ಹಾವೇರಿ: ‘ನಮ್ಮ ತಂದೆ ಗೌಂಡಿ (ಕಟ್ಟಡ ನಿರ್ಮಾಣ ಕಾರ್ಮಿಕ) ಕೆಲಸ ಮಾಡುತ್ತಾರೆ. ಅವರ ಕೆಲಸದಿಂದಲೇ ನಾನು ಹಾಗೂ ನನ್ನ ತಮ್ಮ ಎಂ.ಎ. ಓದುತ್ತಿದ್ದೇವೆ. ಇಂದು ನನಗೆ ಸಂದಿರುವ ಚಿನ್ನದ ಪದಕ, ನನ್ನ ತಂದೆಯ ಶ್ರಮದ ಫಲ’...

ನಗರದ ಜಿ.ಎಚ್. ಕಾಲೇಜಿನ ಸಭಾಂಗಣದಲ್ಲಿ ಸೋಮವಾರ ನಡೆದ ಹಾವೇರಿ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವದಲ್ಲಿ ಎಂ.ಎ. ಅರ್ಥಶಾಸ್ತ್ರ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಸವಣೂರು ತಾಲ್ಲೂಕಿನ ಹುರುಳಿಕುಪ್ಪಿ ಗ್ರಾಮದ ಉಸ್ಮಾನ್ಸಾಬ್ ಮುಲ್ಲಾ ಅವರ ಮಾತಿದು.

ಶೈಕ್ಷಣಿಕ ವರ್ಷದಲ್ಲಿ ಉತ್ತಮ ಸಾಧನೆ ಮಾಡಿದ ಉಸ್ಮಾನ್ಸಾಬ್ ಮುಲ್ಲಾ ಸೇರಿ ಏಳು ವಿದ್ಯಾರ್ಥಿಗಳಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಘಟಿಕೋತ್ಸವದಲ್ಲಿ ಎಂಟು ಚಿನ್ನದ ಪದಕ ಪ್ರದಾನ ಮಾಡಿದರು.

‘ಎಷ್ಟೇ ಕಷ್ಟವಿದ್ದರೂ ತಂದೆ ಇಮಾಮ್ಜಾಫರ್ ಮತ್ತು ತಾಯಿ ಶಮೀನ್ಬಾನು ಅವರು ನಮ್ಮನ್ನು ಕೆಲಸಕ್ಕೆ ಕಳುಹಿಸಲಿಲ್ಲ. ಬಾಲ್ಯದಿಂದಲೇ ಕಲಿಕೆಗೆ ಪ್ರೋತ್ಸಾಹ ನೀಡಿದರು. ಕೆ–ಸೆಟ್ ಪರೀಕ್ಷೆ ಉತ್ತೀರ್ಣಗೊಂಡಿರುವೆ. ಪಿಎಚ್.ಡಿ ಪೂರ್ಣಗೊಳಿಸಿ, ಪ್ರಾಧ್ಯಾಪಕನಾಗುವ ಆಸೆಯಿದೆ’ ಎಂದು ಉಸ್ಮಾನ್ಸಾಬ್ ಮುಲ್ಲಾ ‘ಪ್ರಜಾವಾಣಿ’ಗೆ ಹೇಳಿದರು.

ಬಾಲ್ಯದಲ್ಲೇ ತಂದೆ–ತಾಯಿ ಕಳೆದುಕೊಂಡರು: ವಿಶ್ವವಿದ್ಯಾಲಯಕ್ಕೆ ಅಗ್ರಸ್ಥಾನ ಪಡೆದುಕೊಂಡಿರುವ ಎಂ.ಎ. ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ನೇತ್ರಾ ಹರಿಜನ, ಎರಡು ಚಿನ್ನದ ಪದಕಗಳನ್ನು ಪಡೆದಿದ್ದಾರೆ.

ಡೊಳ್ಳೇಶ್ವರ ಗ್ರಾಮದ ನೇತ್ರಾ ಅವರು ತಂದೆ ನೀಲಪ್ಪ ಹಾಗೂ ತಾಯಿ ಚನ್ನವ್ವ ಅವರನ್ನು ಬಾಲ್ಯದಲ್ಲೇ ಕಳೆದುಕೊಂಡಿದ್ದಾರೆ. ಸಂಬಂಧಿಕರ ಆಶ್ರಯದಲ್ಲಿ ಬೆಳೆಯುತ್ತಲೇ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಅವರ ಕಲಿಕೆಗೆ ಪತಿ ಅಭಿಷೇಕ ಓಲೇಕಾರ ಅವರ ಸಹಕಾರವಿದೆ.

‘ರಾಜ್ಯಪಾಲರಿಂದ ಚಿನ್ನದ ಪದಕ ಪಡೆದಿರುವುದಕ್ಕೆ ಖುಷಿಯಾಯಿತು. ಜೀವನದಲ್ಲಿ ಎಷ್ಟೇ ಕಷ್ಟವಿದ್ದರೂ ಕಲಿಕೆಯಲ್ಲಿ ನಿರಾಸಕ್ತಿ ಇರಬಾರದು. ಓದಿನಲ್ಲಿ ಆಸಕ್ತಿ ತೋರಿಸಿದರೆ, ನನ್ನಂತೆ ಚಿನ್ನದ ಪದಕ ಪಡೆಯಬಹುದು. ಈಗ ನಾನು ಪಿಎಚ್.ಡಿ ಮಾಡುತ್ತಿದ್ದೇನೆ’ ಎಂದು ನೇತ್ರಾ ತಿಳಿಸಿದರು.

ಎಂ.ಎ. ಇಂಗ್ಲಿಷ್ ವಿಭಾಗದಲ್ಲಿ ಕಾವ್ಯಾ ಪ್ರಸಾದಿಮಠ, ಎಂ.ಎ. ಕನ್ನಡದಲ್ಲಿ ಪ್ರಿಯಾಂಕಾ ಈಳಗೇರ, ಎಂ.ಕಾಂ.ನಲ್ಲಿ ಐಶ್ವರ್ಯ ಮುದಿಗೌಡರ, ಎಂ.ಎ. ಸಮಾಜ ಕಾರ್ಯ ವಿಭಾಗದಲ್ಲಿ ಧನಲಕ್ಷ್ಮಿ ಗಂಗಾಧರ ಪಾಟೀಲ ಹಾಗೂ ಬಿ.ಎಡ್.ನಲ್ಲಿ ನಾಗಲಕ್ಷ್ಮಿ ಬೇವಿನಮರದ ಅವರು ಚಿನ್ನದ ಪದಕ ಪಡೆದಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260407-22-895139989

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.