ಸವಣೂರು (ಹಾವೇರಿ): ‘ಕನ್ನಡಿಗರು ಕೇವಲ ಕನ್ನಡ ಮಾತನಾಡಿದರಷ್ಟೇ ಸಾಲದು. ಕನ್ನಡದ ನೆಲ, ಜಲ, ಸಂಸ್ಕೃತಿ, ಪರಂಪರೆ ಹಾಗೂ ಭಾಷೆಯ ಉಳಿವು–ಬೆಳವಣಿಗೆಗಾಗಿ ಸದಾ ಜಾಗೃತರಾಗಿರಬೇಕು’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಎಫ್. ಬಾರ್ಕಿ ಹೇಳಿದರು.

ಪಟ್ಟಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಘಟಕದಿಂದ ಇತ್ತೀಚೆಗೆ ಆಯೋಜಿಸಿದ್ದ ‘ಕಸಾಪ 112ನೇ ಸಂಸ್ಥಾಪನಾ ದಿನಾಚರಣೆ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಭಾಷೆಯ ಮೇಲಿನ ಅಭಿಮಾನವೇ ಒಂದು ಜನಾಂಗದ ಅಸ್ತಿತ್ವವನ್ನು ಉಳಿಸುವ ಶಕ್ತಿಯಾಗಿದೆ. ಕನ್ನಡದ ಘನತೆ, ಇತಿಹಾಸ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ತರ ಕಾರ್ಯವನ್ನು ಪ್ರತಿಯೊಬ್ಬ ಕನ್ನಡಿಗರು ಕರ್ತವ್ಯವಾಗಿ ಮಾಡಬೇಕು’ ಎಂದರು.

‘ಭಾಷೆ ಎಂಬುದು ಕೇವಲ ಸಂವಹನದ ಮಾಧ್ಯಮವಲ್ಲ. ಅದು ನಮ್ಮ ಸಂಸ್ಕೃತಿ, ಸಂವೇದನೆ, ಇತಿಹಾಸ ಮತ್ತು ಅಸ್ತಿತ್ವದ ಪ್ರತೀಕವಾಗಿದೆ. ಕನ್ನಡದ ಬಳಕೆ, ಬೆಳವಣಿಗೆ ಮತ್ತು ಉಳಿವಿಗಾಗಿ ಪ್ರತಿಯೊಬ್ಬರೂ ತಮ್ಮ ಕ್ಷೇತ್ರದಲ್ಲಿ ಕೈಜೋಡಿಸಬೇಕು. ಇಂದಿನ ತಂತ್ರಜ್ಞಾನ ಯುಗದಲ್ಲೂ ಕನ್ನಡ ತನ್ನ ವೈಭವ ಕಳೆದುಕೊಳ್ಳದೇ ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುತ್ತಿರುವುದು ಹೆಮ್ಮೆಯ ಸಂಗತಿ’ ಎಂದದರು.

ಜಾಫರ್ ಉಲ್ಲಾಖಾನ್ ಕೆ.ಕೆ. ಅವರು ಉಪನ್ಯಾಸ ನೀಡಿದರು. ತಾಲ್ಲೂಕು ಘಟಕದ ಅಧ್ಯಕ್ಷ ಚಂದ್ರಗೌಡ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

ಎಸ್ಎಸ್ಎಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತೀ ಹೆಚ್ಚು ಅಂಕ ಪಡೆದ ತವರಮಳ್ಳಿಹಳ್ಳಿ ಪ್ರೌಢಶಾಲೆಯ ನವೀನ್ ಕುಮಾರ್ ಪ್ರಕಾಶ್ ಬಾರ್ಕಿ, ಕುಣಿಮಳ್ಳಿಹಳ್ಳಿ ಪ್ರೌಢಶಾಲೆಯ ಯಲ್ಲಪ್ಪ ಜಗದೀಶ್ ಆಡೂರ, ಮಂತ್ರೋಡಿ ಪ್ರೌಢಶಾಲೆಯ ಐಶ್ವರ್ಯ ಜಯಪ್ರಕಾಶ್ ಗಾಡಗೋಳಿ, ಜಲ್ಲಾಪುರ ಪ್ರೌಢಶಾಲೆಯ ತನುಜಾ ರಾಜು ಕುಮರಿ ಅವರನ್ನು ಸನ್ಮಾನಿಸಿ ಪ್ರೋತ್ಸಾಹಿಸಲಾಯಿತು.

ಪ್ರಭು ಅರಗೋಳ, ವೀರೇಶ ಹಿತ್ತಲಮನಿ, ಬಸವರಾಜ ಕಟಗಿಹಳ್ಳಿ, ಆರ್.ಎನ್. ತುಂಡೂರ, ಈರಯ್ಯ ಹಿರೇಮಠ, ಎಂ.ಎಸ್. ಅಕ್ಕಿ, ವಿಶ್ವನಾಥ ಹಾವಣಗಿ, ಬಸನಗೌಡ ಪಾಟೀಲ, ಮಹಾಂತೇಶ ಕುತನಿ, ಎಚ್.ಎನ್. ಭಜಂತ್ರಿ, ರಾಜು ಕುಮರಿ, ಎಸ್.ವಿ. ಕೋಳಿವಾಡ, ಸಿ.ವಿ. ಗುತ್ತಲ, ಎಂ.ಎಸ್. ಮಲ್ಲನಗೌಡ್ರ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-22-2082693424

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.