ಹೆಬ್ರಿ: ‘ಸರ್ಕಾರ ಸಂಬಳ ಕೊಡಲಿ ಬಿಡಲಿ ಪ್ರಾಮಾಣಿಕವಾಗಿ ಕೆಲಸ ಮಾಡುವ ವರ್ಗವಿದೆ. ಅಂಥವರಲ್ಲಿ ಮುಖ್ಯಶಿಕ್ಷಕ ಚಂದ್ರ ನಾಯ್ಕ್ ಒಬ್ಬರು. ದಾನಿಗಳ ಸಹಕಾರ ಪಡೆದು ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗೂ ಮೀರಿ ಬೆಳೆಸಿದ್ದಾರೆ. ಅವರ ಸೇವೆಯನ್ನು ಊರೇ ಕೊಂಡಾಡಿದೆ’ ಎಂದು ಶಿಕ್ಷಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಗಣಪತಿ ಕೆ. ಶಿವಮೊಗ್ಗ ಹೇಳಿದರು.

ನಿವೃತ್ತಿ ಹೊಂದಲಿರುವ ಕೋಟೇಶ್ವರ ಕರ್ನಾಟಕ ಪಬ್ಲಿಕ್ ಸ್ಕೂಲ್ನ ಮುಖ್ಯಶಿಕ್ಷಕ ಚಂದ್ರ ನಾಯ್ಕ್ ಅವರಿಗೆ ಕೋಟೇಶ್ವರ ಕೆಪಿಎಸ್ ಪ್ರಾಥಮಿಕ ವಿಭಾಗದ ಹಳೆವಿದ್ಯಾರ್ಥಿ ಸಂಘ, ಶತಮಾನೋತ್ಸವ ಸಮಿತಿ, ಪೋಷಕ ಸಮಿತಿ, ಕುಂದಾಪುರದ ಆನಗಳ್ಳಿ, ಬ್ರಹ್ಮಾವರದ ಶಿರಿಯಾರ ಕೊಳ್ಕೆಬೈಲು, ಹೆಬ್ರಿಯ ಶಿವಪುರ ನಾಯರಕೋಡು, ತೆಕ್ಕಟ್ಟೆಯ ಕುವೆಂಪು ಶತಮಾನೋತ್ಸವ ಸಮಿತಿ, ಬೈಂದೂರು ವಂಡ್ಸೆ ಶಾಲೆಗಳ ವತಿಯಿಂದ ಕೋಟೇಶ್ವರ ಕೆಪಿಎಸ್ನಲ್ಲಿ ಶನಿವಾರ ಆಯೋಜಿಸಿದ್ದ ‘ಬೆಳದಿಂಗಳು ಚಂದ್ರ ನಾಯ್ಕ್’ ಸಾರ್ವಜನಿಕ ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೆರ್ಡೂರು ಅನಂತ ಪದ್ಮನಾಭ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಪೆರ್ಡೂರು ಶಾಂತರಾಮ ಸೂಡ ಮಾತನಾಡಿದರು.

ಕೋಟೇಶ್ವರ ಕೆಪಿಎಸ್ ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜಗೋಪಾಲ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ಶತಮಾನೋತ್ಸವ ಸಮಿತಿ ಅಧ್ಯಕ್ಷ, ಉದ್ಯಮಿ ಶ್ರೀಧರ ವಿಠ್ಠಲ ಕಾಮತ್ ಮಾತನಾಡಿದರು. ಶಿಕ್ಷಕ ಚಂದ್ರ ನಾಯ್ಕ್ ಎಚ್., ಪತ್ನಿ ಲಕ್ಷ್ಮಿ, ಮಕ್ಕಳಾದ ಪ್ರಜ್ಞಾ, ಪ್ರಜ್ವಲ್ ಅವರನ್ನು ಗೌರವಿಸಲಾಯಿತು. ಚಂದ್ರ ನಾಯ್ಕ್ ಕರ್ತವ್ಯ ನಿರ್ವಹಿಸಿದ ಶಾಲೆಗಳ ಮುಖ್ಯಸ್ಥರು, ಪ್ರಮುಖರನ್ನು ಗೌರವಿಸಲಾಯಿತು. ಸಾಂಸ್ಕೃತಿಕ ಸಿಂಚನ, ‘ಕಂಸ ವಧೆ’ ಯಕ್ಷಗಾನ ಪ್ರದರ್ಶನ ನಡೆಯಿತು.

ಭಾಸ್ಕರ ಆಚಾರ್ಯ, ಮಲ್ಯಾಡಿ ಶಿವರಾಮ ಶೆಟ್ಟಿ, ಶಿರಿಯಾರ ಕೊಳ್ಕೆಬೈಲು ರವೀಂದ್ರ ನಾಥ ಶೆಟ್ಟಿ, ಶಂಕರ ಕಾಮತ್ ಕೋಟೇಶ್ವರ, ಗಜೇಂದ್ರ ಶೆಟ್ಟಿ, ಕೊಳ್ಕೆಬೈಲು ನಡುಮನೆ ಪ್ರಸಾದ ಶೆಟ್ಟಿ, ಆಟಕೆರೆ ವಿಶ್ವನಾಥ ಪೈ ಕೋಟೇಶ್ವರ, ರಂಗನಾಥ ಭಟ್, ವಿಠ್ಠಲದಾಸ್ ಭಟ್, ಹೆರೋಳ್ಳಿ ಕೃಷ್ಣ ಆಚಾರ್ಯ ನಿಟ್ಟೆ, ಗಣೇಶ ಕುಮಾರ್ ಶೆಟ್ಟಿ, ಹಂಗಳೂರಿನ ಹರೀಶ ಕುಮಾರ್ ಶೆಟ್ಟಿ, ದಿನೇಶ ನಾಯ್ಕ್, ಸುರೇಶ ಆಚಾರ್ಯ, ರತ್ನಾಕರ ಶೆಟ್ಟಿ ಚೋರಾಡಿ, ಭಾರತಿ ಮೂಡುಗೋಪಾಡಿ, ಪ್ರಕಾಶ ಶೆಟ್ಟಿ, ಸುಬ್ರಹ್ಮಣ್ಯ ಶೆಟ್ಟಿಗಾರ್, ವಿಶ್ವನಾಥ್, ಗುರುರಾಜ ರಾವ್ ಕೋಟೇಶ್ವರ, ಗೋಪಾಲಕೃಷ್ಣ ಕುಂಭಾಸಿ, ಅಶೋಕ್, ಶ್ರೀಧರ ಶೆಟ್ಟಿ ಆನಗಳ್ಳಿ, ಪೂರ್ಣಿಮಾ, ರವಿ ಕುಮಾರ್, ಪಾರ್ವತಿ ಮುದ್ದೋಡಿ, ಪ್ರಮೋದ್ ರೈ ಪಳಜ, ವಾಸುದೇವ ರಾವ್, ಯೂಸುಫ್ ಸಾಹೇಬ್, ಸುರೇಶ ಜೋಗಿ, ಕೃಷ್ಣದೇವ ಕಾರಂತ್ ಕೋಣಿ, ಶ್ರೀಧರ ನಾಯ್ಕ್, ನಾಗರಾಜ್, ಮಂಜುನಾಥ ಗಾಣಿಗ ಭಾಗವಹಿಸಿದ್ದರು.

ಮಮತಾ ಕಿಶೋರ್ ಅಭಿನಂದನಾ ಪತ್ರ ವಾಚಿಸಿದರು. ಮನೋಹರ ಪೈ ಪರಿಚಯಿಸಿದರು. ಕೃಷ್ಣ ಆಚಾರ್ಯ ನಿಟ್ಟೆ, ಪ್ರಸಾದ ಶೆಟ್ಟಿ ಕೊಳ್ಕೆಬೈಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಚೈತ್ರಾ ಬಿ. ಶೆಟ್ಟಿ ಸ್ವಾಗತಿಸಿದರು. ಶಶಿಧರ ಶೆಟ್ಟಿ ನಂಚಾರು ನಿರೂಪಿಸಿದರು. ಸುಮನಾ ವಂದಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260514-28-1208405317

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.