ಹಾವೇರಿ: ‘ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿಯಲ್ಲಿರುವ ಜಾನಪದ ವಿಶ್ವವಿದ್ಯಾಲಯದಲ್ಲಿ ಸಾಕಷ್ಟು ಭ್ರಷ್ಟಾಚಾರ ಹಾಗೂ ಅಕ್ರಮಗಳು ನಡೆಯುತ್ತಿವೆ. ಈ ಬಗ್ಗೆ ಹಲವು ಸಮಿತಿಗಳು ತನಿಖೆ ಮಾಡಿದ್ದು, ಅದರ ವರದಿಯನ್ನು ಬಹಿರಂಗಪಡಿಸಬೇಕೆಂದು ಆಗ್ರಹಿಸಿ ಕರಾಳ ದಿನ ಆಚರಿಸಲಾಗುತ್ತಿದೆ’ ಎಂದು ರಾಜ್ಯ ಜಾನಪದ ಸ್ನಾತಕೋತ್ತರ ಹಾಗೂ ಸಂಶೋಧಕರ ಒಕ್ಕೂಟದ ಅಧ್ಯಕ್ಷ ಶಿವಸೋಮಣ್ಣ ನಿಟ್ಟೂರು ಹೇಳಿದರು.

ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಾನಪದ ವಿವಿಯ ಅಕ್ರಮಗಳನ್ನು ಖಂಡಿಸಿ ಸ್ವತಃ ಸಿಂಡಿಕೇಟ್ ಸದಸ್ಯರು ತನಿಖೆಗೆ ಆಗ್ರಹಿಸುತ್ತಿದ್ದಾರೆ. ಹೀಗಾಗಿಯೇ, ಸಿಂಡಿಕೇಟ್ ಸದಸ್ಯರೆಲ್ಲರೂ ಮೇ 22ರಂದು ಕರೆದಿದ್ದ ಸಭೆಯನ್ನು ಬಹಿಷ್ಕರಿಸಿ ಆಕ್ರೋಶ ಹೊರಹಾಕಿದ್ದಾರೆ’ ಎಂದರು.

‘ಸರ್ಕಾರದ ಆದೇಶಗಳನ್ನು ಉಲ್ಲಂಘಿಸಿ ನೇಮಕಾತಿ ಮಾಡಿಕೊಳ್ಳಲಾಗಿದೆ. ನಕಲಿ ಅಂಕಪಟ್ಟಿ ನೀಡಿ ಸಹಾಯಕ ಕುಲಸಚಿವ ಸೇರಿ ಹಲವರನ್ನು ನೇಮಕ ಮಾಡಲಾಗಿದೆ. ಈ ಎಲ್ಲ ಅಕ್ರಮಗಳ ಬಗ್ಗೆ 2023ರಿಂದ ಹೋರಾಟ ಮಾಡುತ್ತಿದ್ದೇವೆ. ಈಗ ಮೂರನೇ ವರ್ಷದಂದು ಕರಾಳ ದಿನ ಆಚರಿಸಲಾಗುತ್ತಿದೆ. ಆದರೆ, ನಮ್ಮ ದೂರಿಗೆ ಸರ್ಕಾರ ಸ್ಪಂದಿಸುತ್ತಿಲ್ಲ’ ಎಂದು ಹೇಳಿದರು.

ಸಚಿವರ ಕೃಪಾಕಟಾಕ್ಷ: ‘ಜಾನಪದ ವಿವಿಯಲ್ಲಿ ನಡೆದಿರುವ ಅಕ್ರಮಗಳ ಬಗ್ಗೆ ತನಿಖೆ ಮಾಡಲು ಜಾನಕಿ ಹಾಗೂ ನಿರಂಜನ ಸಮಿತಿಗಳನ್ನು ರಚಿಸಲಾಗಿದೆ. ಈ ಸಮಿತಿಗಳು, ತನಿಖೆ ಮಾಡಿ ಇಲಾಖೆಗೂ ವರದಿ ನೀಡಿವೆ. ಆದರೆ, ವರದಿಯನ್ನು ಬಹಿರಂಗಪಡಿಸುತ್ತಿಲ್ಲ. ಅಕ್ರಮ ಎಸಗಿದವರಿಗೆ ಸಚಿವ ಎಚ್.ಕೆ. ಪಾಟೀಲ ಕೃಪಾಕಟಾಕ್ಷವಿದೆ’ ಎಂದು ಶಿವಸೋಮಣ್ಣ ದೂರಿದರು.

‘ಜಾನಪದ ವಿವಿ ಉಳಿಸಲು ನಿರಂತರವಾಗಿ ಹೋರಾಟ ಮಾಡುತ್ತಿದ್ದೇವೆ. ಉನ್ನತ ಶಿಕ್ಷಣ ಸಚಿವರನ್ನು ಭೇಟಿಯಾದಾಗಲೂ, ಅವರು ಎಚ್.ಕೆ. ಪಾಟೀಲ ಭೇಟಿಯಾಗುವಂತೆ ಹೇಳಿದ್ದರು. ಶಾಸಕ ರುದ್ರಪ್ಪ ಲಮಾಣಿ, ಮುಖಂಡ ನೆಹರೂ ಓಲೇಕಾರ ಅವರಿಗೂ ಜಾನಪದ ವಿವಿ ಬಗ್ಗೆ ಮಾತನಾಡದಂತೆ ಎಚ್.ಕೆ. ಪಾಟೀಲರು ಹೇಳಿರುವುದು ಜಗಜ್ಜಾಹೀರ. ಇದೇ ಜುಲೈ 19ರಂದು ಕುಲಪತಿ ಟಿ.ಎಂ. ಭಾಸ್ಕರ್ ಅವರ ಅಧಿಕಾರದ ಅವಧಿ ಮುಗಿಯಲಿದೆ. ಅಷ್ಟರೊಳಗೆ ವಿವಿಯಲ್ಲಾದ ಅಕ್ರಮಗಳನ್ನು ಬಹಿರಂಗಪಡಿಸಬೇಕು’ ಎಂದು ಅವರು ಆಗ್ರಹಿಸಿದರು.

ಒಕ್ಕೂಟದ ಉಪಾಧ್ಯಕ್ಷ ಎಸ್. ನಾಗರಾಜ ಮಾತನಾಡಿ, ‘ಜಾನಪದ ವಿವಿ ಅಕ್ರಮದ ಬಗ್ಗೆ ಸಿಂಡಿಕೇಟ್ ಸದಸ್ಯರು ನೊಂದುಕೊಂಡಿದ್ದಾರೆ. ವಿವಿ ಉಳಿಸಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಅವರ ಮಾತಿಗೆ ವಿವಿ ಕುಲಪತಿ ಗೌರವ ನೀಡುತ್ತಿಲ್ಲ’ ಎಂದು ದೂರಿದರು.

‘ಸಿಂಡಿಕೇಟ್ ಸಭೆ ಬಹಿಷ್ಕರಿಸಿರುವ ಸದಸ್ಯರು, ಕುಲಸಚಿವರಿಗೆ ಇತ್ತೀಚೆಗೆ ಪತ್ರ ಬರೆದಿದ್ದಾರೆ. ‘ಸಭೆಯ ನಡಾವಳಿಗಳನ್ನು ಕುಲಪತಿಯವರು ಪಾಲಿಸುತ್ತಿಲ್ಲ. ಸಭೆಯ ಸೂಚನೆಗಳನ್ನು ಜಾರಿಗೆ ತರುತ್ತಿಲ್ಲ. ಸದಸ್ಯ ಮೋಹನಕುಮಾರ ಅವರ ಮೇಲೆ ಹಲ್ಲೆ ಮಾಡಿದ ನೌಕರರಿಗೆ ಕನಿಷ್ಠ ನೋಟಿಸ್ ಸಹ ನೀಡಿಲ್ಲ. ಸಿಂಡಿಕೇಟ್ ಸದಸ್ಯರ ಮಾತಿಗೂ ವಿವಿಯಲ್ಲಿ ಬೆಲೆ ಇಲ್ಲ. ಹೀಗಾಗಿ, ಸಭೆಯಲ್ಲಿ ಪಾಲ್ಗೊಳ್ಳುವುದಿಲ್ಲ’ ಎಂದು ಸಿಂಡಿಕೇಟ್ ಸದಸ್ಯರು ದೂರಿದ್ದಾರೆ’ ಎಂದರು.

ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಬಸವರಾಜ ದುಗಾಣಿ, ಬಸವರಾಜ ಗೊಬ್ಬಿ ಪತ್ರಿಕಾಗೋಷ್ಠಿಯಲ್ಲಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260530-22-1279976286

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.