆ, ಹೆಚ್ಚು ದೂರವೆಂಬ ಕಾರಣಕ್ಕೆ ಈ ಶಾಲೆಗಳ ವಿಲೀನ ಪ್ರಕ್ರಿಯೆಯನ್ನು ಸದ್ಯಕ್ಕೆ ಸ್ಥಗಿತಗೊಳಿಸಲಾಗಿದೆ.

ಕೆಲವು ಕಡೆಗಳಲ್ಲಿ 12 ಕಿ.ಮೀ. ದೂರವಿರುವ ಶಾಲೆಗಳನ್ನು ವಿಲೀನ ಮಾಡಲು ಒಪ್ಪಿಗೆ ಸಿಕ್ಕಿರುವುದು, ವಿಲೀನ ಪ್ರಕ್ರಿಯೆ ನಿಯಮಗಳ ಬಗ್ಗೆಯೇ ಅನುಮಾನ ಬರುತ್ತಿದೆ. ಇದರ ವಿರುದ್ಧವೂ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.

‘ಹಿರಿಯ ಅಧಿಕಾರಿಗಳ ನಿರ್ದೇಶನದಂತೆ, ಕೆಪಿಎಸ್ ಶಾಲೆಗಳ ಜೊತೆಯಲ್ಲಿ ವಿಲೀನ ಮಾಡಬಹುದಾದ ಸರ್ಕಾರಿ ಶಾಲೆಗಳ ಪಟ್ಟಿಯನ್ನು ಸಿದ್ಧಪಡಿಸಿ ಸಲ್ಲಿಸಲಾಗಿದೆ. ಅಧಿಕಾರಿಗಳು ಪರಿಶೀಲನೆ ನಡೆಸಿ, ಪಟ್ಟಿಗೆ ಒಪ್ಪಿಗೆ ನೀಡಿದ ನಂತರವೇಶಾಲೆಗಳು ಆಡಳಿತಾತ್ಮಕವಾಗಿ ವಿಲೀನವಾಗಲಿವೆ’ ಎಂದು ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮೋಹನ ದಂಡಿನ ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಾಲೆಗಳ ವಿಲೀನವೆಂದರೆ, ಒಂದು ಶಾಲೆಯನ್ನು ಮುಚ್ಚಿ ಮತ್ತೊಂದು ಶಾಲೆ ತೆರೆಯುವುದಲ್ಲ. ಕೇವಲ ಆಡಳಿತಾತ್ಮಕ ಕೆಲಸಗಳು ಮಾತ್ರ ವಿಲೀನವಾಗುತ್ತವೆ. ಇದರಿಂದಾಗಿ ಹಳ್ಳಿಯ ಮಕ್ಕಳಿಗೂ ಗುಣಮಟ್ಟದ ಶಿಕ್ಷಣ ಸಿಗಲಿದೆ’ ಎಂದರು.

ಕನ್ನಡ ಶಾಲೆಗಳ ಅವನತಿ: ಕೆಪಿಎಸ್ ಶಾಲೆಗಳ ಜೊತೆಗೆ, ಸುತ್ತಮುತ್ತಲಿನ ಗ್ರಾಮಗಳ ಶಾಲೆಗಳನ್ನು ವಿಲೀನ ಮಾಡುತ್ತಿರುವುದು ಕೆಲ ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ‘ವಿಲೀನ ಮಾಡಿದರೆ, ಸರ್ಕಾರಿ ಶಾಲೆಗಳು ಬಾಗಿಲುಮುಚ್ಚಲಿವೆ. ಇದರಿಂದ ಕನ್ನಡ ಶಾಲೆಗಳ ಅವನತಿ ಆಗಲಿದೆ’ ಎಂದು ದೂರುತ್ತಿದ್ದಾರೆ.

ಶಿಗ್ಗಾವಿ ತಾಲ್ಲೂಕಿನ ಸೂರಪಗಟ್ಟಿ ಗ್ರಾಮದಲ್ಲಿ ಇತ್ತೀಚೆಗೆ ಪ್ರತಿಭಟನೆ ನಡೆಸಿದ್ದ ಗ್ರಾಮಸ್ಥರು, ‘ತಮ್ಮೂರಿನ ಶಾಲೆಗಳನ್ನು ಕೋಣನಕೇರಿಯ ಕೆಪಿಎಸ್ ಜೊತೆಗೆ ವಿಲೀನ ಮಾಡಬಾರದು’ ಎಂದು ಆಗ್ರಹಿಸಿದರು. ಅವರಷ್ಟೆ ಅಲ್ಲದೇ, ಹಲವು ಗ್ರಾಮಗಳ ಜನರು ತಮ್ಮ ಶಾಲೆಗಳನ್ನು ವಿಲೀನ ಮಾಡದಂತೆ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸುತ್ತಿದ್ದಾರೆ.

‘ಹಿರೇಬೆಂಡಿಗೇರಿ ಮ್ಯಾಗ್ನೆಟ್ ಶಾಲೆಗೆ ಬೆಳವಲಕೊಪ್ಪ, ಸುರುಪಗಟ್ಟಿ, ಬಳಗಲಿ, ಚಿಕ್ಕಬೆಂಡಿಗೇರಿ ಕನ್ನಡ, ಚಿಕ್ಕಬೆಂಡಿಗೇರಿ ಉರ್ದು, ಹಿರೇಬೆಂಡಿಗೇರಿ ಪ್ಲಾಟ್ ಸೇರಿ ಆರು ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಲಾಗುತ್ತಿದೆ. ಕೋಣನಕೇರಿ ಮ್ಯಾಗ್ನೆಟ್ ಶಾಲೆಗೆ ಭದ್ರಾಪುರ, ಮುಳ್ಕೇರಿ ಮತ್ತು ಶ್ಯಾಬಳ ಸರ್ಕಾರಿ ಶಾಲೆಗಳನ್ನು ವಿಲೀನ ಮಾಡಲಾಗುತ್ತಿದೆ’ ಎಂದು ಸೂರಪಗಟ್ಟಿ ಗ್ರಾಮಸ್ಥರು ಮಾಹಿತಿ ನೀಡಿದರು.

‘ಶಾಲೆಗಳನ್ನು ವಿಲೀನ ಮಾಡಿದರೆ, ಎಲ್ಲ ವಿದ್ಯಾರ್ಥಿಗಳು ಕೆಪಿಎಸ್ ಶಾಲೆಗೆ ಹೋಗುತ್ತಾರೆ. ಹಳ್ಳಿಯಲ್ಲಿರುವ ಶಾಲೆಗಳು ವಿದ್ಯಾರ್ಥಿಗಳ ಕೊರತೆಯಿಂದ ಬಾಗಿಲು ಮುಚ್ಚಬೇಕಾಗುತ್ತದೆ. ಇದರಿಂದ ಕನ್ನಡ ಶಾಲೆಗಳು ಒಂದೊಂದಾಗಿ ಬಾಗಿಲು ಮುಚ್ಚತ್ತವೆ’ ಎಂದು ಅಳಲು ತೋಡಿಕೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260405-22-20651336

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.