ಹಾವೇರಿ: ‘ಬಣಜಿಗ ಸಮುದಾಯವು ಬಸವಣ್ಣನವರು ಹಾಗೂ ಶಿವಶರಣರ ಆಚಾರ, ವಿಚಾರ, ತತ್ವಗಳ ಪಾಲಕರಾಗಿದ್ದಾರೆ’ ಎಂದು ಹಾವೇರಿ ಹುಕ್ಕೇರಿ ಮಠದ ಸದಾಶಿವ ಸ್ವಾಮೀಜಿ ಹೇಳಿದರು.

ನಗರದ ರಜನಿ ಸಭಾಂಗಣದಲ್ಲಿ ‘ಹಾವೇರಿ ಬಣಜಿಗ ಶಹರ ಘಟಕ’ದಿಂದ ಭಾನುವಾರ ಆಯೋಜಿಸಿದ್ದ ‘ಪ್ರತಿಭಾ ಪುರಸ್ಕಾರ ಹಾಗೂ ಮಹಿಳಾ ಘಟಕದ ಉದ್ಘಾಟನಾ ಸಮಾರಂಭ’ದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ಸಮುದಾಯದ ಅನೇಕ ಮಹಾನ್ ವ್ಯಕ್ತಿಗಳು ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಕ್ಷೇತ್ರಗಳಿಗೆ ವಿಶಿಷ್ಟ ಕೊಡುಗೆ ನೀಡಿ ಸ್ಮರಣೀಯರಾಗಿದ್ದಾರೆ. ಇಂದು ಪ್ರತಿಭಾನ್ವಿತ ವಿದ್ಯಾರ್ಥಿ ಸಮೂಹವನ್ನು ಗುರುತಿಸಿ ಪುರಸ್ಕರಿಸಿ ಪ್ರೋತ್ಸಾಹಿಸುತ್ತಿರುವುದು ಶ್ಲಾಘನೀಯ’ ಎಂದರು.

ಸಂಘದ ಉಪಾಧ್ಯಕ್ಷ ಕೆ.ಸಿ. ಪಾವಲಿ, ರಾಣೆಬೆನ್ನೂರು ಮಹಿಳಾ ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಜಿ.ವಿ. ಕೋರಿ ಮಾತನಾಡಿದರು.

ಕಾರ್ಯಾಧ್ಯಕ್ಷ ಅಜಿತ್ ಮಾಗಾವಿ ಅವರು, ‘ಸಂಘದಿಂದ ಶೈಕ್ಷಣಿಕ, ಔಧ್ಯಮಿಕ ಕ್ಷೇತ್ರದಲ್ಲಿನ ಸಾಧಕ ಪರಿಣತರನ್ನು ಕರೆಸಿ ಅವರಿಂದ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಲಾಗುವುದು. ಬಸವಾದಿ ಶಿವಶರಣರ ತತ್ವಗಳು ಅತ್ಯಮೂಲ್ಯವಾಗಿದ್ದು, ಅವುಗಳನ್ನು ಜನಮಾನಸಕ್ಕೆ ಬಿತ್ತುವ ನಿಟ್ಟಿನಲ್ಲಿ ಹಾವೇರಿ ನಗರದಲ್ಲಿ ಬಸವ ಧ್ಯಾನ ಮಂದಿರ ನಿರ್ಮಿಸಲು ಯೋಚಿಸಲಾಗಿದೆ’ ಎಂದರು.

2025– 26ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ 90ಕ್ಕಿಂತ ಹೆಚ್ಚು ಅಂಕ ಪಡೆದ ಸಮುದಾಯದ ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು.

ಶಿವಕುಮಾರ ಮುದುಗಲ್, ಮಲ್ಲಿಕಾರ್ಜುನ ಹಿಂಚಿಗೇರಿ, ಬಸವರಾಜ ಕೋರಿ, ಕಿರಣ ಕೊಳ್ಳಿ, ಪ್ರಭುಗೌಡ ಬಸನಗೌಡ, ಗಿರೀಶ ಶೆಟ್ಟರ, ಶಿವಣ್ಣ ಶೆಟ್ಟರ, ಶಿವಲಿಂಗಪ್ಪ ಗುಂಜಟ್ಟಿ, ಪ್ರಭು ಬೆನ್ನೂರ, ದಯಾನಂದ ಯಡ್ರಾಮಿ, ನಿರಂಜನ ತಾಂಡೂರ, ವಿ.ಜಿ. ಎಳಗೇರಿ, ಕುಮಾರ ಹತ್ತಿ, ಸಂತೋಷ ಮಾಗಾವಿ, ಮಂತಣ್ಣ ಮಾಸೂರ, ಮಹೇಶ ಚಿನ್ನಿಕಟ್ಟಿ, ಸಂತೋಷ ಮಾಸೂರ, ರಾಜಣ್ಣ ಮಾಗನೂರ, ಚಂದ್ರಶೇಖರ ತುರಕಾಣಿ, ಬಸವರಾಜ ಯಳವತ್ತಿ, ಗಂಗಾಧರ ಮಳಗಿ, ವಿಜಯ ಕುಮಾರ ಕೂಡ್ಲಪ್ಪನವರ, ಪ್ರಕಾಶ ಹಂದ್ರಾಳ, ನಾಗರಾಜ ವಿಭೂತಿ, ಬಸವರಾಜ ಬೆಲ್ಲದ, ಲೀಲಾವತಿ ಮಾಗಾವಿ, ಲಲಿತಾ ಹೊರಡಿ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260602-22-933265760

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.