ಹಾವೇರಿ: ‘ಮನಸ್ಸು ಹೆಚ್ಚು ಚಾಂಚಲ್ಯದಿಂದ ಕೂಡಿರುತ್ತದೆ. ಅಂಥ ಮನಸ್ಸಿನ ಚಾಂಚಲ್ಯವನ್ನು ಹಿಡಿತದಲ್ಲಿ ತರಲು ಪುಸ್ತಕಗಳು ಬೇಕು. ಶಾಂತವಾಗಿ ಗ್ರಂಥಾಲಯದಲ್ಲಿ ಕುಳಿತು ಓದಿದಾಗ ಮನಸ್ಸು ಕೇಂದ್ರೀಕೃತವಾಗುತ್ತದೆ. ದಿನವು ಒಂದು ತಾಸು ಪುಸ್ತಕ ಓದಿದರೆ, ಎಲ್ಲರೂ ಸಮಾಧಾನಿಯಾಗಿರಬಹುದು’ ಎಂದು ಲೇಖಕಿ ಸುರೇಖಾ ದತ್ತಾತ್ರೇಯ ಕುಲಕರ್ಣಿ ಹೇಳಿದರು.

ನಗರದ ಬಜಾರ್ ರಸ್ತೆಯಲ್ಲಿರುವ ಕಲಾವಿದ ಸುಗಂಧಿ ಅವರ ವಸ್ತ್ರ ಸಂಗ್ರಹಾಲಯದಲ್ಲಿ ಪುಸ್ತಕ ಪ್ರಾಧಿಕಾರ, ಮನೆಗೊಂದು ಗ್ರಂಥಾಲಯ ಜಿಲ್ಲಾ ಜಾಗೃತಿ ಸಮಿತಿ ಆಶ್ರಯದಲ್ಲಿ ‘ಮನೆಗೊಂದು ಗ್ರಂಥಾಲಯ’ ಅನುಷ್ಠಾನ ಕಾರ್ಯಕ್ರಮದಲ್ಲಿ ಮಾತನಾಡಿದರು.

ನಿವೃತ್ತ ಶಿಕ್ಷಕ ರಾಮಚಂದ್ರ ದೇಸಾಯಿ ಮಾತನಾಡಿ, ‘1919ರಲ್ಲಿ ಅ.ನ. ಕುಂದಾಪೂರ ಅವರು ಹಾನಗಲ್ ತಾಲ್ಲೂಕಿನಲ್ಲಿ ಗ್ರಂಥಾಲಯ ಚಳವಳಿ ಆರಂಭಿಸಿದ್ದರು. ಅವರಿಗೆ ಪ್ರೇರಣೆಯಾದದ್ದು, ಗಳಗನಾಥರ ಕಾದಂಬರಿಗಳು. ಪುಸ್ತಕ ಆಂದೋಲನ ಬಂದಾಗ ಗಳಗನಾಥರ ಹೆಸರು ಬರಲೇಬೇಕು’ ಎಂದರು.

ವಕೀಲ ಮಧುಲಿಕಾ ದೇಸಾಯಿ ಮಾತನಾಡಿ, ‘ಕಾರಂತರ ಕಾದಂಬರಿ ಓದುವುದರಿಂದಲೇ ಮರಾಠಿ ನೆಲದಿಂದ ಬಂದ ನನಗೆ, ಕರಾವಳಿಯ ಪರಿಚಯವಾಯಿತು. ಪುಸ್ತಕಗಳು ಮನೆ ಮಕ್ಕಳಿಗೆ ದಾರಿ ದೀಪಗಳು’ ಎಂದರು.

ಕಾರ್ಯಕ್ರಮದಲ್ಲಿ ಸುಗಂಧಿ ಅವರಿಗೆ 50 ಪುಸ್ತಕಗಳನ್ನು ಗ್ರಂಥಾಲಯಕ್ಕೆ ನೀಡಿ ಸನ್ಮಾನಿಸಲಾಯಿತು. ಪ್ರತಿಯಾಗಿ ರಾಮಕೃಷ್ಣ ಸುಗಂಧಿ ಅವರು 100 ಪುಸ್ತಕಗಳನ್ನು ಜಾಗೃತಿ ಸಮಿತಿಗೆ ನೀಡಿದರು.

ಕವಿ ಸತೀಶ ಕುಲಕರ್ಣಿ, ರಾಜು ಕಾಳೆ, ರಾಧಿಕಾ ದೇಸಾಯಿ, ಎಚ್. ಸುಧಾ, ಶಕುಂತಲಾ ಕನವಳ್ಳಿ, ದಿನೇಶ ಕುಲಕರ್ಣಿ, ನರಸಿಂಹ ಕೋಮಾರ, ಆರ್.ಸಿ. ದೇಸಾಯಿ, ಪ್ರಹ್ಲಾದ ಸಾಂಬ್ರಾಣಿ, ಗಜಾನನ ಧೊಂಗಡಿ, ಎಸ್.ಆರ್. ಹಿರೇಮಠ, ಲಿಂಗಯ್ಯ ಹಿರೇಮಠ ಹಾಗೂ ಇತರರು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260528-22-649398364

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.